Raahovan: ರಾಮಾಯಣ ಅವಹೇಳನ ನಾಟಕ ಮಾಡಿದ ವಿದ್ಯಾರ್ಥಿಗಳಿಗೆ IIT Bombay 1.2 ಲಕ್ಷ ರೂ. ದಂಡ!

"ಸ್ತ್ರೀವಾದವನ್ನು ಉತ್ತೇಜಿಸುವ" ಸೋಗಿನಲ್ಲಿ ನಾಟಕವು ರಾಮ, ಲಕ್ಷ್ಮಣ ಸೇರಿದಂತೆ ಪ್ರಮುಖ ಪಾತ್ರಗಳನ್ನು ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಅಪಹಾಸ್ಯ ಮಾಡಿದೆ ಎಂದು ಕೆಲವು ವಿದ್ಯಾರ್ಥಿಗಳು ಆರೋಪಿಸಿದ್ದರು.
Raahovan
ಐಐಟಿ ಬಾಂಬೇ ವಿದ್ಯಾರ್ಥಿಗಳಿಂದ ರಾಹೋವನ ನಾಟಕ
Updated on

ಮುಂಬೈ: ಹಿಂದೂಗಳ ಪವಿತ್ರ ಗ್ರಂಥ ರಾಮಾಯಣವನ್ನು ಅವಹೇಳನ ಮಾಡುವ ರೀತಿಯಲ್ಲಿ ಸ್ಕಿಟ್ ಮಾಡಿದ್ದ ವಿದ್ಯಾರ್ಥಿಗಳಿಗೆ ಐಐಟಿ ಬಾಂಬೇ 1.2ಲಕ್ಷ ರೂ ದಂಡ ಹೇರಿದೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಬಾಂಬೆ ಮಾರ್ಚ್ 31 ರಂದು ಪರ್ಫಾರ್ಮಿಂಗ್ ಆರ್ಟ್ಸ್ ಫೆಸ್ಟಿವಲ್ (ಪಿಎಎಫ್) ಆಯೋಜಿಸಿತ್ತು. ಈ ಸಂದರ್ಭದಲ್ಲಿ ರಾಮಾಯಣದ ವಿಡಂಬನೆ ಎಂದು ಹೇಳಲಾದ 'ರಾಹೋವನ' ಶೀರ್ಷಿಕೆಯ ವಿವಾದಾತ್ಮಕ ನಾಟಕವನ್ನು ಪ್ರದರ್ಶಿಸಿದ ಎಂಟು ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ದಂಡ ವಿಧಿಸಿದೆ.

Raahovan
ಬೀದರ್: ನಾಟಕ ಪ್ರಾಕ್ಟೀಸ್ ವೇಳೆ ಜೈ ಶ್ರೀರಾಮ್ ಘೋಷಣೆ; ಅನ್ಯ ಕೋಮಿನ ವಿದ್ಯಾರ್ಥಿಗಳಿಂದ ಹಲ್ಲೆ, ಪರಿಸ್ಥಿತಿ ಉದ್ವಿಗ್ನ

ಈ ನಾಟಕದಲ್ಲಿ ಹಿಂದೂಗಳು ಪೂಜ್ಯನೀಯ ಎಂದು ಭಾವಿಸುವ ಹಿಂದೂ ಮಹಾಕಾವ್ಯ ರಾಮಾಯಣವನ್ನು ಮತ್ತು ಅದರಲ್ಲಿನ ಪಾತ್ರಗಳನ್ನು ಸಡಿಲವಾಗಿ ಚಿತ್ರಿಸಲಾಗಿದ್ದು, ಹಿಂದೂ ನಂಬಿಕೆಗಳು ಮತ್ತು ದೇವತೆಗಳ ಬಗ್ಗೆ ಅವಹೇಳನಕಾರಿ ಉಲ್ಲೇಖಗಳನ್ನು ಮಾಡಲಾಗಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳ ಒಂದು ವಿಭಾಗವು ನಾಟಕದ ವಿರುದ್ಧ ಔಪಚಾರಿಕವಾಗಿ ದೂರು ನೀಡಿತ್ತು.

"ಸ್ತ್ರೀವಾದವನ್ನು ಉತ್ತೇಜಿಸುವ" ಸೋಗಿನಲ್ಲಿ ನಾಟಕವು ರಾಮ, ಲಕ್ಷ್ಮಣ ಸೇರಿದಂತೆ ಪ್ರಮುಖ ಪಾತ್ರಗಳನ್ನು ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಅಪಹಾಸ್ಯ ಮಾಡಿದೆ ಎಂದು ಕೆಲವು ವಿದ್ಯಾರ್ಥಿಗಳು ಆರೋಪಿಸಿದ್ದರು. ಇದೇ ದೂರಿನ ಆಧಾರದ ಮೇಲೆ ಮೇ 8 ರಂದು ಐಐಟಿ ಬಾಂಬೆ ಶಿಸ್ತು ಸಮಿತಿ ಸಭೆ ಕರೆದಿತ್ತು. ಇದರ ಪರಿಣಾಮವಾಗಿ ಜೂನ್ 4 ರಂದು ಸ್ಕಿಟ್ ಮಾಡಿದ್ದ ತಂಡಕ್ಕೆ 1.2ಲಕ್ಷ ರೂ ದಂಡ ಹೇರಿದೆ.

ಸಂಸ್ಥೆಯು ನಾಲ್ಕು ವಿದ್ಯಾರ್ಥಿಗಳಿಗೆ ತಲಾ 1.2 ಲಕ್ಷ ದಂಡವನ್ನು ವಿಧಿಸಿದ್ದು, ಮೊತ್ತವು ಸೆಮಿಸ್ಟರ್‌ನ ಬೋಧನಾ ಶುಲ್ಕದಂತೆಯೇ ಇರುತ್ತದೆ. ಉಳಿದ ನಾಲ್ವರು ವಿದ್ಯಾರ್ಥಿಗಳಿಗೆ ತಲಾ 40,000 ದಂಡ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.

ದಂಡ ಮಾತ್ರವಲ್ಲದೇ ನಾಟಕ ಮಾಡಿದ್ದ ಪದವೀಧರ ವಿದ್ಯಾರ್ಥಿಗಳಿ ಹೆಚ್ಚುವರಿ ನಿರ್ಬಂಧಗಳನ್ನು ಕೂಡ ಹೇರಲಾಗಿದ್ದು, ವಿದ್ಯಾರ್ಥಿಗಳಿಗೆ ನೀಡಲಾಗುವ ಸಂಸ್ಥೆಯ ಜಿಮ್ಖಾನಾ ಪ್ರಶಸ್ತಿಗಳ ನಿಷೇಧವೂ ಸೇರಿದಂತೆ ಕಿರಿಯ ವಿದ್ಯಾರ್ಥಿಗಳನ್ನು ಹಾಸ್ಟೆಲ್ ಸೌಲಭ್ಯಗಳಿಂದ ಡಿಬಾರ್ ಮಾಡಲಾಗಿದೆ. ಅಲ್ಲದೆ ಜುಲೈ 20, 2024 ರಂದು ವಿದ್ಯಾರ್ಥಿ ವ್ಯವಹಾರಗಳ ಡೀನ್ ಕಛೇರಿಯಲ್ಲಿ ದಂಡವನ್ನು ಪಾವತಿಸಬೇಕಾಗುತ್ತದೆ. ಈ ದಂಡದ ಯಾವುದೇ ಉಲ್ಲಂಘನೆಯು ಮತ್ತಷ್ಟು ನಿರ್ಬಂಧಗಳಿಗೆ ಕಾರಣವಾಗುತ್ತದೆ ಎಂದು ಸಂಸ್ಥೆ ಎಚ್ಚರಿಸಿದೆ.

Raahovan
‘ತಿಹಾರ್​​​​ ಕ್ಲಬ್​​​ಗೆ ಸ್ವಾಗತ.. ನಿಮ್ಮ ಎಲ್ಲ ನಾಟಕ ಬಂದ್.. ನಿಮ್ಮ ವಿರುದ್ಧ ಸಾಕ್ಷ್ಯ ಹೇಳುತ್ತೇನೆ': ಕೇಜ್ರಿವಾಲ್ ವಿರುದ್ಧ ಸುಕೇಶ್ ಚಂದ್ರಶೇಖರ್

ಸಾಮಾಜಿಕ ಜಾಲತಾಣಗಳಲ್ಲಿ ಸ್ಕಿಟ್ ವೈರಲ್

ಇನ್ನು ‘ರಾವೋಹಣ’ದ ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಕಲಾತ್ಮಕ ಸ್ವಾತಂತ್ರ್ಯ ಮತ್ತು ಧಾರ್ಮಿಕ ಸಂವೇದನೆಗಳ ಬಗ್ಗೆ ಭಾರಿ ಚರ್ಚೆ ಹುಟ್ಟುಹಾಕಿದೆ. ನಾಟಕವು ಹಿಂದೂ ನಂಬಿಕೆಗಳ ಅವಹೇಳನಕಾರಿ ಉಲ್ಲೇಖಗಳನ್ನು ಒಳಗೊಂಡಿದ್ದು, ರಾಮನನ್ನು ‘ದೆವ್ವ’ ಎಂದು ಚಿತ್ರಿಸಲಾಗಿದೆ. ಸೀತಾ, ರಾಮ ಮತ್ತು ಲಕ್ಷ್ಮಣನ ಪಾತ್ರಗಳಲ್ಲಿ ಅನುಚಿತ ಭಾಷೆ ಮತ್ತು ಸನ್ನೆಗಳನ್ನು ಬಳಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com