ಹಿಮಾಚಲ ಪ್ರದೇಶದಲ್ಲಿ ಹಿಮಪಾತ: ಚೆನಾಬ್‌ ನದಿ ಹರಿವು ಸ್ಥಗಿತ; ರಾಜ್ಯದ 650ಕ್ಕೂ ಹೆಚ್ಚು ರಸ್ತೆ ಬಂದ್!

ಹಿಮಾಚಲ ಪ್ರದೇಶದಲ್ಲಿ ಸಂಭವಿಸುತ್ತಿರುವ ಭಾರಿ ಹಿಮಪಾತದಿಂದಾಗಿ ಅಲ್ಲಿನ ಚೆನಾಬ್‌ ನದಿ ಹರಿವೇ ಸ್ಥಗತವಾಗಿದ್ದು, ಹಿಮಮಳೆಯಿಂದಾಗಿ ರಾಜ್ಯದ 650ಕ್ಕೂ ಹೆಚ್ಚು ರಸ್ತೆಗಳು ಮುಚ್ಟಲ್ಪಟ್ಟಿವೆ ಎಂದು ಹೇಳಲಾಗಿದೆ.
ಹಿಮಾಚಲ ಪ್ರದೇಶದಲ್ಲಿ ಹಿಮಪಾತ
ಹಿಮಾಚಲ ಪ್ರದೇಶದಲ್ಲಿ ಹಿಮಪಾತPTI

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಸಂಭವಿಸುತ್ತಿರುವ ಭಾರಿ ಹಿಮಪಾತದಿಂದಾಗಿ ಅಲ್ಲಿನ ಚೆನಾಬ್‌ ನದಿ ಹರಿವೇ ಸ್ಥಗತವಾಗಿದ್ದು, ಹಿಮಮಳೆಯಿಂದಾಗಿ ರಾಜ್ಯದ 650ಕ್ಕೂ ಹೆಚ್ಚು ರಸ್ತೆಗಳು ಮುಚ್ಟಲ್ಪಟ್ಟಿವೆ ಎಂದು ಹೇಳಲಾಗಿದೆ.

ಹಿಮಾಚಲ ಪ್ರದೇಶದ ಲಾಹೌಲ್ ಮತ್ತು ಸ್ಪಿಟಿಯಲ್ಲಿನ ಹಿಮಪಾತವು ಚೆನಾಬ್‌ನ ಹರಿವನ್ನು ತಡೆ ಹಿಡಿದಿದ್ದು, ಜಿಲ್ಲೆಯ ಗ್ರಾಮವೊಂದರಲ್ಲಿ ಭಾನುವಾರ ಮುಂಜಾನೆ ಹಿಮಕುಸಿತ ಸಂಭವಿಸಿದ್ದು, ಚೆನಾಬ್ ನದಿಯ ಹರಿವಿಗೆ ಅಡ್ಡಿಯುಂಟಾಗಿದೆ. ಲಾಹೌಲ್ ಮತ್ತು ಸ್ಪಿಟಿಯ ಜಸ್ರತ್ ಗ್ರಾಮದ ಬಳಿಯ ದಾರಾ ಜಲಪಾತದಲ್ಲಿ ಹಿಮಕುಸಿತದ ನಂತರ ಚೆನಾಬ್‌ ನದಿಯಲ್ಲಿ ನೀರಿನ ಹರಿವಿಗೆ ಅಡಚಣೆಯುಂಟಾಗಿದೆ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ಪ್ರವಾಹ ಮತ್ತು ಹಿಮಪಾತದ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಹಿಮಪಾತ
ಹಿಮಾಚಲ ಪ್ರದೇಶದಲ್ಲಿ ಹಿಮಪಾತ: 263 ರಸ್ತೆಗಳು, 4 ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಡಿತ

ಕಳೆದ ಎರಡು ದಿನಗಳಲ್ಲಿ ಭಾರೀ ಹಿಮ ಮತ್ತು ಮಳೆ ಹಿಮಾಚಲ ಪ್ರದೇಶದಲ್ಲಿ ಅರ್ಧ ಡಜನ್‌ಗಿಂತಲೂ ಹೆಚ್ಚು ಹಿಮಕುಸಿತಗಳು ಮತ್ತು ಭೂಕುಸಿತ ಪ್ರಕರಣಗಳನ್ನು ಉಂಟುಮಾಡಿದೆ. ಇದು ಐದು ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ 650 ಕ್ಕೂ ಹೆಚ್ಚು ರಸ್ತೆಗಳು ಮುಚ್ಚಲು ಕಾರಣವಾಗಿದೆ. ಅಂತೆಯೇ ಹಿಮಪಾತದಲ್ಲಿ ಇದುವರೆಗೆ ಯಾವುದೇ ಸಾವು ನೋವು ಸಂಭವಿಸಿಲ್ಲ. ಸ್ಪಿಟಿಯ ಜಸ್ರತ್ ಗ್ರಾಮದ ಪಕ್ಕದ ಗ್ರಾಮಗಳಾದ ಜೋಬ್ರಾಂಗ್, ರಾಪಿ, ಜಸ್ರತ್, ತರಂಡ್ ಮತ್ತು ಥಾರೋಟ್‌ನ ನಿವಾಸಿಗಳು ಜಾಗರೂಕರಾಗಿರಲು ಮತ್ತು ತುರ್ತು ಸಂದರ್ಭದಲ್ಲಿ ಹತ್ತಿರದ ಪೊಲೀಸ್ ಪೋಸ್ಟ್‌ಗೆ ಮಾಹಿತಿ ತಿಳಿಸಲು ಸೂಚಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ತಿಳಿಸಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಹಿಮಪಾತ
ಹಿಮಾಚಲ ಪ್ರದೇಶದಲ್ಲಿ ಹಿಮಪಾತ: 263 ರಸ್ತೆಗಳು, 4 ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಡಿತ

ಲಾಹೌಲ್ ಉಪವಿಭಾಗದ ತಾಂಡಿ ಸೇತುವೆಯಲ್ಲಿ ಹಿಮಕುಸಿತದಲ್ಲಿ ಕೆಲವು ಅಂಗಡಿಗಳು ಹೂತು ಹೋಗಿವೆ. ಲಾಹೌಲ್ ಮತ್ತು ಸ್ಪಿಟಿಯಲ್ಲಿ ರಾಶೆಲ್ ಗ್ರಾಮದ ಸೆಲಿ ನಾಲಾ, ಜೋಬ್ರಾಂಗ್‌ನಲ್ಲಿ ಫಲ್ದಿ ನಲ್ಲಾ, ಲೋಹ್ನಿಯಲ್ಲಿ ಚೋ ವೀರ್ ಮೋಡ್ ಮತ್ತು ಉದಯ್‌ಪುರ ಗ್ರಾಮದ ಬಳಿ ತಾತಾ ನಾಲಾದಲ್ಲಿ ಹಲವಾರು ಹಿಮಕುಸಿತಗಳು ಸಂಭವಿಸಿವೆ. ಕಿನ್ನೌರ್ ಜಿಲ್ಲೆಯ ಸಾಂಗ್ಲಾದ ಕರ್ಚಮ್ ಹೆಲಿಪ್ಯಾಡ್ ಬಳಿಯ ಸ್ಥಳದಿಂದ ಹಿಮಕುಸಿತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುಡ್ಡಗಾಡು ಪ್ರದೇಶದಲ್ಲಿ ಐದು ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ ಒಟ್ಟು 652 ರಸ್ತೆಗಳನ್ನು ವಾಹನ ಸಂಚಾರಕ್ಕೆ ಮುಚ್ಚಲಾಗಿದೆ. ಲಾಹೌಲ್ ಮತ್ತು ಸ್ಪಿತಿಯಲ್ಲಿ ಗರಿಷ್ಠ 290 ರಸ್ತೆಗಳನ್ನು ಮುಚ್ಚಲಾಗಿದೆ, ನಂತರ ಶಿಮ್ಲಾದಲ್ಲಿ 149, ಚಂಬಾದಲ್ಲಿ 100, ಕಿನ್ನೌರ್‌ನಲ್ಲಿ 75, ಕುಲುವಿನಲ್ಲಿ 32, ಮಂಡಿಯಲ್ಲಿ ಐದು ಮತ್ತು ಕಂಗ್ರಾದಲ್ಲಿ ಒಂದು ರಸ್ತೆಗಳನ್ನು ಮುಚ್ಚಲಾಗಿದೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ತಿಳಿಸಿದೆ.

ಹಿಮಾಚಲ ಪ್ರದೇಶದಲ್ಲಿ ಹಿಮಪಾತ
ಅಕಾಲಿಕ ಹಿಮಪಾತ, ಭಾರಿ ಮಳೆ; ಲಡಾಖ್‌ನಲ್ಲಿ ರೆಡ್ ಅಲರ್ಟ್ ಘೋಷಣೆ

ಹಿಮಪಾತದಿಂದಾಗಿ ರಸ್ತೆಗಳು ಜಾರುತ್ತಿರುವ ಕಾರಣ ಶಿಮ್ಲಾದ ಮೇಲ್ಭಾಗದ ಪ್ರದೇಶಗಳಿಗೆ ಪ್ರಯಾಣಿಸದಂತೆ ಜನರಿಗೆ ಸೂಚಿಸಲಾಗಿದೆ. ಗುಂಡಿ ಬಿದ್ದಿರುವ ರಸ್ತೆಗಳನ್ನು ತೆರವುಗೊಳಿಸಿ ಸಂಚಾರ ಪುನರಾರಂಭಿಸುವ ಕಾರ್ಯ ನಡೆಯುತ್ತಿದೆ ಎಂದು ಶಿಮ್ಲಾ ಉಪ ಆಯುಕ್ತ ಅನುಪಮ್ ಕಶ್ಯಪ್ ತಿಳಿಸಿದ್ದಾರೆ.

ಲಾಹೌಲ್ ಮತ್ತು ಸ್ಪಿತಿ, ಕಿನ್ನೌರ್ ಮತ್ತು ಚಂಬಾ ಭಾಗಗಳಲ್ಲಿ ಭಾರೀ ಹಿಮಪಾತವು ವಿದ್ಯುತ್ ಮತ್ತು ಸಂವಹನವನ್ನು ಅಡ್ಡಿಪಡಿಸಿದ್ದರಿಂದ ಜನಜೀವನ ಅಸ್ತವ್ಯಸ್ತವಾಗಿದೆ. ರಾಜ್ಯದಲ್ಲಿ 1,749 ಟ್ರಾನ್ಸ್‌ಫಾರ್ಮರ್‌ಗಳು ಸೇವೆಯಿಂದ ಹೊರಗುಳಿದಿದ್ದು, 78 ನೀರು ಸರಬರಾಜು ಯೋಜನೆಗಳು ಸ್ಥಗಿತಗೊಂಡಿವೆ ಎಂದು ತುರ್ತು ಕಾರ್ಯಾಚರಣೆ ಕೇಂದ್ರ ತಿಳಿಸಿದೆ.

ಇಲ್ಲಿನ ಹವಾಮಾನ ಇಲಾಖೆ ಹೊರಡಿಸಿರುವ ಬುಲೆಟಿನ್ ಪ್ರಕಾರ, ರೋಹ್ಟಾಂಗ್ ನಲ್ಲಿ ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಗರಿಷ್ಠ ಅಂದರೆ 150 ಸೆಂ.ಮೀ ಹಿಮಪಾತವಾಗಿದ್ದು, ಚಿತ್ಕುಲ್ ಮತ್ತು ಅಟಲ್ ಸುರಂಗದಲ್ಲಿ 120 ಸೆಂ.ಮೀ ಹಿಮ, ಸೋಲಾಂಗ್ 75 ಸೆಂಮೀ, ಖದ್ರಾಲಾ 62 ಸೆಂಮೀ, ಕಲ್ಪಾ, ಕಾಜಾ ಮತ್ತು ಮೂರಾಂಗ್ ತಲಾ 60 ಸೆಂಮೀ, ಸಾಂಗ್ಲಾ 52.5 ಸೆಂಮೀ, ನಿಚಾರ್ ಮತ್ತು ಗೊಂಡ್ಲಾ ತಲಾ 45 ಸೆಂಮೀ, ಕೀಲಾಂಗ್ 28 ಸೆಂ.ಮೀ, ನರಕಂದ, ಕಿಲ್ಲರ್, ಉದಯಪುರ, ಸಿಸ್ಸು ಮತ್ತು ಚಾನ್ಸೆಲ್ ತಲಾ 30 ಸೆಂ.ಮೀ, ರೆಕಾಂಗ್ ಪಿಯೊ 15 ಸೆಂಮೀ, ಶಿಲ್ಲಾರೊ ಐದು ಸೆಂ.ಮೀ ಮತ್ತು ಕುಫ್ರಿ ಎರಡು ಸೆಂ.ಮೀ ಹಿಮಮಳೆಯಾಗಿದೆ ಎಂದು ಬುಲೆಟಿನ್ ಹೇಳಿದೆ.

ಹಿಮಾಚಲ ಪ್ರದೇಶದಲ್ಲಿ ಹಿಮಪಾತ
ಟರ್ಕಿಯಲ್ಲಿ ಮತ್ತೆರಡು ಬಾರಿ ಪ್ರಬಲ ಕಂಪನ: ಮೃತರ ಸಂಖ್ಯೆ 7,900ಕ್ಕೆ ಏರಿಕೆ; ರಕ್ಷಣಾ ಕಾರ್ಯಾಚರಣೆಗೆ ಹಿಮಪಾತ ಅಡ್ಡಿ

ಹಿಮಾಚಲ ಪ್ರದೇಶದ ಹಲವಾರು ಭಾಗಗಳಲ್ಲಿ ಮಧ್ಯಂತರ ಮಳೆ ಸುರಿದಿದ್ದು, ಮನಾಲಿಯಲ್ಲಿ 88 ಮಿಮೀ ಮಳೆ ದಾಖಲಾಗಿದೆ, ಇದು ರಾಜ್ಯದಲ್ಲಿ ಅತಿ ಹೆಚ್ಚು ಮಳೆಯಾಗಿದೆ, ನಂತರ ನಹಾನ್ (84 ಮಿಮೀ), ಪಚಾಡ್ (76 ಮಿಮೀ), ಸರಹನ್ (70 ಮಿಮೀ), ಕಾಂಗ್ರಾ (65 ಮಿಮೀ), ರಾಂಪುರ (64 ಮಿಮೀ), ರೋಹ್ರು (60 ಮಿಮೀ), ಕೊಟ್‌ಖೈ (56 ಮಿಮೀ), ಧರ್ಮಶಾಲಾ (55 ಮಿಮೀ), ಡಾಲ್‌ಹೌಸಿ ಮತ್ತು ಗುಲೇರ್ (ತಲಾ 53 ಮಿಮೀ) ಮತ್ತು ಚಂಬಾ (50 ಮಿಮೀ). ಮಳೆಯಾಗಿದೆ. ರಾಜ್ಯದ ರಾಜಧಾನಿ ಶಿಮ್ಲಾದಲ್ಲಿ 35 ಮಿಮೀ ಮಳೆಯಾಗಿದೆ ಎಂದು ಬುಲೆಟಿನ್ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com