ಪ್ರಮಾಣವಚನ ಸ್ವೀಕರಿಸಿದ ಕೆಲ ಗಂಟೆಗಳಲ್ಲೇ ಕೇರಳದ ಏಕೈಕ BJP ಸಂಸದ ಸುರೇಶ್ ಗೋಪಿ ರಾಜಿನಾಮೆಗೆ ಮುಂದು!

ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೆ ಕೇಂದ್ರ ರಾಜ್ಯ ಸಚಿವ ಸುರೇಶ್ ಗೋಪಿ ಅವರು ತಮ್ಮ ಸ್ಥಾನದ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದು ರಾಜಿನಾಮೆಗೆ ಮುಂದಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರಮಾಣವಚನ ಸ್ವೀಕರಿಸಿದ ಕೆಲ ಗಂಟೆಗಳಲ್ಲೇ ಕೇರಳದ ಏಕೈಕ BJP ಸಂಸದ ಸುರೇಶ್ ಗೋಪಿ ರಾಜಿನಾಮೆಗೆ ಮುಂದು!
Updated on

ತಿರುವನಂತಪುರಂ: ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೆ ಕೇಂದ್ರ ರಾಜ್ಯ ಸಚಿವ ಸುರೇಶ್ ಗೋಪಿ ಅವರು ತಮ್ಮ ಸ್ಥಾನದ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದು ರಾಜಿನಾಮೆಗೆ ಮುಂದಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಮೋದಿ ಸರ್ಕಾರದಲ್ಲಿ ಸುರೇಶ್ ಗೋಪಿ ಅವರು ರಾಜ್ಯ ಸಚಿವ ಸ್ಥಾನವನ್ನು ವಹಿಸಿಕೊಳ್ಳಬೇಕೇ ಎಂಬ ಗೊಂದಲದಲ್ಲಿದ್ದಾರೆ. ನಿರೀಕ್ಷಿತ ಪಟ್ಟ ಸಿಗದಿರುವ ಬಗ್ಗೆ ಬಿಜೆಪಿ ಕೇಂದ್ರ ನಾಯಕರಿಗೆ ಸುರೇಶ್ ಗೋಪಿ ಅಸಮಾಧಾನ ವ್ಯಕ್ತಪಡಿಸಿದರು. ಮೋದಿ ಮತ್ತು ಅಮಿತ್ ಶಾ ಅವರೊಂದಿಗೆ ಹಾಟ್‌ಲೈನ್ ಸಂಬಂಧ ಹೊಂದಿರುವ ಕಾರಣ ಸುರೇಶ್ ಗೋಪಿ ಅವರೊಂದಿಗೆ ಉನ್ನತ ನಾಯಕರು ಮಾತನಾಡಬಹುದು. ಒಮ್ಮತ ಮೂಡದಿದ್ದಲ್ಲಿ ಸುರೇಶ್ ಗೋಪಿ ಸಚಿವ ಸ್ಥಾನದಿಂದ ಹಿಂದೆ ಸರಿಯಬಹುದು ಎಂದು ಹೇಳಲಾಗುತ್ತಿದೆ.

ಸಚಿವ ಸ್ಥಾನ ಬೇಡ ಎಂದು ಕೇಂದ್ರ ನಾಯಕತ್ವಕ್ಕೆ ತಿಳಿಸಲು ತಿರುವನಂತಪುರಕ್ಕೆ ತೆರಳಿದ್ದ ಸುರೇಶ್ ಗೋಪಿ ಅವರನ್ನು ಮೋದಿ ವಾಪಸ್ ಕರೆಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಮೋದಿಯವರ ಕರೆ ಸ್ವೀಕರಿಸಿದ ಸುರೇಶ್ ಗೋಪಿ ಅವರು ಸಂಪುಟ ಸ್ಥಾನ ಅಥವಾ ಸ್ವತಂತ್ರ ಉಸ್ತುವಾರಿ ಹೊಂದಿರುವ ರಾಜ್ಯ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದರು. ಕೇರಳದಲ್ಲಿ ಅರಳಿದ ಕಮಲಕ್ಕೆ ತಕ್ಕಷ್ಟು ಸ್ಥಾನಮಾನ ಸಿಗಲಿಲ್ಲ ಎನ್ನುವುದು ಸುರೇಶ್ ಗೋಪಿ ನಿಲುವಾಗಿದೆ. ಅದೇನೇ ಇರಲಿ, ಸುರೇಶ್ ಗೋಪಿ ಹುದ್ದೆಯ ಅಸಮಾಧಾನ ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಇರಿಸುಮುರಿಸು ಉಂಟಾಗಿದೆ.

ಪ್ರಮಾಣವಚನ ಸ್ವೀಕರಿಸಿದ ಕೆಲ ಗಂಟೆಗಳಲ್ಲೇ ಕೇರಳದ ಏಕೈಕ BJP ಸಂಸದ ಸುರೇಶ್ ಗೋಪಿ ರಾಜಿನಾಮೆಗೆ ಮುಂದು!
ನೂತನ NDA ಸರ್ಕಾರದಲ್ಲಿ ಕೇರಳಕ್ಕೆ ಎರಡೆರಡು ಸಚಿವ ಸ್ಥಾನ: ಮೋದಿ ಸಂಪುಟ ಸೇರುತ್ತಿರುವ ಕ್ರೈಸ್ತ ಧರ್ಮಿಯ ಜಾರ್ಜ್ ಕುರಿಯನ್ ಯಾರು?

ಕೇರಳಕ್ಕೆ ಎರಡು ರಾಜ್ಯ ಸಚಿವ ಸ್ಥಾನ

ಕೇರಳದಲ್ಲಿ ಇಬ್ಬರು ಕೇಂದ್ರ ಸಚಿವರಿದ್ದಾರೆ. ರಾಷ್ಟ್ರಪತಿ ಭವನದ ಅಂಗಳದಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ಸುರೇಶ್ ಗೋಪಿ ಮತ್ತು ಜಾರ್ಜ್ ಕುರಿಯನ್ ಪ್ರಮಾಣ ವಚನ ಸ್ವೀಕರಿಸಿದರು. ಪ್ರಮಾಣ ವಚನ ಸ್ವೀಕರಿಸುವವರೆಗೂ ಈ ಸ್ಥಾನ ಗೌಪ್ಯವಾಗಿತ್ತು. ಮೋದಿ ಕರೆ ಮಾಡಿದ ನಂತರ ಸುರೇಶ್ ಗೋಪಿ ತಿರುವನಂತಪುರದಿಂದ ಕುಟುಂಬ ಸಮೇತ ದೆಹಲಿಗೆ ಬಂದಿದ್ದರು. ಬೆಳಗ್ಗೆ ದೆಹಲಿಯ ಕೇರಳ ಹೌಸ್ ತಲುಪಿದ ಜಾರ್ಜ್ ಕುರಿಯನ್ ಮಾಹಿತಿ ಗೌಪ್ಯವಾಗಿಟ್ಟಿದ್ದರು. ಪ್ರಧಾನಿ ನಿವಾಸದಲ್ಲಿ ನಡೆದ ಟೀ ಪಾರ್ಟಿಯಲ್ಲಿ ಪಾಲ್ಗೊಂಡ ಬಳಿಕ ಸಂಪುಟಕ್ಕೆ ತೆರಳುತ್ತಿರುವುದು ಸ್ಪಷ್ಟವಾಯಿತು. ತ್ರಿಶೂರ್ ನಲ್ಲಿ ಸುರೇಶ್ ಗೋಪಿ ಗೆಲುವಿನಲ್ಲಿ ಕ್ರಿಶ್ಚಿಯನ್ ಸಮುದಾಯದಿಂದ ದೊರೆತ ಬೆಂಬಲಕ್ಕೆ ಜಾರ್ಜ್ ಕುರಿಯನ್ ಅವರು ಮಂತ್ರಿಮಂಡಲಕ್ಕೆ ಸೇರುವ ಅವಕಾಶ ಸಿಕ್ಕಿದೆ. ಮಣಿಪುರ ಘಟನೆಯ ನಂತರ, ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಉಪಾಧ್ಯಕ್ಷರಾಗಿದ್ದ ಜಾರ್ಜ್ ಕುರಿಯನ್ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಪರಸ್ಪರ ದೂರವಾಗಿದ್ದ ಕ್ರೈಸ್ತ ಸಮುದಾಯಕ್ಕೆ ಹತ್ತಿರವಾಗುವ ಗುರಿ ಬಿಜೆಪಿಯದ್ದಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com