ಕಳ್ಳತನಕ್ಕಿಳಿದ UPSC ಆಕಾಂಕ್ಷಿ: ದಂಪತಿಯ ರಾಸಲೀಲೆ ವಿಡಿಯೋ ಮಾಡಿ ಬ್ಲಾಕ್ ಮೇಲ್ ವೇಳೆ ಸಿಕ್ಕಿಬಿದ್ದ ಆರೋಪಿ

ನಾಗರಿಕ ಸೇವಾ ಪರೀಕ್ಷೆ ಬರೆದು ಅಧಿಕಾರಿಯಾಗುವ ಕನಸು ಕಾಣುತ್ತಿದ್ದ ಯುವಕನೊಬ್ಬ ಪದೇ ಪದೇ ಸಿವಿಲ್ ಪರೀಕ್ಷೆಯಲ್ಲಿ ಫೇಲ್ ಆಗುತ್ತಿದ್ದರಿಂದ ಕೊನೆಗೆ ಕಳ್ಳನಾಗಲು ನಿರ್ಧರಿಸಿದ್ದ. ತನ್ನ ಮನೆಯ ಸುತ್ತಮುತ್ತ ಕಳ್ಳತನ ಮಾಡಲು ಆರಂಭಿಸಿದದ್ದು ಆಗಾಗ ಜನರ ಮೊಬೈಲ್ ಗಳನ್ನು ಕದಿಯುತ್ತಿದ್ದನು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರPTI
Updated on

ನಾಗರಿಕ ಸೇವಾ ಪರೀಕ್ಷೆ ಬರೆದು ಅಧಿಕಾರಿಯಾಗುವ ಕನಸು ಕಾಣುತ್ತಿದ್ದ ಯುವಕನೊಬ್ಬ ಪದೇ ಪದೇ ಸಿವಿಲ್ ಪರೀಕ್ಷೆಯಲ್ಲಿ ಫೇಲ್ ಆಗುತ್ತಿದ್ದರಿಂದ ಕೊನೆಗೆ ಕಳ್ಳನಾಗಲು ನಿರ್ಧರಿಸಿದ್ದ. ತನ್ನ ಮನೆಯ ಸುತ್ತಮುತ್ತ ಕಳ್ಳತನ ಮಾಡಲು ಆರಂಭಿಸಿದದ್ದು ಆಗಾಗ ಜನರ ಮೊಬೈಲ್ ಗಳನ್ನು ಕದಿಯುತ್ತಿದ್ದನು.

ಕೆಲ ದಿನಗಳ ಹಿಂದೆ ಕಳ್ಳತನ ಮಾಡಲು ಮನೆಯೊಂದಕ್ಕೆ ಆರೋಪಿ ಛತ್ತೀಸ್‌ಗಢದ ವಿನಯ್ ಕುಮಾರ್ ಸಾಹು ನುಗ್ಗಿದ್ದನು. ಆ ವೇಳೆ ಮನೆಯಲ್ಲಿ ಗಂಡ ಹೆಂಡತಿ ರಾಸಲೀಲೆಯಲ್ಲಿ ತೊಡಗಿದ್ದರು. ವಿನಯ್ ಕಳ್ಳತನ ಮಾಡುವ ಬದಲು ರಹಸ್ಯವಾಗಿ ಅವರ ಅಶ್ಲೀಲ ವೀಡಿಯೊಗಳನ್ನು ಚಿತ್ರೀಕರಿಸಲು ಪ್ರಾರಂಭಿಸಿದನು. ವೀಡಿಯೋ ಮಾಡಿದ ಬಳಿಕ ಬ್ಲ್ಯಾಕ್‌ ಮೇಲ್ ಆಟ ಆರಂಭಿಸಿದ್ದು ಈ ಘಟನೆ ದುರ್ಗ್ ಜಿಲ್ಲೆಯಲ್ಲಿ ನಡೆದಿದೆ.

ಮನೆಯಲ್ಲಿ ಗಂಡ-ಹೆಂಡತಿಯ ಅಶ್ಲೀಲ ವೀಡಿಯೊವನ್ನು ರಹಸ್ಯವಾಗಿ ಮಾಡಿದ ನಂತರ, ಕಳ್ಳ ವಿನಯ್ ದಂಪತಿಗೆ 10 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದನು. ಹಣ ಕೊಡದಿದ್ದರೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಲು ಆರಂಭಿಸಿದ್ದಾರೆ. ವಾಸ್ತವವಾಗಿ, ಸಾಹು ಕದ್ದ ಫೋನ್‌ನಿಂದ ವೀಡಿಯೊವನ್ನು ಚಿತ್ರೀಕರಿಸಿದ್ದನು. ಆರೋಪಿಗಳು ವಾಟ್ಸಾಪ್ ಮೂಲಕ ವಿಡಿಯೋ ಕಳುಹಿಸಿ ದಂಪತಿಗೆ ಬ್ಲಾಕ್ ಮೇಲ್ ಮಾಡಲು ಆರಂಭಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದರಿಂದ ಪ್ರಕರಣವನ್ನು ಭೇದಿಸಲು ಪೊಲೀಸರಿಗೆ ಸುಲಭವಾಯಿತು.

ಸಂಗ್ರಹ ಚಿತ್ರ
ಖ್ಯಾತ ಲೇಖಕಿ ಅರುಂಧತಿ ರಾಯ್​​ಗೆ ಪೆನ್ ಪಿಂಟರ್ ಪ್ರಶಸ್ತಿ

ವಿನಯ್ ಕುಮಾರ್ ಸಾಹು ಈ ಹಿಂದೆ ಸರ್ಕಾರಿ ನೌಕರಿಗಾಗಿ ತಯಾರಿ ನಡೆಸುತ್ತಿದ್ದನು ಎಂಬುದು ತನಿಖೆಯ ವೇಳೆ ಪೊಲೀಸರಿಗೆ ತಿಳಿದು ಬಂದಿದೆ. ಹಲವಾರು ಬಾರಿ ಸಿವಿಲ್ ಪರೀಕ್ಷೆಗೂ ಹಾಜರಾಗಿದ್ದನು. ಆದರೆ ಹಲವು ಬಾರಿ ಪರೀಕ್ಷೆ ಬರೆದರು ಫೇಲ್ ಆಗಿದ್ದನು. ಇದಾದ ಬಳಿಕ ಕಳ್ಳತನ ಮಾಡಿ ಜೀವನ ಸಾಗಿಸಲು ನಿರ್ಧರಿಸಿದ್ದನು. ಸುತ್ತಮುತ್ತಲಿನ ಜನರಿಂದ ಮೊಬೈಲ್ ಕದಿಯಲು ಆರಂಭಿಸಿದ. ಕಳೆದ ಶುಕ್ರವಾರ ಆತ ಕಳ್ಳತನ ಮಾಡಲು ದಂಪತಿಯ ಮನೆಗೆ ಪ್ರವೇಶಿಸಿದ್ದಾಗ ವಿಡಿಯೋ ಸೆರೆ ಹಿಡಿದಿದ್ದನು.

ಮರುದಿನ ಬೆಳಗ್ಗೆ ಆ ವಿಡಿಯೋವನ್ನು ಗಂಡ ಹೆಂಡತಿಗೆ ಕಳುಹಿಸಿದ್ದ. ಅಲ್ಲದೆ ಕರೆ ಮಾಡಿ 10 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದನು. ಇದರಿಂದ ಆತಂಕಗೊಂಡ ದಂಪತಿ ಠಾಣೆಗೆ ದೂರು ನೀಡಿದರು. 10 ಲಕ್ಷದ ವಿಷಯ ಹಾಗೂ ವಾಟ್ಸ್‌ಆ್ಯಪ್‌ನಲ್ಲಿ ವಿಡಿಯೋ ಹಾಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದುರ್ಗ ಪೊಲೀಸರು ವಿಶೇಷ ತಂಡ ರಚಿಸಿದ್ದರು. ಬುಧವಾರ ಪೊಲೀಸರು ಕಳ್ಳ ವಿನಯ್‌ನನ್ನು ಬಂಧಿಸಿದ್ದಾರೆ. ಅಲ್ಲದೆ ಫೋನ್‌ನಲ್ಲಿದ್ದ ಅಶ್ಲೀಲ ವೀಡಿಯೊವನ್ನು ಡಿಲೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com