ವೈಮಾನಿಕ ಗುರಿ ಧ್ವಂಸ ಸಾಮರ್ಥ್ಯದ 'Abhyas' ಪರೀಕ್ಷಾರ್ಥ ಹಾರಾಟ ಯಶಸ್ವಿ: DRDO

ಭಾರತದ ಕ್ಷಿಪಣಿ ವ್ಯವಸ್ಥೆಗೆ ಹೆಚ್ಚಿನ ಬಲ ತುಂಬುವ ವೈಮಾನಿಕ ಗುರಿ ಧ್ವಂಸ ಸಾಮರ್ಥ್ಯದ 'ಅಭ್ಯಾಸ್'ನ ಪರೀಕ್ಷಾರ್ಥ ಹಾರಾಟ ಯಶಸ್ವಿಯಾಗಿದೆ ಎಂದು ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ DRDO ಹೇಳಿದೆ.
India successfully conducts test flight of expendable aerial target Abhyas
'ಅಭ್ಯಾಸ್' ಪರೀಕ್ಷಾರ್ಥ ಹಾರಾಟ ಯಶಸ್ವಿ
Updated on

ಭುವನೇಶ್ವರ: ಭಾರತದ ಕ್ಷಿಪಣಿ ವ್ಯವಸ್ಥೆಗೆ ಹೆಚ್ಚಿನ ಬಲ ತುಂಬುವ ವೈಮಾನಿಕ ಗುರಿ ಧ್ವಂಸ ಸಾಮರ್ಥ್ಯದ 'ಅಭ್ಯಾಸ್'ನ ಪರೀಕ್ಷಾರ್ಥ ಹಾರಾಟ ಯಶಸ್ವಿಯಾಗಿದೆ ಎಂದು ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ DRDO ಹೇಳಿದೆ.

ಭಾರತದ ಕ್ಷಿಪಣಿ ವ್ಯವಸ್ಥೆಗೆ ಹೆಚ್ಚಿನ ಬಲವನ್ನು ತುಂಬುವ, ದೇಶದ ಸೇನೆಗೂ ಭಾರಿ ಪ್ರಮಾಣದಲ್ಲಿ ಸಹಕಾರಿಯಾಗುವ, ಯಾವುದೇ ತುರ್ತು ಸಂದರ್ಭದಲ್ಲಿ ಪ್ರತ್ಯುತ್ತರ ನೀಡುವಾಗ ನಿರ್ಣಾಯಕ ಪಾತ್ರ ನಿರ್ವಹಿಸುವ ಹೈ-ಸ್ಪೀಡ್‌ ಎಕ್ಸ್‌ಪೆಂಡೇಬಲ್‌ ಏರಿಯಲ್‌ ಟಾರ್ಗೆಟ್‌ (HEAT) ‘ಅಭ್ಯಾಸ್’‌ ಪ್ರಯೋಗಾರ್ಥ ಪ್ರಯೋಗ (Abhyas Trial) ಯಶಸ್ವಿಯಾಗಿದೆ.

ಒಡಿಶಾದ ಚಾಂದಿಪುರದಲ್ಲಿರುವ ಸಮಗ್ರ ಪರೀಕ್ಷಾ ವಲಯದಲ್ಲಿ (ITR) ಗುರುವಾರ (ಜೂನ್‌ 27) ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿಯು ಸಂಸ್ಥೆಯು (DRDO) ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ ಎಂದು ತಿಳಿದುಬಂದಿದೆ.

ಅಭ್ಯಾಸ್‌ ಗುರಿಗಳನ್ನು ದೇಶೀಯವಾಗಿಯೇ ಅಭಿವೃದ್ಧಿಪಡಿಸಲಾಗಿದೆ. ಬೆಂಗಳೂರಿನಲ್ಲಿರುವ ಡಿಆರ್‌ಡಿಒದ ಏರೋನಾಟಿಕಲ್‌ ಡೆವಲಪ್‌ಎಸ್ಟಾಬ್ಲಿಶ್‌ಮೆಂಟ್‌ ಇವುಗಳ ವಿನ್ಯಾಸ ಮಾಡಿದೆ. ಪ್ರೊಡಕ್ಷನ್‌ ಏಜೆನ್ಸೀಸ್‌-ಹಿಂದುಸ್ಥಾನ ಏರೋನಾಟಿಕ್ಸ್‌ ಲಿಮಿಟೆಡ್‌, ಲಾರ್ಸೆನ್‌ & ಟರ್ಬೊ ಇವುಗಳನ್ನು ಅಭಿವೃದ್ಧಿಪಡಿಸಿವೆ.

ಡಿಆರ್ ಡಿಒ ನೀಡಿರುವ ಮಾಹಿತಿಯಂತೆ ಅಭ್ಯಾಸ್‌ ಹೆಸರಿನ ಗುರಿಗಳನ್ನು ಡಿಆರ್‌ಡಿಒ ಅಭಿವೃದ್ಧಿಪಡಿಸಿದ್ದು, ಆರು ಗುರಿಗಳನ್ನು ಪರೀಕ್ಷೆ ಮಾಡಲಾಗಿದೆ. ಎಲ್ಲ ಪರೀಕ್ಷೆಗಳು ಕೂಡ ಯಶಸ್ವಿಯಾಗಿವೆ.

ಅದರಲ್ಲೂ, ಕೇವಲ 30 ನಿಮಿಷಗಳಲ್ಲಿ ಸತತ ಎರಡು ಗುರಿಗಳನ್ನು ಪರೀಕ್ಷೆ ಮಾಡಲಾಗಿದ್ದು ಪ್ರಯೋಗದ ಸಮಯದಲ್ಲಿ ಬೂಸ್ಟರ್‌ನ ಸುರಕ್ಷಿತ ಬಿಡುಗಡೆ, ಲಾಂಚರ್‌ ಕ್ಲಿಯರೆನ್ಸ್‌ ಹಾಗೂ ಒತ್ತಡವನ್ನು ಸಹಿಸಿಕೊಳ್ಳುವ ಸಾಮರ್ಥ್ಯ ಇದೇ ಎಂಬುದನ್ನು ಡಿಆರ್‌ಡಿಒ ವಿಜ್ಞಾನಿಗಳು ಪರೀಕ್ಷೆ ವೇಳೆ ದೃಢಪಡಿಸಿಕೊಂಡರು ಎನ್ನಲಾಗಿದೆ.

ಇನ್ನು ಅಭ್ಯಾಸ್‌ ಗುರಿಗಳು ದೇಶದ ಕ್ಷಿಪಣಿ ವ್ಯವಸ್ಥೆಯನ್ನು ಬಲಪಡಿಸಲು, ಕ್ಷಿಪಣಿಗಳ ಸಾಮರ್ಥ್ಯವನ್ನು ಹೆಚ್ಚಿಸಲು ಸಹಕಾರಿಯಾಗಲಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದು, ಕ್ಷಿಪಣಿಗಳ ಪರೀಕ್ಷೆ ಹಾಗೂ ಅಭ್ಯಾಸಗಳ ವೇಳೆ ಗುರಿಗಳನ್ನು ಬಳಸಿ, ಅವುಗಳ ಸಮರ್ಥ ಕಾರ್ಯನಿರ್ವಹಣೆಯನ್ನು ಒರೆಗೆ ಹಚ್ಚುತ್ತವೆ.

ಆಟೋ ಪೈಲಟ್‌ ಮೂಲಕ ಹಾರಾಡುವ, ಲ್ಯಾಪ್‌ ಆಧಾರಿತವಾಗಿ ಭೂಮಿಯಿಂದಲೇ ನಿಯಂತ್ರಣ ಮಾಡಬಹುದಾದ, ರಾಡಾರ್‌ ಗ್ರಹಿಕೆಗೆ ಸಿಗದಿರುವುದು ಸೇರಿ ಹಲವು ಅತ್ಯಾಧುನಿಕ ಸಾಮರ್ಥ್ಯವನ್ನು ಇವು ಹೊಂದಿವೆ ಎನ್ನಲಾಗಿದೆ.

India successfully conducts test flight of expendable aerial target Abhyas
RLV ಪುಷ್ಪಕ್ ಚಿತ್ರದುರ್ಗ ATRನಲ್ಲಿ ಯಶಸ್ವಿ ಲ್ಯಾಂಡಿಂಗ್! ISRO ಗೆ ಏಕೆ ಮಹತ್ವದ್ದು? ಇಲ್ಲಿದೆ ಮಾಹಿತಿ...

ಡಿಆರ್ ಡಿಒ ರಾಜನಾಥ್ ಸಿಂಗ್ ಅಭಿನಂದನೆ

ಇನ್ನು ಡಿಆರ್‌ಡಿಒ ಯಶಸ್ವಿಯಾಗಿ ಪರೀಕ್ಷೆ ಮಾಡುತ್ತಲೇ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಅಭಿನಂದನೆ ಸಲ್ಲಿಸಿದರು. ಡಿಆರ್‌ಡಿಒ ವಿಜ್ಞಾನಿಗಳು, ಸಶಸ್ತ್ರ ಪಡೆಗಳ ಪ್ರಯತ್ನಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com