Air India ವಿಮಾನದ ಊಟದಲ್ಲಿ ಮೆಟಲ್‌ ಬ್ಲೇಡ್ ಪತ್ತೆ, ಪ್ರಯಾಣಿಕರ ಆಕ್ರೋಶ; ಪ್ರತಿಕ್ರಿಯೆ ನೀಡಿದ ವಿಮಾನಯಾನ ಸಂಸ್ಥೆ!

ಖ್ಯಾತ ವಿಮಾನಯಾನ ಸಂಸ್ಥೆ ಏರ್ ಇಂಡಿಯಾದ ಪ್ರಯಾಣಿಕರೊಬ್ಬರ ಊಟದಲ್ಲಿ ಮೆಟಲ್‌ ಬ್ಲೇಡ್ ಪತ್ತೆಯಾಗಿದ್ದು, ಈ ಕುರಿತು ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಏರ್ ಇಂಡಿಯಾ ವಿಮಾನದ ಆಹಾರದಲ್ಲಿ ಬ್ಲೇಡ್ ಪತ್ತೆ
ಏರ್ ಇಂಡಿಯಾ ವಿಮಾನದ ಆಹಾರದಲ್ಲಿ ಬ್ಲೇಡ್ ಪತ್ತೆ

ನವದೆಹಲಿ: ಖ್ಯಾತ ವಿಮಾನಯಾನ ಸಂಸ್ಥೆ ಏರ್ ಇಂಡಿಯಾದ ಪ್ರಯಾಣಿಕರೊಬ್ಬರ ಊಟದಲ್ಲಿ ಮೆಟಲ್‌ ಬ್ಲೇಡ್ ಪತ್ತೆಯಾಗಿದ್ದು, ಈ ಕುರಿತು ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೌದು.. ಏರ್‌ ಇಂಡಿಯಾ ವಿಮಾನದಲ್ಲಿ ಆರ್ಡರ್‌ ಮಾಡಿದ ಊಟದಲ್ಲಿ (Air India Food) ಮೆಟಲ್‌ ಬ್ಲೇಡ್‌ (Metal Blade) ಸಿಕ್ಕಿದ್ದು, ಊಟ ಆರ್ಡರ್‌ ಮಾಡಿದ ವ್ಯಕ್ತಿಯು ಕಂಗಾಲಾಗಿದ್ದಾರೆ. ಏರ್ ಇಂಡಿಯಾ ಎಐ 175 ಸಂಖ್ಯೆಯ ವಿಮಾನ ಬೆಂಗಳೂರಿನಿಂದ ಸ್ಯಾನ್ ಫ್ರಾನ್ಸಿಸ್ಕೋ ನಿಲ್ದಾಣಕ್ಕೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ.

ಮ್ಯಾಥ್ಯೂರಸ್‌ ಪೌಲ್‌ ಎಂಬ ಪತ್ರಕರ್ತ ಬೆಂಗಳೂರಿನಿಂದ ಸ್ಯಾನ್‌ ಪ್ರಾನ್ಸಿಸ್ಕೋಗೆ ಏರ್‌ ಇಂಡಿಯಾ ವಿಮಾನದಲ್ಲಿ ತೆರಳುವಾಗ ಅವರಿಗೆ ಇಂತಹ ಭೀಕರ ಅನುಭವವಾಗಿದ್ದು, ತಮಗಾದ ಅನುಭವವನ್ನು, ಮೆಟಲ್‌ ಬ್ಲೇಡ್‌ ಫೋಟೊವನ್ನು ಪ್ರಯಾಣಿಕ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

“ಏರ್‌ ಇಂಡಿಯಾ ವಿಮಾನದಲ್ಲಿ ನಾನು ಆರ್ಡರ್‌ ಮಾಡಿದ ಸ್ವೀಟ್‌ ಪೊಟ್ಯಾಟೋ ಹಾಗೂ ಫಿಗ್‌ ಚಾಟ್‌ನಲ್ಲಿ ಬ್ಲೇಡ್‌ ರೀತಿ ಇರುವ ಮೆಟಲ್‌ ತುಣುಕು ಪತ್ತೆಯಾಗಿದೆ. ಅದೃಷ್ಟವಶಾತ್‌ ಇದರಿಂದ ನನಗೆ ಯಾವುದೇ ತೊಂದರೆ ಆಗಿಲ್ಲ. ಆದರೆ, ಏರ್‌ ಇಂಡಿಯಾ ಕೆಟರಿಂಗ್‌ ಸರ್ವಿಸ್‌ ಬಗ್ಗೆ ನನಗೆ ಇದ್ದ ಗೌರವ ಕಡಿಮೆಯಾಗಿದೆ” ಎಂದು ಪೋಸ್ಟ್‌ ಮಾಡಿದ್ದಾರೆ.

ಪ್ರತಿಕ್ರಿಯಿಸಿದ ಏರ್ ಇಂಡಿಯಾ

ಇನ್ನು ಮ್ಯಾಥ್ಯೂರಸ್‌ ಪೌಲ್‌ರ ಪೋಸ್ಟ್ ವೈರಲ್ ಆಗುತ್ತದೇ ಈ ಕುರಿತು ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆಯು ಪ್ರತಿಕ್ರಿಯಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಏರ್ ಇಂಡಿಯಾ “ನಿಮಗೆ ಇಂತಹ ಕೆಟ್ಟ ಅನುಭವ ಆಗಿದ್ದಕ್ಕೆ ಕ್ಷಮೆ ಇರಲಿ. ನಾವು ಪ್ರಯಾಣಿಕರಿಗೆ ಸೇವೆ ನೀಡಬೇಕು ಎಂಬ ನಿರ್ದಿಷ್ಟ ಗುರಿ ಹೊಂದಿದ್ದು, ಆ ಗುರಿಗೆ ಇದು ಧಕ್ಕೆ ತರುವಂತಿದೆ.

ಸೇವೆಯಲ್ಲಿ ಸಮಸ್ಯೆಯಾಗಿರುವುದಕ್ಕೆ ಕ್ಷಮೆ ಇರಲಿ. ನಾವು ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳುತ್ತೇವೆ” ಎಂದು ಹೇಳಿದೆ.

ಏರ್ ಇಂಡಿಯಾ ವಿಮಾನದ ಆಹಾರದಲ್ಲಿ ಬ್ಲೇಡ್ ಪತ್ತೆ
ಮುಂಬೈ: ಆನ್ ಲೈನ್ ನಲ್ಲಿ ತರಿಸಿದ್ದ cone ಐಸ್ ಕ್ರೀಮ್ ನಲ್ಲಿ ಮಾನವನ ಬೆರಳು ಪತ್ತೆ!

ಈ ಬಗ್ಗೆ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಏರ್ ಇಂಡಿಯಾದ ಕಸ್ಟಮರ್ ಎಕ್ಸ್ ಪೀರಿಯನ್ಸ್ ಆಫೀಸರ್ ರಾಜೇಶ್ ಡೋಗ್ರಾ, ''ವಿಚಾರ ನಮ್ಮ ಗಮನಕ್ಕೂ ಬಂದಿದೆ. ಇದು ನಮ್ಮ ಅಡುಗೆ ಪಾಲುದಾರರ ಸೌಲಭ್ಯಗಳಲ್ಲಿ ಬಳಸಲಾದ ತರಕಾರಿ ಸಂಸ್ಕರಣಾ ಯಂತ್ರದಿಂದ ಬಂದಿದೆ ಎಂದು ಗುರುತಿಸಲಾಗಿದೆ. ಕೂಡಲೇ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಭವಿಷ್ಯದಲ್ಲಿ ಇದು ಪುನರಾವರ್ತನೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com