2024 ಲೋಕಸಭಾ ಚುನಾವಣೆ: ಎಎಪಿ ಪ್ರಚಾರಕ್ಕೆ ಚಾಲನೆ ನೀಡಿದ ಅರವಿಂದ್ ಕೇಜ್ರಿವಾಲ್, ಭಗವಂತ್ ಮಾನ್

ಎಎಪಿ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪಂಜಾಬ್ ಸಿಎಂ ಭಗವಂತ್ ಮಾನ್ ಅವರೊಂದಿಗೆ ಶುಕ್ರವಾರ ಇಲ್ಲಿ ಪಕ್ಷದ ಲೋಕಸಭಾ ಚುನಾವಣಾ ಪ್ರಚಾರವನ್ನು 'ಸಂಸದ್ ಮೇ ಭಿ ಕೇಜ್ರಿವಾಲ್, ತೋ ದಿಲ್ಲಿ ಹೋಗಿ ಔರ್ ಖುಷ್ ಹಾಲ್' ಎಂಬ ಘೋಷಣೆಯೊಂದಿಗೆ ಪ್ರಾರಂಭಿಸಿದರು.
ಆಮ್ ಆದ್ಮಿ ಪಾರ್ಟಿ
ಆಮ್ ಆದ್ಮಿ ಪಾರ್ಟಿ

ನವದೆಹಲಿ: ಎಎಪಿ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪಂಜಾಬ್ ಸಿಎಂ ಭಗವಂತ್ ಮಾನ್ ಅವರೊಂದಿಗೆ ಶುಕ್ರವಾರ ಇಲ್ಲಿ ಪಕ್ಷದ ಲೋಕಸಭಾ ಚುನಾವಣಾ ಪ್ರಚಾರವನ್ನು 'ಸಂಸದ್ ಮೇ ಭಿ ಕೇಜ್ರಿವಾಲ್, ತೋ ದಿಲ್ಲಿ ಹೋಗಿ ಔರ್ ಖುಷ್ ಹಾಲ್' ಎಂಬ ಘೋಷಣೆಯೊಂದಿಗೆ ಪ್ರಾರಂಭಿಸಿದರು.

ಏಪ್ರಿಲ್-ಮೇ ತಿಂಗಳಲ್ಲಿ ದೇಶದಾದ್ಯಂತ ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ.

ಡಿಡಿಯು ಮಾರ್ಗದಲ್ಲಿರುವ ಆಮ್ ಆದ್ಮಿ ಪಕ್ಷದ ಪ್ರಧಾನ ಕಚೇರಿಯಿಂದ ಪಕ್ಷದ ಇತರ ಮುಖಂಡರು ಮತ್ತು ಕಾರ್ಯಕರ್ತರ ಸಮ್ಮುಖದಲ್ಲಿ ಪ್ರಚಾರಕ್ಕೆ ಚಾಲನೆ ನೀಡಲಾಯಿತು.

'ನನ್ನ ಕುಟುಂಬವಾಗಿರುವ ದೆಹಲಿಯ ಜನರಿಗೆ ಸೇವೆ ಸಲ್ಲಿಸಲು ನಾನು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಿದ್ದೇನೆ. ನಮ್ಮ ಘೋಷವಾಕ್ಯ 'ಸಂಸದ್ ಮೇ ಭಿ ಕೇಜ್ರಿವಾಲ್, ತೋ ದಿಲ್ಲಿ ಹೋಗಿ ಔರ್ ಖುಷ್ ಹಾಲ್' (ಸಂಸತ್‌ನಲ್ಲಿ ಕೇಜ್ರಿವಾಲ್ ಅವರೊಂದಿಗೆ ದೆಹಲಿ ಹೆಚ್ಚು ಸಮೃದ್ಧವಾಗಲಿದೆ)' ಎಂದು ಕೇಜ್ರಿವಾಲ್ ಹೇಳಿದರು.

ಆಮ್ ಆದ್ಮಿ ಪಾರ್ಟಿ
ದೆಹಲಿಯಲ್ಲಿ ಲೋಕಸಭೆ ಚುನಾವಣಾ ಪ್ರಚಾರಕ್ಕೆ ಕಾಂಗ್ರೆಸ್-ಎಎಪಿ ಜಂಟಿ ಸಮಿತಿ ರಚನೆ

ದೆಹಲಿ ಮತ್ತು ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರವಿದೆ. ಈ ಎರಡು ರಾಜ್ಯಗಳಲ್ಲಿ ಮಾತ್ರ ಉಚಿತ ವಿದ್ಯುತ್ ಸರಬರಾಜು ಇದೆ. ನೀವು ದೆಹಲಿಯಲ್ಲಿ ಸಾಮಾನ್ಯ ವ್ಯಕ್ತಿಯನ್ನು ಆಯ್ಕೆ ಮಾಡಿ, ಅಧಿಕಾರಕ್ಕೆ ತಂದ ಕಾರಣ ಅವರು ನಿಮ್ಮನ್ನು ದ್ವೇಷಿಸುತ್ತಾರೆ ಎಂದು ಅವರು ಹೇಳಿದರು.

ದೆಹಲಿ ಲೆಫ್ಟಿನೆಂಟ್ ಗವರ್ನರ್ ಮೂಲಕ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಎಎಪಿ ಸರ್ಕಾರ ಪ್ರಾರಂಭಿಸಿದ ಪ್ರತಿಯೊಂದು ಯೋಜನೆಯನ್ನು ಸ್ಥಗಿತಗೊಳಿಸುತ್ತದೆ. ಹೀಗಾಗಿ, ದೆಹಲಿಯ ಎಲ್ಲಾ ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ವಿಪಕ್ಷದ ಅಭ್ಯರ್ಥಿಗಳನ್ನು ಸಂಸತ್ತಿಗೆ ಕಳುಹಿಸುವ ಮೂಲಕ ಅವರನ್ನು ಬಲಪಡಿಸುವಂತೆ ಜನರಿಗೆ ಮನವಿ ಮಾಡಿದರು.

ಅವರು ಮೊಹಲ್ಲಾ ಕ್ಲಿನಿಕ್‌ಗಳನ್ನು ಬುಲ್ಡೋಜರ್‌ಗಳಿಂದ ಕೆಡವಿದರು, ಅವರು ಮನೆಯಿಂದ ಮನೆಗೆ ಪಡಿತರ ವಿತರಣೆ ಯೋಜನೆ, ಆಸ್ಪತ್ರೆಗಳಲ್ಲಿ ಪರೀಕ್ಷೆಗಳು ಮತ್ತು ಔಷಧಿಗಳನ್ನು ನಿಲ್ಲಿಸಿದರು. ಎಎಪಿ ಕಾರ್ಯಕರ್ತರು ಚುನಾವಣಾ ಪ್ರಚಾರದ ವೇಳೆ ಎಎಪಿ ನೇತೃತ್ವದ ಸರ್ಕಾರಗಳು ಮಾಡಿದ ಕೆಲಸಗಳನ್ನು ವಿವರಿಸುವ ಕರಪತ್ರಗಳನ್ನು ಹಂಚಲಿದ್ದಾರೆ ಎಂದು ಅವರು ಹೇಳಿದರು.

ಆಮ್ ಆದ್ಮಿ ಪಾರ್ಟಿ
Lok Sabha Elections: ದೆಹಲಿ, ಗುಜರಾತ್, ಗೋವಾ, ಹರಿಯಾಣದಲ್ಲಿ ಲೋಕಸಭೆ ಸೀಟು ಹಂಚಿಕೆ ಘೋಷಿಸಿದ ಎಎಪಿ-ಕಾಂಗ್ರೆಸ್

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮಾತನಾಡಿ, ತಮ್ಮ ರಾಜ್ಯವು ಲೋಕಸಭೆ ಚುನಾವಣೆಯಲ್ಲಿ 13-0 ಫಲಿತಾಂಶವನ್ನು ಎಎಪಿ ಪರವಾಗಿ ಪಡೆಯಲಿದೆ. ದೆಹಲಿಯಲ್ಲಿ ಕೇಜ್ರಿವಾಲ್ ಸರ್ಕಾರದ ಕೆಲಸಕ್ಕೆ ಕೇಂದ್ರವು ಅಡ್ಡಿಪಡಿಸುತ್ತಿದೆ ಮತ್ತು ಪಂಜಾಬ್‌ಗೆ ದೊರಕಬೇಕಿರುವ ಅನುದಾನವನ್ನು ತಡೆಹಿಡಿಯುತ್ತಿದೆ ಎಂದು ಆರೋಪಿಸಿದ್ದಾರೆ.

ಲೋಕಸಭೆಯಲ್ಲಿ ಎಎಪಿ ಹೆಚ್ಚಿನ ಸಂಸದರನ್ನು ಹೊಂದಿದ್ದರೆ ಪಂಜಾಬ್‌ನ ಅನುದಾನವನ್ನು ನಿಲ್ಲಿಸಲು ಮತ್ತು ದೆಹಲಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ನಿಲ್ಲಿಸಲು ಯಾರೂ ಧೈರ್ಯ ಮಾಡುವುದಿಲ್ಲ ಎಂದು ಅವರು ಹೇಳಿದರು.

ದೆಹಲಿ, ಗುಜರಾತ್ ಮತ್ತು ಹರಿಯಾಣದಲ್ಲಿ ಇಂಡಿಯಾ ಮೈತ್ರಿಕೂಟದ ಪಕ್ಷಗಳೊಂದಿಗೆ ಮಾಡಿಕೊಂಡಿರುವ ಸೀಟು ಹಂಚಿಕೆ ಒಪ್ಪಂದದ ಅಡಿಯಲ್ಲಿ ಕಾಂಗ್ರೆಸ್ ಸಹಯೋಗದೊಂದಿಗೆ ಎಎಪಿ ಲೋಕಸಭಾ ಚುನಾವಣೆಯನ್ನು ಎದುರಿಸಲಿದೆ. ಆದರೆ, ಪಂಜಾಬ್‌ನಲ್ಲಿ ಎರಡೂ ಪಕ್ಷಗಳು ಲೋಕಸಭೆ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿವೆ.

ದೆಹಲಿಯ ಏಳು ಲೋಕಸಭಾ ಸ್ಥಾನಗಳ ಪೈಕಿ ನಾಲ್ಕರಲ್ಲಿ ಎಎಪಿ ಸ್ಪರ್ಧಿಸಲಿದೆ ಮತ್ತು ಉಳಿದ ಮೂರರಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ.

ಗುಜರಾತ್‌ನ ಭರೂಚ್, ಜಾಮ್‌ನಗರ ಮತ್ತು ಹರಿಯಾಣದ ಕುರುಕ್ಷೇತ್ರದಲ್ಲಿ ಎಎಪಿ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಇದರೊಂದಿಗೆ ಅಸ್ಸಾಂನ ಗುವಾಹಟಿ, ದಿಬ್ರುಗಢ ಮತ್ತು ಸೋನಿತ್‌ಪುರ ಲೋಕಸಭಾ ಕ್ಷೇತ್ರಗಳಿಂದಲೂ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com