ಸಂವಿಧಾನ ಬದಲಾವಣೆ ಬಗ್ಗೆ ಪ್ರತಿಪಕ್ಷಗಳ ಟೀಕೆಗೆ ತಿರುಗೇಟು ನೀಡಲು ಬಿಜೆಪಿ ಪ್ರತಿತಂತ್ರ

'ಸಂವಿಧಾನ ಬದಲಾವಣೆ'ಯ ಸುತ್ತ ಹೆಣೆಯಲಾದ ಪ್ರತಿಪಕ್ಷಗಳ ಚುನಾವಣಾ ನಿರೂಪಣೆಯನ್ನು ತಟಸ್ಥಗೊಳಿಸಲು ಬಿಜೆಪಿ ಪ್ರತಿತಂತ್ರ ರೂಪಿಸಿದೆ.
ಯೋಗಿ ಆದಿತ್ಯನಾಥ್
ಯೋಗಿ ಆದಿತ್ಯನಾಥ್

ಲಖನೌ: ಇತ್ತೀಚೆಗಷ್ಟೇ ನಡೆದ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಹೀನಾಯ ಸೋಲು ಕಂಡಿರುವ ಆಡಳಿತಾರೂಢ ಬಿಜೆಪಿ ಒಂದೆಡೆ ತನ್ನ ಹೀನಾಯ ಸೋಲಿನ ಕಾರಣ ಅರಿಯಲು ಯತ್ನಿಸುತ್ತಿದ್ದರೆ ಮತ್ತೊಂದೆಡೆ ತೀವ್ರ ಪ್ರತಿತಂತ್ರ ಹೂಡಲು ಮುಂದಾಗಿದೆ.

'ಸಂವಿಧಾನ ಬದಲಾವಣೆ'ಯ ಸುತ್ತ ಹೆಣೆಯಲಾದ ಪ್ರತಿಪಕ್ಷಗಳ ಚುನಾವಣಾ ನಿರೂಪಣೆಯನ್ನು ತಟಸ್ಥಗೊಳಿಸಲು ಬಿಜೆಪಿ ಪ್ರತಿತಂತ್ರ ರೂಪಿಸಿದ್ದು, ಲೋಕಸಭೆ ಚುನಾವಣೆಯ ನಂತರ ತೆರವಾಗಿರುವ 10 ವಿಧಾನಸಭಾ ಸ್ಥಾನಗಳಿಗೆ ನಡೆಯುವ ಉಪಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿದೆ ಮತ್ತು ಪಕ್ಷದ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳಲು ನಿರ್ಧರಿಸಿದೆ.

ಮುಂಬರುವ ವಿಧಾನಸಭೆ ಉಪ ಚುನಾವಣೆ ಆಡಳಿತರೂಢ ಬಿಜೆಪಿಗೆ ಅಗ್ನಿಪರೀಕ್ಷೆಯಾಗಿದ್ದು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ವೈಯಕ್ತಿಕವಾಗಿ ಪಕ್ಷದ ಕಾರ್ಯಕರ್ತರೊಂದಿಗೆ ಸಂವಾದ ನಡೆಸುತ್ತಿದ್ದಾರೆ.

ಯೋಗಿ ಆದಿತ್ಯನಾಥ್
ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವವರಿಗೆ ಜೀವಾವಧಿ ಶಿಕ್ಷೆ, 1 ಕೋಟಿ ರೂ. ದಂಡ: ಸುಗ್ರೀವಾಜ್ಞೆಗೆ ಯುಪಿ ಕ್ಯಾಬಿನೆಟ್ ಅಸ್ತು

ಜನರ ಕುಂದುಕೊರತೆಗಳನ್ನು ಕಡಿಮೆ ಮಾಡುವ ಮೂಲಕ ಮತ್ತು ವಿರೋಧ ಪಕ್ಷದವರು "ಸಂವಿಧಾನ ಬದಲಾಯಿಸುವ" ನಕಲಿ ನಿರೂಪಣೆಯ ಸುತ್ತ ಹೆಣೆದಿರುವ ಮಿಥ್ಯೆಯನ್ನು ಹೋಗಲಾಡಿಸುವ ಮೂಲಕ 2027ರ ವಿಧಾನಸಭಾ ಕದನಕ್ಕೆ ಕೇಸರಿ ಪಕ್ಷ ಸಿದ್ಧವಾಗುತ್ತಿದೆ.

ಆಡಳಿತ ಪಕ್ಷದ ಹಿರಿಯ ರಾಜ್ಯ ನಾಯಕರು ನಗರಗಳಿಂದ ಹಳ್ಳಿಗಳಿಗಳಿಗೆ, ಬ್ಲಾಕ್‌ಗಳಿಗೆ ತೆರಳಿ, ವಿರೋಧ ಪಕ್ಷದವರ ಅಪಪ್ರಚಾರವನ್ನು ಬಹಿರಂಗಪಡಿಸಲು ಮತ್ತು ತಳಮಟ್ಟದ ಸಂಘಟಿತ ಪ್ರಚಾರವನ್ನು ನಡೆಸುವ ಅಗತ್ಯವನ್ನು ಯುಪಿ ಸಿಎಂ ಒತ್ತಿಹೇಳಿದ್ದಾರೆ.

ಬಿಜೆಪಿಯ ಉನ್ನತ ಮೂಲಗಳ ಪ್ರಕಾರ, ಸಮಗ್ರ ಪ್ರಚಾರವನ್ನು ಸಂಘ ಪರಿವಾರದೊಂದಿಗೆ ಸಿಂಕ್ರೊನೈಸ್ ಮಾಡುವ ಮೂಲಕ ಮತ್ತು ಇತರ ಸಂಬಂಧಿತ ಸಂಘಟನೆಗಳನ್ನು ಒಳಗೊಳ್ಳುವ ಸಾಧ್ಯತೆಯಿದೆ.

ಸಂವಿಧಾನ ಬದಲಾವಣೆಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ಚುನಾವಣಾ ನಿರೂಪಣೆಯು ಮುಂಬರುವ ಉಪಚುನಾವಣೆಯ ಮೇಲೂ ಪರಿಣಾಮ ಬೀರುತ್ತದೆ ಎಂಬ ವರದಿಗಳನ್ನು ಸ್ವೀಕರಿಸಿದ ನಂತರ ಪಕ್ಷದ ನಾಯಕತ್ವವು ಅಲರ್ಟ್ ಮೋಡ್‌ಗೆ ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com