ಭಾರತದಲ್ಲಿ ವಾಯು ಮಾಲಿನ್ಯದಿಂದ 2.1 ಮಿಲಿಯನ್ ಜನ ಸಾವು!

2021ರಲ್ಲಿ ವಾಯು ಮಾಲಿನ್ಯವು ವಿಶ್ವಾದ್ಯಂತ 8.1 ಮಿಲಿಯನ್ ಜನರ ಸಾವಿಗೆ ಕಾರಣವಾಗಿದೆ.
ದೆಹಲಿ ವಾಯು ಮಾಲಿನ್ಯ
ದೆಹಲಿ ವಾಯು ಮಾಲಿನ್ಯ
Updated on

ನವದೆಹಲಿ: 2021ರಲ್ಲಿ ವಾಯು ಮಾಲಿನ್ಯವು ವಿಶ್ವಾದ್ಯಂತ 8.1 ಮಿಲಿಯನ್ ಜನರ ಸಾವಿಗೆ ಕಾರಣವಾಗಿದೆ. ಭಾರತ ಮತ್ತು ಚೀನಾದಲ್ಲಿ ಕ್ರಮವಾಗಿ 2.1 ಮಿಲಿಯನ್ ಮತ್ತು 2.3 ಮಿಲಿಯನ್ ಜನರ ಸಾವಿಗೆ ಕಾರಣವಾಗಿದೆ ಎಂದು ಬುಧವಾರ ಬಿಡುಗಡೆಯಾದ ವರದಿಯೊಂದು ತಿಳಿಸಿದೆ.

UNICEF ಸಹಭಾಗಿತ್ವದಲ್ಲಿ US ಮೂಲದ ಸ್ವತಂತ್ರ ಸಂಶೋಧನಾ ಸಂಸ್ಥೆಯಾದ ಹೆಲ್ತ್ ಎಫೆಕ್ಟ್ಸ್ ಇನ್‌ಸ್ಟಿಟ್ಯೂಟ್(HEI) ಪ್ರಕಟಿಸಿದ ವರದಿಯಲ್ಲಿ 2021 ರಲ್ಲಿ ಭಾರತದಲ್ಲಿ ಐದು ವರ್ಷದೊಳಗಿನ 1,69,400 ಮಕ್ಕಳ ಸಾವಿಗೆ ವಾಯು ಮಾಲಿನ್ಯ ಕಾರಣವಾಗಿದೆ ಎಂದು ಹೇಳಿದೆ.

ನೈಜೀರಿಯಾದಲ್ಲಿ 1,14,100 ಮಕ್ಕಳ ಸಾವು, ಪಾಕಿಸ್ತಾನದಲ್ಲಿ 68,100, ಇಥಿಯೋಪಿಯಾದಲ್ಲಿ 31,100 ಮತ್ತು ಬಾಂಗ್ಲಾದೇಶದಲ್ಲಿ 19,100 ಮಕ್ಕಳ ಸಾವಿಗೆ ವಾಯು ಮಾಲಿನ್ಯ ಕಾರಣವಾಗಿದೆ ಎಂದು ವರದಿ ಉಲ್ಲೇಖಿಸಿದೆ.

ದೆಹಲಿ ವಾಯು ಮಾಲಿನ್ಯ
ರಾಜ್ಯದ ವಿವಿಧ ನಗರಗಳಲ್ಲಿನ ವಾಯು ಮಾಲಿನ್ಯ ತಗ್ಗಿಸಲು ನಾಲ್ಕು ಅಂಶಗಳ ಪ್ರಸ್ತಾವನೆ! 

ದಕ್ಷಿಣ ಏಷ್ಯಾದಲ್ಲಿ ಜನರ ಸಾವಿಗೆ ವಾಯು ಮಾಲಿನ್ಯವು ಪ್ರಮುಖ ಅಪಾಯಕಾರಿ ಅಂಶವಾಗಿದೆ ಎಂದು ವರದಿ ಹೇಳಿದೆ. ವಾಯು ಮಾಲಿನ್ಯದ ನಂತರ ಅಧಿಕ ರಕ್ತದೊತ್ತಡ, ಆಹಾರ ಮತ್ತು ತಂಬಾಕು ಜನರ ಸಾವಿಗೆ ಇತರ ಕಾರಣಗಳಾಗಿವೆ ಎಂದು

ವರದಿ ತಿಳಿಸಿದೆ.

"2021 ರಲ್ಲಿ ಈ ಹಿಂದಿನ ವರ್ಷಗಳಿಗಿಂತ ಅತಿ ಹೆಚ್ಚಿನ ಸಾವುಗಳು ವಾಯುಮಾಲಿನ್ಯಕ್ಕೆ ಸಂಬಂಧಿಸಿವೆ. ತಲಾ 1 ಶತಕೋಟಿ ಜನಸಂಖ್ಯೆಯೊಂದಿಗೆ, ಭಾರತ (2.1 ಮಿಲಿಯನ್ ಸಾವುಗಳು) ಮತ್ತು ಚೀನಾ (2.3 ಮಿಲಿಯನ್ ಸಾವುಗಳು)ದಲ್ಲಿಯೇ ಜಗತ್ತಿನ ಶೇ. 54 ರಷ್ಟು ಜನರ ಸಾವಿಗೆ ಕಾರಣವಾಗಿದೆ".

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com