CAA ಅಡಿಯಲ್ಲಿ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಲು ಯಾವ ದಾಖಲೆಗಳು ಬೇಕಾಗುತ್ತವೆ? ಇಲ್ಲಿದೆ ಮಾಹಿತಿ...

ಭಾರತ ಸರ್ಕಾರವು ಪೌರತ್ವ (ತಿದ್ದುಪಡಿ) ಕಾಯ್ದೆ, 2019 (ಸಿಎಎ) ಅಡಿಯಲ್ಲಿ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಲು ಬಯಸುವ ವ್ಯಕ್ತಿಗಳಿಗೆ ವಿವರವಾದ ಮಾರ್ಗಸೂಚಿಗಳು ಮತ್ತು ದಾಖಲೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ನವದೆಹಲಿ: ಭಾರತ ಸರ್ಕಾರವು ಪೌರತ್ವ (ತಿದ್ದುಪಡಿ) ಕಾಯ್ದೆ, 2019 (ಸಿಎಎ) ಅಡಿಯಲ್ಲಿ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಲು ಬಯಸುವ ವ್ಯಕ್ತಿಗಳಿಗೆ ವಿವರವಾದ ಮಾರ್ಗಸೂಚಿಗಳು ಮತ್ತು ದಾಖಲೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಭಾರತಕ್ಕೆ ಬರುವ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಅಥವಾ ಕ್ರಿಶ್ಚಿಯನ್ನರು ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಬಹುದು.

ಅಧಿಸೂಚನೆ ಪ್ರಕಾರ, ಸಿಎಎ ಅಡಿಯಲ್ಲಿ ಭಾರತದ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಲು ಬಯಸುವವರು ಮೇಲೆ ಉಲ್ಲೇಖಿಸಲಾದ ಮೂರು ದೇಶಗಳಲ್ಲಿ ದೌರ್ಜನಕ್ಕೆ ಗುರಿಯಾಗಿ ಭಾರತಕ್ಕೆ ಬಂದ ಮುಸ್ಲಿಮೇತರರು ಆಗಿರಬೇಕು. 2014ರ ಡಿಸೆಂಬರ್ 31ಕ್ಕೆ ಮೊದಲು ಭಾರತಕ್ಕೆ ಬಂದಿರಬೇಕು.

ಪೌರತ್ವ ಬಯಸಿ ಅರ್ಜಿ ಸಲ್ಲಿಸುವುದಕ್ಕೆ ಆನ್‌ಲೈನ್‌ ಮೂಲಕ ಅವಕಾಶ ಕಲ್ಪಿಸಲಾಗಿದೆ. ಅರ್ಜಿದಾರರು https://indiancitizenshiponline.nic.in ವೆಬ್‌ಸೈಟ್‌ನಲ್ಲಿ ಮತ್ತು 'CAA-2019' ಮೊಬೈಲ್ ಅಪ್ಲಿಕೇಶನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕಾಗುತ್ತದೆ, ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು ಮತ್ತು 50 ರೂ. ಶುಲ್ಕ ಪಾವತಿಸಬೇಕು.

ಪ್ರಾತಿನಿಧಿಕ ಚಿತ್ರ
CAA ಜಾರಿ: ಏನಿದು ಪೌರತ್ವ ತಿದ್ದುಪಡಿ ಕಾಯ್ದೆ? ಯಾರಿಗೆ ಅನ್ವಯ? ಮುಸ್ಲಿಮರ ವಿರೋಧ ಏಕೆ?

ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು ಯಾವುವು?

  1. ಅಫ್ಘಾನಿಸ್ತಾನ, ಬಾಂಗ್ಲಾದೇಶ ಅಥವಾ ಪಾಕಿಸ್ತಾನದಿಂದ ಧಾರ್ಮಿಕ ಗುರುತು ಮತ್ತು ರಾಷ್ಟ್ರೀಯತೆಯ ಪುರಾವೆ;

    • ಪಾಸ್‌ಪೋರ್ಟ್, ಜನನ ಪ್ರಮಾಣಪತ್ರ, ಸರ್ಕಾರಿ ಗುರುತಿನ ಚೀಟಿಗಳು.

    • ಈ ದೇಶಗಳಲ್ಲಿ ಸರ್ಕಾರಿ ಅಧಿಕಾರಿಗಳು ನೀಡುವ ಶಾಲಾ ಪ್ರಮಾಣಪತ್ರಗಳು, ಭೂ ದಾಖಲೆಗಳು, ಪರವಾನಗಿಗಳು.

  2. 2014ರ ಡಿಸೆಂಬರ್ 31ಕ್ಕೂ ಮೊದಲು ಭಾರತಕ್ಕೆ ಪ್ರವೇಶಿಸಿದ ಪುರಾವೆಗಳು;

    • ವೀಸಾ, ವಲಸೆ ಸ್ಟಾಂಪ್, ನೋಂದಣಿ ಪ್ರಮಾಣಪತ್ರಗಳು, ಪಡಿತರ ಚೀಟಿ.

    • ಭಾರತ ಸರ್ಕಾರದಿಂದ ಪಡೆದ ಐಡಿಗಳು, ಉದ್ಯೋಗ ದಾಖಲೆಗಳು, ಯುಟಿಲಿಟಿ ಬಿಲ್‌ಗಳು, ಶಾಲಾ ಪ್ರಮಾಣಪತ್ರಗಳು.

  3. ನ್ಯಾಯಾಂಗ ಅಥವಾ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಮುಂದೆ ಅರ್ಜಿದಾರರ ರಾಷ್ಟ್ರೀಯತೆ ಮತ್ತು ಧರ್ಮವನ್ನು ಘೋಷಿಸುವ ಪ್ರಮಾಣ ಪತ್ರ.

ಪ್ರಾತಿನಿಧಿಕ ಚಿತ್ರ
ಮಸೂದೆ ಅಂಗೀಕಾರವಾದ ನಾಲ್ಕು ವರ್ಷಗಳ ನಂತರ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸಿದ ಕೇಂದ್ರ

ಪೌರತ್ವ ನೀಡುವ ಪ್ರಕ್ರಿಯೆ ಹೇಗಿರುತ್ತದೆ?

ಅರ್ಜಿದಾರರು ಪೌರತ್ವವನ್ನು ಬಯಸುತ್ತಿರುವ ವರ್ಗವನ್ನು ಆಧರಿಸಿ ಹೆಚ್ಚುವರಿ ದಾಖಲೆಗಳು ಬೇಕಾಗಬಹುದು, ಉದಾಹರಣೆಗೆ ಮದುವೆ ಪ್ರಮಾಣಪತ್ರ, ಪೋಷಕರ ಜನ್ಮ ಪ್ರಮಾಣಪತ್ರಗಳು ಇತ್ಯಾದಿ.

ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಅರ್ಜಿಗಳನ್ನು ಜಿಲ್ಲಾ ಮಟ್ಟದ ಮತ್ತು ರಾಜ್ಯ ಮಟ್ಟದ ಸಮಿತಿಗಳು ಪರಿಶೀಲಿಸುತ್ತವೆ. ಅರ್ಜಿದಾರರು ಮೂಲ ದಾಖಲೆಗಳೊಂದಿಗೆ ವೈಯಕ್ತಿಕ ಪರಿಶೀಲನೆಗೆ ಹಾಜರಾಗಬೇಕಾಗುತ್ತದೆ.

ಅನುಮೋದಿತ ಅರ್ಜಿದಾರರು ನೋಂದಣಿಯ ಡಿಜಿಟಲ್ ಪ್ರಮಾಣಪತ್ರಗಳನ್ನು ಪಡೆಯುತ್ತಾರೆ, ಆದರೂ ಭೌತಿಕ ಪ್ರತಿಗಳನ್ನು ವಿನಂತಿಸಬಹುದು. ಅರ್ಜಿದಾರರು ಮೊದಲು ಭಾರತಕ್ಕೆ ಪ್ರವೇಶಿಸಿದ ದಿನಾಂಕದಿಂದ ಪೌರತ್ವವು ಜಾರಿಗೆ ಬರುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com