ನೋಯ್ಡಾ ಸುಳ್ಳು ಸುದ್ದಿ ಪ್ರಕರಣ: ಸಾಮಾಜಿಕ ಜಾಲತಾಣ influencer ಅಜಿತ್ ಭಾರ್ತಿಗೆ ಬೆಂಗಳೂರು ಪೊಲೀಸ್ ನೊಟೀಸ್

ಅಯೋಧ್ಯೆಯ ರಾಮ ಮಂದಿರ ವಿಚಾರವಾಗಿ ಸುಳ್ಳು ಸುದ್ದಿ ಹಂಚುತ್ತಿದ್ದ ಆರೋಪದಲ್ಲಿ ಸಾಮಾಜಿಕ ಜಾಲತಾಣ influencer ಅಜಿತ್ ಭಾರ್ತಿ ವಿರುದ್ಧ FIR ದಾಖಲಾಗುತ್ತಿದ್ದಂತೆಯೇ ಬೆಂಗಳೂರಿನ ಪೊಲೀಸರು ಆತನಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಗುರುವಾರ ನೊಟೀಸ್ ಜಾರಿಗೊಳಿಸಿದ್ದಾರೆ.
file pic
ಅಜಿತ್ ಭಾರ್ತಿonline desk

ಬೆಂಗಳೂರು: ಅಯೋಧ್ಯೆಯ ರಾಮ ಮಂದಿರ ವಿಚಾರವಾಗಿ ಸುಳ್ಳು ಸುದ್ದಿ ಹಂಚುತ್ತಿದ್ದ ಆರೋಪದಲ್ಲಿ ಸಾಮಾಜಿಕ ಜಾಲತಾಣ influencer ಅಜಿತ್ ಭಾರ್ತಿ ವಿರುದ್ಧ FIR ದಾಖಲಾಗುತ್ತಿದ್ದಂತೆಯೇ ಬೆಂಗಳೂರಿನ ಪೊಲೀಸರು ಆತನಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಗುರುವಾರ ನೊಟೀಸ್ ಜಾರಿಗೊಳಿಸಿದ್ದಾರೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ದೂರಿನ ಆಧಾರದಲ್ಲಿ ಅಜಿತ್ ಭಾರ್ತಿ ವಿರುದ್ಧ ಪ್ರಕರಣ ದಾಖಲಾಗಿದೆ. ಜೂ.13 ರಂದು ಭಾರ್ತಿ ತಮ್ಮ ಸಾಮಾಜಿಕ ಜಾಲತಾಣಾ ಪೋಸ್ಟ್ ನಲ್ಲಿ ಹಾಕಿದ್ದ ವೀಡಿಯೋದಲ್ಲಿ, ರಾಹುಲ್ ಗಾಂಧಿ ರಾಮ ಮಂದಿರದ ಜಾಗದಲ್ಲಿ ಮತ್ತೆ ಬಾಬ್ರಿ ಮಸೀದಿ ತರುವ ಇರಾದೆ ಹೊಂದಿದ್ದಾರೆ ಎಂಬ ಹೇಳಿಕೆ ನೀಡಿದ್ದಾರೆಂದು ಬಿಂಬಿಸಿದ್ದರು.

ಇದು ರಾಹುಲ್ ಗಾಂಧಿ ಬಗ್ಗೆ ಸುಳ್ಳು ಪ್ರಚಾರವಾಗಿದ್ದು, ಆ ರೀತಿಯ ಹೇಳಿಕೆಗಳನ್ನು ರಾಹುಲ್ ಗಾಂಧಿ ಎಲ್ಲಿಯೂ ನೀಡಿಲ್ಲ ಎಂದು ಕಾಂಗ್ರೆಸ್ ಪೊಲೀಸರಿಗೆ ದೂರು ನೀಡಿತ್ತು. ನೋಯ್ಡಾದಲ್ಲಿರುವ ಭಾರ್ತಿ ಮನೆಗೆ ಭೇಟಿ ನೀಡಿದ ಬೆಂಗಳೂರು ಪೊಲೀಸ್ ತಂಡ, ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ಜಾರಿ ಮಾಡಿದೆ.

file pic
ಅದು ಸುಳ್ಳು ಸುದ್ದಿ... ಸಚಿವ ಸಂಪುಟಕ್ಕೆ ರಾಜೀನಾಮೆ ನೀಡುವುದಿಲ್ಲ: ಕೇಂದ್ರ ಸಚಿವ Suresh Gopi

ಕೆಪಿಸಿಸಿ (ಕಾನೂನು ಕೋಶ) ಕಾರ್ಯದರ್ಶಿ ವಕೀಲ ಬಿ ಕೆ ಬೋಪಣ್ಣ ಅವರು ನೀಡಿದ ದೂರಿನ ಆಧಾರದ ಮೇಲೆ ಭಾರ್ತಿ ವಿರುದ್ಧ ಜೂನ್ 15 ರಂದು ಭಾರತೀಯ ದಂಡ ಸಂಹಿತೆ ಸೆಕ್ಷನ್ 153 ಎ (ಧರ್ಮ, ಜನಾಂಗ, ಜನ್ಮಸ್ಥಳದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು, ವಾಸ, ಭಾಷೆ, ಇತ್ಯಾದಿ, ಮತ್ತು ಸೌಹಾರ್ದತೆ ಕಾಪಾಡಲು ಪೂರ್ವಾಗ್ರಹ ಪೀಡಿತ ಕೃತ್ಯಗಳನ್ನು ಮಾಡುವುದು) ಮತ್ತು 505 (2) (ವರ್ಗಗಳ ನಡುವೆ ದ್ವೇಷ, ದ್ವೇಷ ಅಥವಾ ದ್ವೇಷವನ್ನು ಸೃಷ್ಟಿಸುವ ಅಥವಾ ಉತ್ತೇಜಿಸುವ ಹೇಳಿಕೆಗಳು) ಆರೋಪದಡಿ ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com