ನವದೆಹಲಿ: ಮಗನ ಮದುವೆಗೆ ಕೆಲವೇ ಗಂಟೆ ಬಾಕಿ ಇರುವ ಹೊತ್ತಲ್ಲೇ ಜಿಮ್ ಮಾಲೀಕನೊಬ್ಬ ತನ್ನ ಮಗನನ್ನೇ ಹತ್ಯೆ ಮಾಡಿರುವ ಘಟನೆ ದಕ್ಷಿಣ ದೆಹಲಿಯಲ್ಲಿ ನಡೆದಿದೆ.
ಗೌರವ್ ಸಿಂಘಾಲ್ (29) ಎಂಬಾತನನ್ನು ಆತನ ತಂದೆ ರಂಗಲಾಲ್ ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ರಂಗಲಾಲ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಗೌರವ್ ತನ್ನ ಮದುವೆಯ ಮೆರವಣಿಗೆಗೆ ಹೊರಟಿದ್ದ. ಈ ವೇಳೆ ಆತನ ತಂದೆಯೇ ಚೂಪಾದ ಆಯುಧ ಬಳಸಿ ಕೊಂದಿದ್ದಾನೆ.
ಗೌತಮ್ ಜಿಮ್ ನಡೆಸುತ್ತಿದ್ದ. ದೇವ್ಲಿ ಎಕ್ಸ್‌ಟೆನ್ಶನ್‌ನಲ್ಲಿರುವ ಮನೆಯಲ್ಲೇ ಆತನ ಎದೆಗೆ 15 ಬಾರಿ ಇರಿದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಜಿಮ್ ಮಾಲೀಕನಾಗಿರುವ ಗೌರವ್ ಸಿಂಘಾಲ್ ಅವರಿಗೆ ಮದುವೆ ಇಷ್ಟವಿರಲಿಲ್ಲ. ಆದರೆ, ರಂಗಲಾಲ್ ಅವರು ಪದೇಪದೆ ಒತ್ತಾಯಿಸಿದ ಕಾರಣ ಅವರು ಮದುವೆಗೆ ಒಪ್ಪಿದ್ದರು.
ಇನ್ನು, ಇದೇ ವಿಷಯಕ್ಕೆ ಸಂಬಂಧಿಸಿದಂತೆ ರಂಗಲಾಲ್ ಅವರನ್ನು ಗೌರವ್ ಸಿಂಘಾಲ್ ಅವರು ಅವಮಾನಿಸುತ್ತಿದ್ದರು. ಎಲ್ಲರ ಎದುರು ಮಗನಿಂದಲೇ ಅವಮಾನಕ್ಕೀಡಾದ ರಂಗಲಾಲ್ ಅವರು ಕುದ್ದುಹೋಗಿದ್ದರು. ಬುಧವಾರ ರಾತ್ರಿಯೂ ಇಬ್ಬರ ಮಧ್ಯೆ ಜಗಳ ನಡೆದಿದ್ದು, ಕುಪಿತಗೊಂಡ ರಂಗಲಾಲ್ ಅವರು ಮಗನನ್ನೇ ಹತ್ಯೆಗೈದಿದ್ದಾರೆ ಎಂದು ತಿಳಿದುಬಂದಿದೆ.
ಮದುವೆ ಮೆರವಣಿಗೆ ಮಾಡಲು ಮದುಮಗನಿಗಾಗಿ ಜನರು ಕಾಯುತ್ತಿದ್ದರು. ಆದರೆ ಗೌರವ್ ಬರಲಿಲ್ಲ. ಅನುಮಾನಗೊಂಡು ಅತಿಥಿಗಳು ಹುಡುಕಾಟ ನಡೆಸಿದ್ದಾರೆ. ಆದರೆ ಪಾರ್ಕ್‌ವೊಂದರಲ್ಲಿ ಆತನ ಮೃತದೇಹ ಪತ್ತೆಯಾಗಿದೆ. ಸಂಭ್ರಮದ ಮನೆಯಲ್ಲಿ ಶೋಕದ ವಾತಾವರಣ ಮಡುಗಟ್ಟಿದೆ.
Advertisement