
ಅಹ್ಮದಾಬಾದ್: ಗುಜರಾತ್ ಬಿಜೆಪಿಯಲ್ಲಿ ಮತ್ತೊಂದು ಬಂಡಾಯದ ಕಹಳೆ ಮೊಳಗಿದ್ದು, ಮಾಜಿ ಸಚಿವ ಜವಾಹರ್ ಚಾವ್ಡಾ ಅವರು ''ನನ್ನ ಗುರುತು ನನ್ನ ಜೊತೆಗಿದೆ, ಬಿಜೆಪಿ ಜೊತೆ ಅಲ್ಲ'' ಎಂದು ಹೇಳುವ ಮೂಲಕ ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾಗೆ ತಿರುಗೇಟು ನೀಡಿದ್ದಾರೆ.
ಹೌದು.. ಗುಜರಾತ್‌ನಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ನಾಯಕರು ಹೋಗುವುದು ಹೊಸದೇನಲ್ಲ, ಆದರೆ ಲೋಕಸಭೆ ಚುನಾವಣೆಯ ನಂತರ ಮೊದಲ ಬಾರಿಗೆ ಕಾಂಗ್ರೆಸ್‌ನಿಂದ ಬಿಜೆಪಿಗೆ ಹೋದ ಮಾಜಿ ಸಚಿವ ಜವಾಹರ್ ಚಾವ್ಡಾ ಅವರು ಬಹಿರಂಗವಾಗಿ ಬಂಡಾಯವೆದ್ದಿದ್ದಾರೆ.
ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಅವರ ಹೇಳಿಕೆಯಿಂದ ಕೆರಳಿದ ಜವಾಹರ್ ಚಾವ್ಡಾ ಅವರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಬಿಜೆಪಿಯ ಚುನಾವಣಾ ಚಿಹ್ನೆಯನ್ನು ತೆಗೆದುಹಾಕಿದ್ದಾರೆ. ಅಲ್ಲದೆ ಅವರ ಗುರುತು ತನ್ನೊಂದಿಗೆ ಇದೆಯೇ ಹೊರತು ಬಿಜೆಪಿಯಲ್ಲಲ್ಲ ಎಂದು ಹೇಳಿದ್ದಾರೆ.
ಯಾರು ಜವಾಹರ ಚಾವ್ಡಾ?
ಜವಾಹರ್ ಚಾವ್ಡಾ ಗುಜರಾತ್‌ನ ಜುನಾಗಢ ಜಿಲ್ಲೆಗೆ ಸೇರಿದವರು. 2017ರಲ್ಲಿ ಮನವಾಡರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಗೆದ್ದು ವಿಧಾನಸಭೆ ಪ್ರವೇಶಿಸಿದ್ದರು. ನಂತರ, ಅವರು ಇತರ ಮೂವರು ಶಾಸಕರೊಂದಿಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ತೊರೆದರು. ಇದಾದ ಬಳಿಕ ಮಾನವದಾರ್ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಿತು. ಇದರಲ್ಲಿ ಜವಾಹರ್ ಚಾವಡಾ ಬಿಜೆಪಿಯಿಂದ ಗೆದ್ದು ಶಾಸಕರಾದರು. ಅಲ್ಲಿಯವರೆಗೆ ವಿಜಯ್ ರೂಪಾನಿ ಸರ್ಕಾರದಲ್ಲಿ ಪ್ರವಾಸೋದ್ಯಮ ಮತ್ತು ಮೀನುಗಾರಿಕೆ ಸಚಿವರಾಗಿದ್ದರು.
ಜವಾಹರ್ ಚಾವ್ಡಾ ಅವರು 2022 ರ ವಿಧಾನಸಭಾ ಚುನಾವಣೆಯಲ್ಲಿ ಮಾನವದರ್‌ನಿಂದ ಸ್ಪರ್ಧಿಸಿದ್ದರು. ಆದರೆ ಆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅರವಿಂದ್ ಲಡಾನಿ ಅವರಿಂದ ಪರಾಭವಗೊಂಡರು. ಆಗ ಜವಾಹರ್ ಚಾವ್ಡಾ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದ್ದರು. ಅದಕ್ಕಾಗಿಯೇ ಅವರು ಚುನಾವಣೆಯಲ್ಲಿ ಸೋತರು. ಈ ಬಗ್ಗೆ ಬಿಜೆಪಿ ನಾಯಕತ್ವಕ್ಕೂ ದೂರು ನೀಡಿದ್ದರು. 2024ರ ಲೋಕಸಭೆ ಚುನಾವಣೆಗೂ ಮುನ್ನ ಅರವಿಂದ್ ಲಡಾನಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು.
ಇದಾದ ಬಳಿಕ ಲೋಕಸಭೆ ಚುನಾವಣೆ ಜತೆಗೆ ಅಲ್ಲಿ ವಿಧಾನಸಭೆ ಉಪಚುನಾವಣೆಯೂ ನಡೆದಿತ್ತು. ಇದರಲ್ಲಿ ಅರವಿಂದ್ ಲಡಾನಿ ಬಿಜೆಪಿಯಿಂದ ಗೆದ್ದಿದ್ದರು. ಆದರೆ ಜವಾಹರ್ ಚಾವ್ಡಾ ತಮ್ಮನ್ನು ಸೋಲಿಸಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಲದಾನಿ ವಿರುದ್ಧ ಕ್ರಮಕ್ಕೆ ಆಗ್ರಹ
ಅರವಿಂದ ಲದಾನಿ ಪರವಾಗಿ ಪಕ್ಷದ ವಿರುದ್ಧ ಕೆಲಸ ಮಾಡುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಇದಾದ ಬಳಿಕ ಜವಾಹರ್ ಚಾವ್ಡಾ ವಿರುದ್ಧ ಪಕ್ಷ ಯಾವುದೇ ಕ್ರಮ ಕೈಗೊಳ್ಳಲಿದೆಯೇ ಎಂಬ ಊಹಾಪೋಹ ಎದ್ದಿತ್ತು. ಚುನಾವಣಾ ಫಲಿತಾಂಶದ ನಂತರ, ಮನ್ಸುಖ್ ಮಾಂಡವಿಯಾ ಅವರು ಪಕ್ಷದ ವಿರುದ್ಧ ಕೆಲಸ ಮಾಡುವವರಿಗೆ ಮತ್ತು ತಮ್ಮನ್ನು ತಾವು ದೊಡ್ಡ ನಾಯಕರೆಂದು ಪರಿಗಣಿಸುವವರಿಗೆ ಸಲಹೆ ನೀಡಿದ್ದರು. ಇದರಲ್ಲಿ ಅವರು ಯಾರ ಹೆಸರನ್ನೂ ತೆಗೆದುಕೊಂಡಿಲ್ಲ.
ಈಗ ಪೋರಬಂದರ್‌ನಿಂದ ಗೆದ್ದಿರುವ ಮನ್ಸುಖ್ ಮಾಂಡವಿಯಾ ಅವರನ್ನು ನೇರವಾಗಿ ಟಾರ್ಗೆಟ್ ಮಾಡಿದ ಜವಾಹರ್ ಚಾವ್ಡಾ, ಚುನಾವಣೆಯ ಮೊದಲು ಅಥವಾ ಚುನಾವಣೆ ಸಮಯದಲ್ಲಿ ಇದನ್ನು ಹೇಳಬೇಕಿತ್ತು. ಆಗ ಫಲಿತಾಂಶವೇ ಬೇರೆ ಇರುತ್ತಿತ್ತು ಎನ್ನುವ ಧಾಟಿಯಲ್ಲಿ ಹೇಳಿದ್ದಾರೆ. ಸದ್ಯಕ್ಕೆ ಜವಾಹರ್ ಚಾವ್ಡಾ ಅವರ ನಡೆಯಿಂದ ಗುಜರಾತ್ ಬಿಜೆಪಿ ಪಾಳಯದಲ್ಲಿ ತಳಮಳ ಶುರುವಾಗಿದೆ. ಡ್ಯಾಮೇಜ್ ಕಂಟ್ರೋಲ್ ನಾಯಕರು ಮುಂದಾಗಿದ್ದಾರೆಯಾದರೂ ಬಿಜೆಪಿಯಿಂದ ಒಂದು ಕಾಲು ತೆಗೆದಿರುವ ಚಾವ್ಡಾ ಮತ್ತೆ ಕಾಂಗ್ರೆಸ್ ಗೆ ಘರ್ ವಾಪ್ಸಿ ಮಾಡಲಿದ್ದಾರೆ ಎಂಬ ಪ್ರಶ್ನೆ ಮೂಡುತ್ತಿದೆ.
Advertisement