Video: 'ಬೇಟಿ ಬಚಾವೋ, ಬೇಟಿ ಪಢಾವೋ' ಘೋಷಣೆ ತಪ್ಪಾಗಿ ಬರೆದ ಕೇಂದ್ರ ಸಚಿವೆ Savitri Thakur: ಕಾಂಗ್ರೆಸ್ ಟೀಕೆ

'ಬೇಟಿ ಬಚಾವೋ, ಬೇಟಿ ಪಢಾವೋ' ಘೋಷಣೆಯನ್ನು ತಪ್ಪಾಗಿ ಬರೆಯುವ ಮೂಲಕ ಇತ್ತೀಚೆಗಷ್ಟೇ ಕೇಂದ್ರ ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಾವಿತ್ರಿ ಠಾಕೂರ್ ಇದೀಗ ನಗೆಪಾಟಲಿಗೀಡಾಗಿದ್ದಾರೆ.
Video: 'ಬೇಟಿ ಬಚಾವೋ, ಬೇಟಿ ಪಢಾವೋ' ಘೋಷಣೆ ತಪ್ಪಾಗಿ ಬರೆದ ಕೇಂದ್ರ ಸಚಿವೆ Savitri Thakur: ಕಾಂಗ್ರೆಸ್ ಟೀಕೆ

ಭೋಪಾಲ್: 'ಬೇಟಿ ಬಚಾವೋ, ಬೇಟಿ ಪಢಾವೋ' ಘೋಷಣೆಯನ್ನು ತಪ್ಪಾಗಿ ಬರೆಯುವ ಮೂಲಕ ಇತ್ತೀಚೆಗಷ್ಟೇ ಕೇಂದ್ರ ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಾವಿತ್ರಿ ಠಾಕೂರ್ ಇದೀಗ ನಗೆಪಾಟಲಿಗೀಡಾಗಿದ್ದಾರೆ.

ಹೌದು...ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ರಾಜ್ಯ ಸಚಿವರಾಗಿರುವ ಸಾವಿತ್ರಿ ಠಾಕೂರ್ ಕೇಂದ್ರ ಸರ್ಕಾರದ ಜನಪ್ರಿಯ ಘೋಷಣೆಯಾದ 'ಬೇಟಿ ಬಚಾವೋ, ಬೇಟಿ ಪಢಾವೋ' ಸಾಲನ್ನು ಬಿಳಿ ಬೋರ್ಡ್ ಮೇಲೆ ಬರೆಯುವ ಪ್ರಯತ್ನದಲ್ಲಿ ತಪ್ಪಾಗಿ ಬರೆದು ಎಡವಟ್ಟು ಮಾಡಿಕೊಂಡಿದ್ದಾರೆ.

ಮಧ್ಯಪ್ರದೇಶದ ಧರ್‌ನಲ್ಲಿ ಬುಧವಾರ 'ಸ್ಕೂಲ್ ಚಲೋ ಅಭಿಯಾನ'ದ ಅಡಿ ನಡೆದ ಕಾರ್ಯಕ್ರಮದಲ್ಲಿ ಸಚಿವೆ ಸಾವಿತ್ರಿ ಠಾಕೂರ್ ಅವರು ಘೋಷಣೆಯನ್ನು ಹಿಂದಿಯಲ್ಲಿ ತಪ್ಪಾಗಿ ಬರೆದಿದ್ದು, 'ಬೇಟಿ ಬಚಾವೋ, ಬೇಟಿ ಪಢಾವೋ' ಎಂಬ ಘೋಷಣೆಯನ್ನು 'ಬೆಡ್ಡಿ ಪಢಾವೊ ಬಚಾವೊ' ಎಂದು ತಪ್ಪಾಗಿ ಬರೆದಿದ್ದಾರೆ. ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

Video: 'ಬೇಟಿ ಬಚಾವೋ, ಬೇಟಿ ಪಢಾವೋ' ಘೋಷಣೆ ತಪ್ಪಾಗಿ ಬರೆದ ಕೇಂದ್ರ ಸಚಿವೆ Savitri Thakur: ಕಾಂಗ್ರೆಸ್ ಟೀಕೆ
ಶ್ರದ್ಧಾ ವಾಕರ್ ಹತ್ಯೆ: ಬೇಟಿ ಬಚಾವೋ ಸಭೆಯಲ್ಲಿ ವ್ಯಕ್ತಿಗೆ ಚಪ್ಪಲಿಯಿಂದ ಹೊಡೆದ ಮಹಿಳೆ, ವಿಡಿಯೋ ವೈರಲ್!

ಮಧ್ಯ ಪ್ರದೇಶದ ಧರ್ ಲೋಕಸಭಾ ಕ್ಷೇತ್ರದ ಸಂಸದೆಯೂ ಆಗಿರುವ ಬಿಜೆಪಿ ನಾಯಕಿ ಈ ಹಿಂದೆ ತಾವು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ನಾಮಪತ್ರದಲ್ಲಿ ಪ್ರಮಾಣ ಪತ್ರದಲ್ಲಿ ತಾವು 12ನೇ ತರಗತಿಯವರೆಗೆ ಓದಿರುವುದಾಗಿ ತಿಳಿಸಿದ್ದಾರೆ. ಇದೀಗ ಇದೇ ವಿಚಾರವಾಗಿ ಕಾಂಗ್ರೆಸ್ ಬಿಜೆಪಿ ಮತ್ತು ಎನ್ ಡಿಎ ಸರ್ಕಾರವನ್ನು ಟೀಕಿಸುತ್ತಿದ್ದು, ಸಚಿವೆ ಸಾವಿತ್ರಿ ಅವರ ಶೈಕ್ಷಣಿಕ ಅರ್ಹತೆ ಬಗ್ಗೆ ವಿರೋಧ ಪಕ್ಷಗಳು ಪ್ರಶ್ನೆ ಮುಂದಿಟ್ಟಿವೆ.

ಕನಿಷ್ಠ ವಿದ್ಯಾರ್ಹತೆ ನಿಗದಿಪಡಿಸಿ: ಕಾಂಗ್ರೆಸ್ ಟೀಕೆ

ಸಾವಿತ್ರಿ ಅವರ ಅಕ್ಷರ ಜ್ಞಾನವನ್ನು ಟೀಕಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಕೆಕೆ ಮಿಶ್ರಾ, 'ಇದು ಪ್ರಜಾಪ್ರಭುತ್ವದ ದೌರ್ಬಾಗ್ಯ' ಎಂದು ಹೇಳಿದ್ದಾರೆ. "ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವ ಹಾಗೂ ದೊಡ್ಡ ಇಲಾಖೆಗಳ ಜವಾಬ್ದಾರಿಯನ್ನು ಪಡೆದಿರುವ ಜನರು, ತಮ್ಮ ಮಾತೃ ಭಾಷೆಯಲ್ಲಿ ಕೂಡ ಬರೆಯಲಾರದಷ್ಟು ಸಮರ್ಥರಾಗಿಲ್ಲ ಎನ್ನುವುದು ಪ್ರಜಾಪ್ರಭುತ್ವದ ದೌರ್ಭಾಗ್ಯ. ತಮ್ಮ ಸಚಿವಾಲಯವನ್ನು ನಡೆಸುವ ಸಾಮರ್ಥ್ಯ ಅವರಿಗೆ ಇರುವುದು ಸಾಧ್ಯವೇ?" ಎಂದು ಕೆಕೆ ಮಿಶ್ರಾ ಪ್ರಶ್ನಿಸಿದ್ದಾರೆ.

ಅಲ್ಲದೆ ಚುನಾವಣೆಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಕನಿಷ್ಠ ವಿದ್ಯಾರ್ಹತೆಯನ್ನು ನಿಗದಿಪಡಿಸುವಂತೆ ಸಾಂವಿಧಾನದಲ್ಲಿ ತಿದ್ದುಪಡಿ ತರಬೇಕು. ಒಂದು ಕಡೆ, ದೇಶದ ನಾಗರಿಕರು ಸಾಕ್ಷರರು ಎಂದು ಹೇಳಿಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಜನರಲ್ಲಿಯೇ ಸಾಕ್ಷರತೆಯ ಕೊರತೆ ಇದೆ. ಹಾಗಾದರೆ ಯಾವುದು ಸತ್ಯ? ಇದು ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆ, ಯಾವುದೇ ವ್ಯಕ್ತಿಗೆ ಅಲ್ಲ" ಎಂದು ಅವರು ಕಿಡಿಕಾರಿದ್ದಾರೆ.

Video: 'ಬೇಟಿ ಬಚಾವೋ, ಬೇಟಿ ಪಢಾವೋ' ಘೋಷಣೆ ತಪ್ಪಾಗಿ ಬರೆದ ಕೇಂದ್ರ ಸಚಿವೆ Savitri Thakur: ಕಾಂಗ್ರೆಸ್ ಟೀಕೆ
ಈ ಗ್ರಾಮದಲ್ಲಿ ಬಾಲಕಿಯರಿಗೆ ಪ್ರತ್ಯೇಕ ಸ್ಪರ್ಧಾತ್ಮಕ ಪರೀಕ್ಷಾ ಗ್ರಂಥಾಲಯ: ಬೇಟಿ ಬಚಾವೊ ಬೇಟಿ ಪಡಾವೊ ಯೋಜನೆಯಡಿ ನಿರ್ಮಾಣ

ಬಿಜೆಪಿ ತಿರುಗೇಟು

ಸಾವಿತ್ರಿ ಠಾಕೂರ್ ಅವರ ಬೆಂಬಲಕ್ಕೆ ನಿಂತಿರುವ ಧರ್ ಜಿಲ್ಲಾ ಬಿಜೆಪಿ ಅಧ್ಯಕ್ಷ ಮನೋಜ್ ಸೋಮಾನಿ, ಕಾಂಗ್ರೆಸ್ ಪಕ್ಷವು ಕ್ಷುಲ್ಲಕ ಹಾಗೂ ಬುಡಕಟ್ಟು ವಿರೋಧಿ ಆಲೋಚನೆಗಳನ್ನು ಹರಡುತ್ತಿದೆ ಎಂದು ಆರೋಪಿಸಿದ್ದಾರೆ. "ಸಾವಿತ್ರಿ ಅವರ ಭಾವನೆಗಳು ಹಾಗೂ ಆಲೋಚನೆಗಳು ಬಹಳ ಶುದ್ಧವಾಗಿವೆ. ಆದರೆ ಕಾಂಗ್ರೆಸ್ಸಿಗರಿಗೆ ತಮ್ಮ ಭಾವನೆಗಳನ್ನು ಪರಿಶುದ್ಧವಾಗಿ ಇರಿಸಿಕೊಳ್ಳುವುದು ಸಾಧ್ಯವಿಲ್ಲ. ಆದಿವಾಸಿ ಮಹಿಳೆಗೆ ಮಾಡುವ ಅವಮಾನವನ್ನು ಬುಡಕಟ್ಟು ಸಮುದಾಯ ಕ್ಷಮಿಸುವುದಿಲ್ಲ" ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com