ಮಹಿಳಾ ಪೇದೆ ಜೊತೆ ನಗ್ನ ಸ್ಥಿತಿಯಲ್ಲಿ ಸಿಕ್ಕಿಬಿದ್ದಿದ್ದ ಪೊಲೀಸ್ ಅಧಿಕಾರಿಗೆ ಹಿಂಬಡ್ತಿ: ಉಪ ಅಧೀಕ್ಷಕ ಹುದ್ದೆಯಿಂದ ಕಾನ್‌ಸ್ಟೆಬಲ್‌!

ಉತ್ತರ ಪ್ರದೇಶ ಪೊಲೀಸ್ ಉಪ ಅಧೀಕ್ಷಕ ಕೃಪಾ ಶಂಕರ್ ಕನೌಜಿಯಾಗೆ ಈಗ ಕಾನ್‌ಸ್ಟೆಬಲ್ ಹುದ್ದೆ ನೀಡಲಾಗಿದೆ.
ಕೃಪಾ ಶಂಕರ್
ಕೃಪಾ ಶಂಕರ್

ಉತ್ತರ ಪ್ರದೇಶದಲ್ಲಿ ಹೋಟೆಲ್ ರೂಂನಲ್ಲಿ ಮಹಿಳಾ ಪೇದೆ ಜೊತೆ ಪೊಲೀಸ್ ಉಪ ಅಧೀಕ್ಷಕ ಆಕ್ಷೇಪಾರ್ಹ ಸ್ಥಿತಿಯಲ್ಲಿ ಸಿಕ್ಕಿಬಿದ್ದ ಹಿನ್ನೆಲೆಯಲ್ಲಿ ಅವರಿಗೆ ಹಿಂಬಡ್ತಿ ನೀಡಲಾಗಿದೆ. ಉತ್ತರ ಪ್ರದೇಶ ಪೊಲೀಸ್ ಉಪ ಅಧೀಕ್ಷಕ ಕೃಪಾ ಶಂಕರ್ ಕನೌಜಿಯಾಗೆ ಈಗ ಕಾನ್‌ಸ್ಟೆಬಲ್ ಹುದ್ದೆ ನೀಡಲಾಗಿದೆ.

ಹೋಟೆಲ್‌ನಲ್ಲಿ ಮಹಿಳಾ ಕಾನ್‌ಸ್ಟೆಬಲ್‌ನೊಂದಿಗೆ ಆಕ್ಷೇಪಾರ್ಹ ಸನ್ನಿವೇಶದಲ್ಲಿ ಸಿಕ್ಕಿಬಿದ್ದ ಮೂರು ವರ್ಷಗಳ ನಂತರ ಅವರಿಗೆ ಈ ಹುದ್ದೆ ನೀಡಲಾಗಿದೆ. ಕೃಪಾ ಶಂಕರ್ ಕನೋಜಿಯಾ ಅವರು ಈ ಹಿಂದೆ ಉನ್ನಾವೋದ ಬಿಘಾಪುರ್ ಸರ್ಕಲ್ ಆಫೀಸರ್ (ಸಿಒ) ಆಗಿ ನೇಮಕಗೊಂಡಿದ್ದರು. ಈಗ ಅವರನ್ನು ಗೋರಖ್‌ಪುರದ 26ನೇ ಪ್ರಾಂತೀಯ ಸಶಸ್ತ್ರ ಪಡೆಗಳ (ಪಿಎಸಿ) ಬೆಟಾಲಿಯನ್‌ಗೆ ನಿಯೋಜಿಸಲಾಗಿದೆ.

2021ರ ಜುಲೈನಲ್ಲಿ ರಜೆ ತೆಗೆದುಕೊಂಡ ನಂತರ ಕೃಪಾ ಶಂಕರ್ ಕನೌಜಿಯಾ 'ನಾಪತ್ತೆಯಾಗಿದ್ದರು'. ಕೌಟುಂಬಿಕ ಕಾರಣಗಳನ್ನು ಉಲ್ಲೇಖಿಸಿ, ಕೃಪಾ ಶಂಕರ್ ಕನೌಜಿಯಾ ಅವರು ರಜೆ ಕೋರಿದ್ದರು. ಆದರೆ ಅವರು ಮನೆಗೆ ಹೋಗುವ ಬದಲು ಕಾನ್ಪುರದ ಹೋಟೆಲ್‌ನಲ್ಲಿ ಮಹಿಳಾ ಕಾನ್ಸ್‌ಟೇಬಲ್‌ನೊಂದಿಗೆ ತಂಗಿದ್ದರು. ಈ ವೇಳೆ ಅವರು ತಮ್ಮ ವೈಯಕ್ತಿಕ ಹಾಗೂ ಅಧಿಕೃತ ಮೊಬೈಲ್ ಸಂಖ್ಯೆಗಳನ್ನು ಸ್ವಿಚ್ ಆಫ್ ಮಾಡಿದ್ದು ಜನರಲ್ಲಿ ಅನುಮಾನ ಮೂಡಿಸಿತ್ತು.

ಕೃಪಾ ಶಂಕರ್
ಅನುಮತಿಯಿಲ್ಲದೆ ಯಾವುದೇ ಮಾಧ್ಯಮಗಳಿಗೆ ಮಾಹಿತಿ ನೀಡದಂತೆ ಯುಪಿ ಸರ್ಕಾರಿ ನೌಕರರಿಗೆ ನಿರ್ಬಂಧ

ಪತಿ ಹಠಾತ್ ನಾಪತ್ತೆಯಿಂದ ಆತಂಕಗೊಂಡ ಕೃಪಾ ಶಂಕರ್ ಕನೌಜಿಯ ಅವರ ಪತ್ನಿ ಸಹಾಯಕ್ಕಾಗಿ ಎಸ್ಪಿ ಉನ್ನಾವ್ ಅವರನ್ನು ಸಂಪರ್ಕಿಸಿದರು. ಕಾನ್ಪುರ ಹೋಟೆಲ್ ತಲುಪಿದ ನಂತರ ಕೃಪಾ ಶಂಕರ್ ಕನೌಜಿಯಾ ಅವರ ಮೊಬೈಲ್ ನೆಟ್‌ವರ್ಕ್ ಕೆಲಸ ಮಾಡುವುದನ್ನು ನಿಗಾ ತಂಡ ಪತ್ತೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಉನ್ನಾವೊ ಪೊಲೀಸರು ತಕ್ಷಣ ಹೋಟೆಲ್‌ಗೆ ತಲುಪಿದ್ದು ಸಿಒ ಮತ್ತು ಮಹಿಳಾ ಕಾನ್‌ಸ್ಟೆಬಲ್ ಒಟ್ಟಿಗೆ ಇರುವುದನ್ನು ಪತ್ತೆಯಾಗಿತ್ತು.

ಕೃಪಾ ಶಂಕರ್ ಹೋಟೆಲ್ ರೂಂಗೆ ಹೋಗಿದ್ದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ನಂತರದ ತನಿಖೆಗೆ ಇದು ಪ್ರಮುಖ ಸಾಕ್ಷಿಯಾಗಿತ್ತು. ಘಟನೆ ಬಳಿಕ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು. ಕೂಲಂಕುಷವಾಗಿ ಪರಿಶೀಲಿಸಿದ ನಂತರ, ಕೃಪಾ ಶಂಕರ್ ಕನೋಜಿಯಾ ಅವರನ್ನು ಕಾನ್‌ಸ್ಟೆಬಲ್ ಹುದ್ದೆಗೆ ಹಿಂಬಡ್ತಿ ನೀಡಲು ಸರ್ಕಾರ ಶಿಫಾರಸು ಮಾಡಿತ್ತು. ಎಡಿಜಿ ಆಡಳಿತವು ತಕ್ಷಣವೇ ಈ ನಿರ್ಧಾರವನ್ನು ಜಾರಿಗೆ ತರಲು ಆದೇಶವನ್ನು ಹೊರಡಿಸಿತು. ಇದರಿಂದಾಗಿ ಒಮ್ಮೆ ಪ್ರಮುಖ ಹುದ್ದೆಯಲ್ಲಿದ್ದ ಈ ಅಧಿಕಾರಿ ಕೆಳಗೆ ಬಿದ್ದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com