ಕೆಲಸಕ್ಕೆಂದು ಪಾಕಿಸ್ತಾನಕ್ಕೆ ಹೋದ ಭಾರತೀಯ 'ಶತ್ರು' ಅಲ್ಲ: ಕೇರಳ ಹೈಕೋರ್ಟ್ ಮಹತ್ವದ ತೀರ್ಪು

ನ್ಯಾಯಾಲಯವು ಕರಾಚಿಯ ಹೋಟೆಲ್‌ನಲ್ಲಿ ಕೆಲಕಾಲ ಕೆಲಸ ಮಾಡಿದ್ದ ಅರ್ಜಿದಾರರ ತಂದೆ ಕುಂಜಿ ಕೋಯಾ ಅವರ ಆಸ್ತಿಗಳ ವಿರುದ್ಧ ಶತ್ರು ಆಸ್ತಿ ಕಾಯ್ದೆಯಡಿಯಲ್ಲಿ ಆರಂಭಿಸಲಾದ ವಿಚಾರಣೆಯನ್ನು ರದ್ದುಗೊಳಿಸಿದೆ.
ಕೇರಳ ಹೈಕೋರ್ಟ್
ಕೇರಳ ಹೈಕೋರ್ಟ್TNIE
Updated on

ಕೊಚ್ಚಿ: ಭಾರತ ರಕ್ಷಣಾ ಕಾಯಿದೆ 1971ರ ನಿಯಮ 130 ಮತ್ತು 138ರ ಅಡಿಯಲ್ಲಿ ಒಬ್ಬ ವ್ಯಕ್ತಿಯು ಕೆಲಸ ಹುಡುಕಿಕೊಂಡು ಪಾಕಿಸ್ತಾನಕ್ಕೆ ಹೋಗಿರುವುದರಿಂದ ಶತ್ರುವಾಗುವುದಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ. ಶತ್ರುವಿನ ಜತೆ ವ್ಯವಹಾರ ಮಾಡದ ಹೊರತು ಈ ಕಾಯ್ದೆಯಡಿ ಶತ್ರುವಾಗುವುದಿಲ್ಲ ಎಂದೂ ಕೋರ್ಟ್ ಅಭಿಪ್ರಾಯಪಟ್ಟಿದೆ.

ಅರ್ಜಿದಾರರಾದ ಪಿ. ಉಮರ್ ಕೋಯಾ ಅವರು ತಮ್ಮ ತಂದೆ ಕುಂಜಿಕೋಯ ತಮ್ಮ ಸಂಬಂಧಿಕರಿಂದ ಕೆಲವು ಜಮೀನು ಮತ್ತು ಆಸ್ತಿಯನ್ನು ಖರೀದಿಸಿದ ಪ್ರಕರಣದಲ್ಲಿ ನ್ಯಾಯಾಲಯದ ಈ ತೀರ್ಪು ಬಂದಿದೆ. ಅಲ್ಲದೆ ನ್ಯಾಯಾಲಯವು ಕರಾಚಿಯ ಹೋಟೆಲ್‌ನಲ್ಲಿ ಕೆಲಕಾಲ ಕೆಲಸ ಮಾಡಿದ್ದ ಅರ್ಜಿದಾರರ ತಂದೆ ಕುಂಜಿ ಕೋಯಾ ಅವರ ಆಸ್ತಿಗಳ ವಿರುದ್ಧ ಶತ್ರು ಆಸ್ತಿ ಕಾಯ್ದೆಯಡಿಯಲ್ಲಿ ಆರಂಭಿಸಲಾದ ವಿಚಾರಣೆಯನ್ನು ರದ್ದುಗೊಳಿಸಿದೆ.

ಈ ಪ್ರಕರಣವು ಉಮರ್ ಕೋಯಾ ಎಂಬ ವ್ಯಕ್ತಿಯದ್ದಾಗಿದೆ. ಮಲಪ್ಪುರಂ ನಿವಾಸಿ ಉಮರ್ ಕೋಯಾ ತಮ್ಮ ತಂದೆಯ ಆಸ್ತಿಯನ್ನು ಶತ್ರು ಆಸ್ತಿ ಕಾಯ್ದೆ 1968ರ ಅಡಿಯಲ್ಲಿ ಮುಟ್ಟುಗೋಲು ಹಾಕಿಕೊಳ್ಳುವಂತಿಲ್ಲ ಎಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಾಸ್ತವವಾಗಿ, ಒಮರ್ ಕೋಯಾ ಅವರ ತಂದೆ ಕುಂಜಿ ಕೋಯಾ ಅವರು 1953ರಲ್ಲಿ ಕೆಲಸ ಹುಡುಕಿಕೊಂಡು ಪಾಕಿಸ್ತಾನದ ಕರಾಚಿಗೆ ಹೋಗಿದ್ದರು. ಅಲ್ಲಿ ಕೆಲಕಾಲ ಹೊಟೇಲ್‌ನಲ್ಲಿ ಸಹಾಯಕರಾಗಿ ಕೆಲಸ ಮಾಡಿದರು. ನಂತರ ಅವರು ಭಾರತಕ್ಕೆ ಮರಳಿದರು. 1995ರಲ್ಲಿ ಮಲಪ್ಪುರಂನಲ್ಲಿ ಮೃತಪಟ್ಟಿದ್ದರು.

ಕೇರಳ ಹೈಕೋರ್ಟ್
ಕಾಶ್ಮೀರ: ದೋಡಾದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಉಗ್ರನ ಹತ್ಯೆ

ಉಮರ್ ಕೋಯಾ ಕೇರಳ ಪೊಲೀಸ್ ಸೇವೆಯಿಂದ ನಿವೃತ್ತರಾಗಿದ್ದಾರೆ. 2022-23ರ ಆಸ್ತಿ ತೆರಿಗೆಯನ್ನು ಜಮಾ ಮಾಡಲು ಹೋದಾಗ ತೆರಿಗೆ ವಸೂಲಿ ಮಾಡಲು ನಿರಾಕರಿಸಿದ್ದರು. ಆಸ್ತಿ ಮೇಲೆ ತೆರಿಗೆ ಸಂಗ್ರಹಿಸದಂತೆ ತಹಸೀಲ್ದಾರ್ ಸೂಚನೆ ನೀಡಿದ್ದಾರೆ ಎಂದು ಗ್ರಾಮಾಧಿಕಾರಿ (ವಿಒ) ಅವರಿಗೆ ತಿಳಿಸಿದರು. ಈ ಸೂಚನೆಯನ್ನು 'ಕಸ್ಟೋಡಿಯನ್ ಆಫ್ ಎನಿಮಿ ಪ್ರಾಪರ್ಟಿ ಆಫ್ ಇಂಡಿಯಾ' (CEPI) ಅಡಿಯಲ್ಲಿ ನೀಡಲಾಗಿತ್ತು.

ತನ್ನ ತಂದೆಯನ್ನು ಪಾಕಿಸ್ತಾನಿ ಪ್ರಜೆ ಎಂದು ಕರೆಯುವ ಮೂಲಕ ಪೊಲೀಸರು ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಉಮರ್ ಕೋಯಾ ನ್ಯಾಯಾಲಯಕ್ಕೆ ತಿಳಿಸಿದರು. ತನ್ನ ತಂದೆಯನ್ನು ಭಾರತೀಯ ಪ್ರಜೆ ಎಂದು ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಕುಂಜಿ ಕೋಯಾ ಭಾರತೀಯ ಪ್ರಜೆ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ. 'ಭಾರತದ ಶತ್ರು ಆಸ್ತಿಯ ಕಸ್ಟೋಡಿಯನ್' ಅವರು ಯಾವುದೇ ಶತ್ರುಗಳೊಂದಿಗೆ ವ್ಯಾಪಾರ ಮಾಡಿದರು ಅಥವಾ ಶತ್ರು ಸಂಸ್ಥೆಯೊಂದಿಗೆ ಯಾವುದೇ ವ್ಯವಹಾರ ಸಂಬಂಧವನ್ನು ಹೊಂದಿದ್ದರು ಎಂಬುದನ್ನು ಸಾಬೀತುಪಡಿಸಲು ಯಾವುದೇ ಪುರಾವೆಗಳಿಲ್ಲ. ಆದ್ದರಿಂದ, ನ್ಯಾಯಾಲಯವು ಭಾರತದ ಶತ್ರು ಆಸ್ತಿಯ ಕಸ್ಟೋಡಿಯನ್ ನ ಪ್ರಕ್ರಿಯೆಗಳನ್ನು ರದ್ದುಗೊಳಿಸಿತು ಮತ್ತು ಅರ್ಜಿದಾರರಿಂದ ಆಸ್ತಿ ತೆರಿಗೆ ಸಂಗ್ರಹಿಸಲು ಕಂದಾಯ ಅಧಿಕಾರಿಗಳಿಗೆ ಸೂಚಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com