'ನ್ಯಾಯಾಂಗ ಔಚಿತ್ಯ ಉಲ್ಲಂಘನೆ': ಬಿಲ್ಕಿಸ್ ಬಾನೊ ಪ್ರಕರಣದ ಅಪರಾಧಿ ಮತ್ತೆ ಸುಪ್ರೀಂ ಕೋರ್ಟ್ ಮೊರೆ

ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳಿಗೆ ನೀಡಿದ್ದ ವಿನಾಯಿತಿ ರದ್ದು ಮಾಡಿದ ಕೋರ್ಟ್ ಆದೇಶವನ್ನು 'ನ್ಯಾಯಾಂಗದ ಔಚಿತ್ಯ ಉಲ್ಲಂಘನೆ' ಎಂದು ಕರೆದಿರುವ ಪ್ರಕರಣದ ಅಪರಾಧಿಗಳು ಮತ್ತೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.
ಸುಪ್ರೀಂ ಕೋರ್ಟ್, ಬಿಲ್ಕಿಸ್ ಬಾನೋ
ಸುಪ್ರೀಂ ಕೋರ್ಟ್, ಬಿಲ್ಕಿಸ್ ಬಾನೋಸಂಗ್ರಹ ಚಿತ್ರ

ನವದೆಹಲಿ: ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳಿಗೆ ನೀಡಿದ್ದ ವಿನಾಯಿತಿ ರದ್ದು ಮಾಡಿದ ಕೋರ್ಟ್ ಆದೇಶವನ್ನು 'ನ್ಯಾಯಾಂಗದ ಔಚಿತ್ಯ ಉಲ್ಲಂಘನೆ' ಎಂದು ಕರೆದಿರುವ ಪ್ರಕರಣದ ಅಪರಾಧಿಗಳು ಮತ್ತೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.

ಹೌದು.. ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿಗಳಲ್ಲಿ ಒಬ್ಬರಾದ ರಾಧೇಶ್ಯಾಮ್ ಭಗವಾನದಾಸ್ ಶಾ ಅವರು ತಮಗೆ ಈ ಹಿಂದೆ ನೀಡಿದ್ದ ವಿನಾಯಿತಿಯನ್ನು ರದ್ದುಗೊಳಿಸಿದ ಜನವರಿ 8 ರ ತೀರ್ಪು ಮತ್ತು ಎಲ್ಲಾ ಹನ್ನೊಂದು ಅಪರಾಧಿಗಳಿಗೆ ಮರು ಜೈಲು ಶಿಕ್ಷೆ ವಿಧಿಸಿರುವುದು ನ್ಯಾಯಾಂಗವಾಗಿ ಅಸಮರ್ಪಕವಾಗಿದೆ ಎಂದು ಆರೋಪಿಸಿ ಮತ್ತೆ ಸುಪ್ರೀಂ ಕೋರ್ಟ್‌ನ ಬಾಗಿಲು ತಟ್ಟಿದ್ದಾರೆ.

ರಾಧೇಶ್ಯಾಮ್ ಭಗವಾನದಾಸ್ ಶಾ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿರುವ ಮಾಹಿತಿ TNIEಗೆ ಲಭ್ಯವಾಗಿದ್ದು, ನ್ಯಾಯಮೂರ್ತಿ ಬಿವಿ ನಾಗರತ್ನ ಮತ್ತು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ನೇತೃತ್ವದ ದ್ವಿಸದಸ್ಯ ಪೀಠವು (ನ್ಯಾಯಮೂರ್ತಿ ರಸ್ತೋಗಿ ನೇತೃತ್ವದ ಪೀಠ) ಮತ್ತೊಂದು ದ್ವಿಸದಸ್ಯ ಪೀಠವನ್ನು (ನ್ಯಾಯಮೂರ್ತಿ ರಸ್ತೋಗಿ ನೇತೃತ್ವದ) ಒಪ್ಪುವುದಿಲ್ಲವಾದ್ದರಿಂದ, ಈ ವಿಷಯವನ್ನು ದೊಡ್ಡ ನ್ಯಾಯಾಲಯಕ್ಕೆ ಉಲ್ಲೇಖಿಸಬೇಕಾಗಿತ್ತು ಎಂದು ಷಾ ಅವರ ಮನವಿಯಲ್ಲಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿದೆ.

ಸುಪ್ರೀಂ ಕೋರ್ಟ್, ಬಿಲ್ಕಿಸ್ ಬಾನೋ
ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗೆ 10 ದಿನಗಳ ಪೆರೋಲ್ ನೀಡಿದ ಗುಜರಾತ್ ಹೈಕೋರ್ಟ್

ಷಾ ಅವರು ತಮ್ಮ ವಕೀಲ ರಿಷಿ ಮಲ್ಹೋತ್ರಾ ಮೂಲಕ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ನ್ಯಾಯಮೂರ್ತಿ ನಾಗರತ್ನ ನೇತೃತ್ವದ ದ್ವಿಸದಸ್ಯ ಪೀಠವು ಸುಪ್ರೀಂ ಕೋರ್ಟ್‌ನ ಮತ್ತಿಬ್ಬರು ನ್ಯಾಯಮೂರ್ತಿಗಳಾದ ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಮತ್ತು ವಿಕ್ರಮ್ ನಾಥ್ ಅವರು ನೀಡಿದ ತೀರ್ಪನ್ನು ರದ್ದುಗೊಳಿಸಿರುವುದು ಕಾನೂನಿನಲ್ಲಾದ ತಪ್ಪು ಎಂದು ಅವರು ಹೇಳಿದ್ದಾರೆ.

ಈ ಕುರಿತು TNIE ಯೊಂದಿಗೆ ಮಾತನಾಡಿದ ಮಲ್ಹೋತ್ರಾ, ಅಕಾಲಿಕ ಬಿಡುಗಡೆಗಾಗಿ ಅಪರಾಧಿಯ ಮನವಿಯನ್ನು ಮರುಪರಿಶೀಲಿಸುವಂತೆ ಸುಪ್ರೀಂ ಕೋರ್ಟ್‌ಗೆ ಒತ್ತಾಯಿಸಿದ್ದೇನೆ ಎಂದು ಹೇಳಿದರು. ದ್ವಿಸದಸ್ಯ ಪೀಠದ ತೀರ್ಪುಗಳಲ್ಲಿ ಯಾವುದು ಚಾಲ್ತಿಯಲ್ಲಿರುತ್ತದೆ ಎಂಬುದನ್ನು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸುವವರೆಗೆ ತಮ್ಮ ಕಕ್ಷಿದಾರ ಶಾಗೆ ಜಾಮೀನು ನೀಡಬೇಕು ಎಂದು ಕೋರಿದ್ದಾರೆ.

"ನ್ಯಾಯಮೂರ್ತಿಗಳಾದ ನಾಗರತ್ನ ಮತ್ತು ಭೂಯಾನ್ ಅವರು ಜನವರಿ 8 ರ ತೀರ್ಪು ನ್ಯಾಯಾಂಗ ಅವ್ಯವಹಾರದ ಪ್ರಕರಣ ಮಾತ್ರವಲ್ಲದೆ ಭವಿಷ್ಯದಲ್ಲಿ ಕಾನೂನಿನ ಪ್ರಾಶಸ್ತ್ಯವನ್ನು ಅನ್ವಯಿಸಬೇಕಾದ ಅನಿಶ್ಚಿತತೆ ಮತ್ತು ಅವ್ಯವಸ್ಥೆಯನ್ನು ಸೃಷ್ಟಿಸುತ್ತದೆ" ಎಂದು ಶಾ ಅವರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್, ಬಿಲ್ಕಿಸ್ ಬಾನೋ
ಇವರು ಹಿರಿಯ ವಕೀಲೆ ಶೋಭಾ ಗುಪ್ತಾ: ಬಿಲ್ಕಿಸ್ ಬಾನು ಪರ ಕಾನೂನು ಹೋರಾಟ ನಡೆಸಿದ ಚಾಂಪಿಯನ್

2002 ರ ಗುಜರಾತ್ ಗಲಭೆಯಲ್ಲಿ ಬಾನೋ ಮತ್ತು ಅವರ ಕುಟುಂಬ ಸದಸ್ಯರ ಮೇಲೆ ಸಾಮೂಹಿಕ ಅತ್ಯಾಚಾರಕ್ಕಾಗಿ ಜೀವಾವಧಿ ಶಿಕ್ಷೆಗೆ ಒಳಗಾದ 11 ಅಪರಾಧಿಗಳಿಗೆ 2022 ರ ಆಗಸ್ಟ್ 15 ರ ಗುಜರಾತ್ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಜನವರಿ 8 ರಂದು ತನ್ನ ಮಹತ್ವದ ತೀರ್ಪಿನಲ್ಲಿ ರದ್ದುಗೊಳಿಸಿತ್ತು. ಪ್ರಕರಣದ 11 ಅಪರಾಧಿಗಳನ್ನು ಬಿಡುಗಡೆ ಮಾಡಿದ ಗುಜರಾತ್ ಸರ್ಕಾರದ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದು ಪಡಿಸಿತ್ತು. ಅಂತೆಯೇ ಇವರೆಲ್ಲರೂ ಜನವರಿ 21ರೊಳಗೆ ಅಂದರೆ ಎರಡು ವಾರಗಳಲ್ಲಿ ಶರಣಾಗತರಾಗಬೇಕು ಎಂದು ಸೂಚಿಸಿತ್ತು.

2022 ರ ಮೇ 2022 ರ ತೀರ್ಪಿನ ನಂತರ ಗುಜರಾತ್ ಸರ್ಕಾರವು ಆಗಸ್ಟ್ 15, 2022 ರಂದು ಎಲ್ಲಾ 11 ಅಪರಾಧಿಗಳಿಗೆ ಕ್ಷಮೆ ನೀಡಿತು, ಇದರಲ್ಲಿ ಅಪರಾಧ ಎಸಗಿದ ರಾಜ್ಯದ ನೀತಿಗೆ ಅನುಗುಣವಾಗಿ ಉಪಶಮನದ ಅರ್ಜಿಯನ್ನು ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com