88 ವರ್ಷಗಳ ಬಳಿಕ ದಾಖಲೆಯ ವರ್ಷಧಾರೆ: ಬಿರುಮಳೆಗೆ ತತ್ತರಿಸಿದ ರಾಷ್ಟ್ರ ರಾಜಧಾನಿ; ಮಳೆ ಸಂಬಂಧಿತ ಅವಘಡಕ್ಕೆ 7 ಬಲಿ

ಮುಂಜಾನೆ 4 ಗಂಟೆಯಿಂದ 8.30 ಗಂಟೆಯವರೆಗೆ ಮಳೆ ಸುರಿದಿದ್ದು, ದೆಹಲಿಯ ಪ್ರಮುಖ ಭಾಗಗಳು ಹಾಗೂ ಹಲವು ಪ್ರದೇಶಗಳು ಜಲಾವೃತಗೊಂಡಿವೆ. 8 ಮತ್ತು 10 ವರ್ಷ ವಯಸ್ಸಿನ ಇಬ್ಬರು ಮಕ್ಕಳು ಸೇರಿದಂತೆ ಪ್ರತ್ಯೇಕ ಘಟನೆಗಳಲ್ಲಿ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ.
ಜಲಾವೃತವಾಗಿರುವ ದೆಹಲಿ ರಸ್ತೆ
ಜಲಾವೃತವಾಗಿರುವ ದೆಹಲಿ ರಸ್ತೆ

ನವದೆಹಲಿ: ಬಿಸಿಗಾಳಿ, ಬಿರುಬೇಸಿಗೆಯಿಂದ ತತ್ತರಿಸಿದ್ದ ದೆಹಲಿಗೆ ಶುಕ್ರವಾರ ಮುಂಗಾರು ಪ್ರವೇಶಿಸಿದೆ. ಮೊದಲ ದಿನವೇ 88 ವರ್ಷಗಳ ದಾಖಲೆಯ 23 ಸೆಂ.ಮೀ. ಮಳೆಯಾಗಿದ್ದು, ರಾಜಧಾನಿಯಲ್ಲಿ ಪ್ರವಾಹ ಸೃಷ್ಟಿಯಾಗಿದೆ. 88 ವರ್ಷಗಳ ಬಳಿಕ ಸುರಿದ ವರ್ಷಧಾರೆಗೆ ತತ್ತರಿಸಿ ಹೋಗಿದೆ.

ಮುಂಜಾನೆ 4 ಗಂಟೆಯಿಂದ 8.30 ಗಂಟೆಯವರೆಗೆ ಮಳೆ ಸುರಿದಿದ್ದು, ದೆಹಲಿಯ ಪ್ರಮುಖ ಭಾಗಗಳು ಹಾಗೂ ಹಲವು ಪ್ರದೇಶಗಳು ಜಲಾವೃತಗೊಂಡಿವೆ. 8 ಮತ್ತು 10 ವರ್ಷ ವಯಸ್ಸಿನ ಇಬ್ಬರು ಮಕ್ಕಳು ಸೇರಿದಂತೆ ಪ್ರತ್ಯೇಕ ಘಟನೆಗಳಲ್ಲಿ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ.

ದೆಹಲಿ ವಿಮಾನ ನಿಲ್ದಾಣದಲ್ಲಿ ಮೊದಲ ಸಾವು ವರದಿಯಾಗಿದೆ, 45 ವರ್ಷದ ಕ್ಯಾಬ್ ಡ್ರೈವರ್ ಕಾರಿನ ಮೇಲೆ ಮೇಲ್ಚಾವಣಿ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಮಳೆಯಿಂದಾಗಿ ವಸಂತ ವಿಹಾರ್ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡ ಕುಸಿದು ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಲಾವೃತವಾಗಿರುವ ದೆಹಲಿ ರಸ್ತೆ
ದಿಢೀರ್ ಮಳೆಗೆ ದೆಹಲಿ ತತ್ತರ, ಜನಜೀವನ ಅಸ್ತವ್ಯಸ್ತ; ಭೀಕರ ಚಿತ್ರಗಳು

ನ್ಯೂ ಉಸ್ಮಾನ್‌ಪುರ ಪ್ರದೇಶದಲ್ಲಿ 8 ಮತ್ತು 10 ವರ್ಷ ವಯಸ್ಸಿನ ಇಬ್ಬರು ಮಕ್ಕಳು ಸಂಜೆ ಮಳೆಯ ನೀರಿನ ಕೊಳದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ನೀರು ಮನೆಗಳಿಗೆ ನುಗ್ಗಿತು, ವಾಹನಗಳು ಮುಳುಗಿವೆ. ಮಳೆಯಿಂದಾಗಿ ಸಂಚಾರ ಅಸ್ತವ್ಯಸ್ತವಾಗಿ ಭಾರೀ ಟ್ರಾಫಿಕ್ ಗೆ ಕಾರಣವಾಯಿತು, ಟ್ರಾಫಿಕ್ ತೆರವುಗೊಳಿಸಲು ಗಂಟೆಗಟ್ಟಲೇ ಸಮಯ ತೆಗೆದುಕೊಂಡಿತು. ಇದರಿಂದ ಸಾವಿರಾರು ಪ್ರಯಾಣಿಕರು ಪರದಾಡುವಂತಾಯಿತು.

ಸಫ್ದರ್‌ಜಂಗ್ ಸ್ವಯಂಚಾಲಿತ ಹವಾಮಾನ ಕೇಂದ್ರವು 24 ಗಂಟೆಗಳಲ್ಲಿ 228.1 ಮಿಮೀ ಮಳೆಯನ್ನು ದಾಖಲಿಸಿದೆ, ಇದು 1936 ರಿಂದ 235 ಮಿಮೀ ಮಳೆಯಾದ ನಂತರ ಎರಡನೇ ಅತಿ ಹೆಚ್ಚುಮಳೆಯಾಗಿ ದಾಖಲೆ ಬರೆದಿದೆ. ಜೂನ್‌ನಲ್ಲಿ ಇದುವರೆಗೆ 234.5 ಮಿಮೀ ವಾಡಿಕೆ ಮಳೆಯಾಗಿದೆ. 88 ವರ್ಷಗಳ ಬಳಿಕ ದೆಹಲಿಯಲ್ಲಿಒಂದೇ ದಿನ ಭಾರಿ ಪ್ರಮಾಣದ ಮಳೆಯಾಗಿದೆ. ಮುಂಗಾರು ಆರಂಭದ ಜೂನ್‌ನಲ್ಲಿ ಸಾಮಾನ್ಯವಾಗಿ ಸರಾಸರಿ 80.6 ಮಿ.ಮೀ ಮಳೆಯಾಗುತ್ತದೆ. ಆದರೆ, 24 ಗಂಟೆ ಅವಧಿಯಲ್ಲಿನಾಲ್ಕು ಪಟ್ಟು ಹೆಚ್ಚು ಮಳೆ ಸುರಿದಿದೆ. ಅಂದರೆ ಸುಮಾರು 640 ಮಿ.ಮೀ.ಮಳೆಯಾಗಿದೆ. ದೆಹಲಿಯಲ್ಲಿ ಸಾಮಾನ್ಯವಾಗಿ ಜೂನ್‌ನಲ್ಲಿ ಸರಾಸರಿ 80.6 ಮಿಮೀ. (ಸೆಂ.ಮೀ.) ಮಳೆಯಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com