CAA ಜಾರಿ: ಏನಿದು ಪೌರತ್ವ ತಿದ್ದುಪಡಿ ಕಾಯ್ದೆ? ಯಾರಿಗೆ ಅನ್ವಯ? ಮುಸ್ಲಿಮರ ವಿರೋಧ ಏಕೆ?

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಪೌರತ್ವ ತಿದ್ದುಪಡಿ ಕಾಯ್ದೆ (CAA) ಸೋಮವಾರದಿಂದ ಜಾರಿಗೆ ಬಂದಿದ್ದು, ಗೃಹ ಸಚಿವಾಲಯವು ಸಿಎಎ ನಿಯಮಗಳ ಕುರಿತು ಅಧಿಸೂಚನೆ ಹೊರಡಿಸಿದೆ.
ಪೌರತ್ವ ತಿದ್ದುಪಡಿ ಕಾಯ್ದೆ (CAA)
ಪೌರತ್ವ ತಿದ್ದುಪಡಿ ಕಾಯ್ದೆ (CAA)

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಪೌರತ್ವ ತಿದ್ದುಪಡಿ ಕಾಯ್ದೆ (CAA) ಸೋಮವಾರದಿಂದ ಜಾರಿಗೆ ಬಂದಿದ್ದು, ಗೃಹ ಸಚಿವಾಲಯವು ಸಿಎಎ ನಿಯಮಗಳ ಕುರಿತು ಅಧಿಸೂಚನೆ ಹೊರಡಿಸಿದೆ.

ಈ ಮಸೂದೆಯನ್ನು 2019ರ ಡಿಸೆಂಬರ್ 11ರಂದು ಸಂಸತ್ತಿನಲ್ಲಿ ಮಂಡಿಸಿದಾಗ ಸಾಕಷ್ಟು ವಿರೋಧ ವ್ಯಕ್ತವಾಗಿದ್ದವು. ಆದರೆ ಇದೀಗ ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಹೊತ್ತಿನಲ್ಲಿ ಮೋದಿ ಸರ್ಕಾರ ಇದನ್ನು ಜಾರಿಗೆ ತಂದಿದೆ.

ಇಷ್ಟಕ್ಕೂ ಪೌರತ್ವ ತಿದ್ದುಪಡಿ ಕಾಯ್ದೆ ಎಂದರೇನು?

ದೌರ್ಜನ್ಯಕ್ಕೊಳಗಾಗಿ ಭಾರತಕ್ಕೆ ವಲಸೆ ಬಂದಿರುವ ವಿದೇಶಿ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವ ಯೋಜನೆಯೇ ಪೌರತ್ವ ತಿದ್ದುಪಡಿ ಕಾಯ್ದೆ (CAA). ಇದರಲ್ಲಿ 1955ರ ಪೌರತ್ವ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, 2014ರ ಡಿಸೆಂಬರ್‌ಗಿಂತ ಮೊದಲು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಲ್ಲಿ ಕಿರುಕುಳಕ್ಕೆ ಬೇಸತ್ತು ಭಾರತಕ್ಕೆ ಆಗಮಿಸಿದ ಅಲ್ಪಸಂಖ್ಯಾತ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರಿಗೆ ಭಾರತೀಯ ಪೌರತ್ವವನ್ನು ನೀಡಲಾಗುತ್ತದೆ. 2016 ರಲ್ಲಿ ಲೋಕಸಭೆಯಲ್ಲಿ ಮೊದಲ ಬಾರಿಗೆ ಪೌರತ್ವ ತಿದ್ದುಪಡಿ ಮಸೂದೆಯನ್ನು ಮಂಡಿಸಿತ್ತು.

ಆದರೆ ರಾಜ್ಯಸಭೆಯಲ್ಲಿ ಬಹುಮತದ ಕೊರತೆಯಿಂದ ಅತಂತ್ರ ಸ್ಥಿತಿಯಲ್ಲಿ ತಲುಪಿತ್ತು. ಬಳಿಕ ಅದನ್ನು ಸಂಸದೀಯ ಸಮಿತಿಗೆ (Cabinet Committee) ಕಳುಹಿಸಲಾಯಿತು.

ಬಳಿಕ ಮತ್ತೆ ಡಿಸೆಂಬರ್ 2019 ರಲ್ಲಿ ಲೋಕಸಭೆಯಲ್ಲಿ ಮಂಡಿಸಲಾಯಿತು. ಅಲ್ಲಿಂದ ಅಂಗೀಕಾರವಾದ ಬಳಿಕ ರಾಜ್ಯಸಭೆಯಲ್ಲೂ ಅದನ್ನು ಅಂಗೀಕರಿಸಲಾಯಿತು. ಜನವರಿ 10, 2020 ರಂದು ರಾಷ್ಟ್ರಪತಿಗಳ ಆಂಕಿತ ಕೂಡ ಅದಕ್ಕೆ ಲಭಿಸಿತು.

ಪೌರತ್ವ ತಿದ್ದುಪಡಿ ಕಾಯ್ದೆ (CAA)
'ಪೌರತ್ವ ನೀಡಲು ಕಾಯ್ದೆ ಜಾರಿಯಾಗಿದೆಯೇ ಹೊರತು.. ಮುಸ್ಲಿಮರ ಪೌರತ್ವ ಕಸಿಯಲು ಅಲ್ಲ': CAA ಜಾರಿ ಸ್ವಾಗತಿಸಿದ ದೆಹಲಿ ಹಜ್ ಸಮಿತಿ ಅಧ್ಯಕ್ಷರು

6 ವರ್ಷಗಳಲ್ಲಿ ಭಾರತೀಯ ಪೌರತ್ವ

ಈ ಕಾಯ್ದೆಯ ಅನ್ವಯ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ತಾನ ದೇಶಗಳಿಂದ ಭಾರತಕ್ಕ ಆಗಮಿಸಿದ ಈ ನಿರಾಶ್ರಿತರಿಗೆ 6 ವರ್ಷಗಳೊಳಗೆ ಭಾರತೀಯ ಪೌರತ್ವ ನೀಡಲಾಗುವುದು. ತಿದ್ದುಪಡಿಯ ಮೂಲಕ, ಈ ನಿರಾಶ್ರಿತರ ಸ್ವಾಭಾವಿಕತೆಯ ನಿವಾಸದ ಅಗತ್ಯವನ್ನು 11 ವರ್ಷಗಳಿಂದ ಐದು ವರ್ಷಗಳಿಗೆ ಕಡಿಮೆ ಮಾಡಲಾಗಿದೆ. ಮಹತ್ವದ ವಿಷಯ ಎಂದರೆ ಸಿಎಎ ಯಾರ ಪೌರತ್ವವನ್ನು ಕಸಿದುಕೊಳ್ಳುವ ಕಾನೂನಲ್ಲ... ಬದಲಿಗೆ ಅದು ಪೌರತ್ವವನ್ನು ನೀಡುವ ಕಾನೂನು ಆಗಿದೆ.

ದೇಶದ ಮುಸ್ಲಿಮರ ವಿರೋಧವೇಕೆ?

ಈ ಕಾಯ್ದೆಯಲ್ಲಿ ಅಥವಾ ಈ ಕಾನೂನಿನಲ್ಲಿ ಮುಸ್ಲಿಮರನ್ನು ಸೇರಿಸಲಾಗಿಲ್ಲ ಅಲ್ಲದೆ ದೇಶದ ಮುಸ್ಲಿಮರ ಪೌರತ್ವವನ್ನು ಕಸಿದುಕೊಳ್ಳಲಾಗುತ್ತದೆ ಎಂಬ ವಾದ ಕೂಡ ಈ ಕಾಯ್ದೆಗೆ ಮುಸ್ಲಿಮರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ. ಈ ಕಾಯಿದೆಯ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಲಾಗುತ್ತದೆ ಮತ್ತು ಇದು ಸಂವಿಧಾನದ 14 ನೇ ವಿಧಿ ಮತ್ತು ಸಮಾನತೆಯ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ. ಮೂರು ದೇಶಗಳ ಮುಸ್ಲಿಮರಿಗೆ ಪೌರತ್ವ ನೀಡಬೇಕು ಎಂಬ ಬೇಡಿಕೆಯೂ ಇದೆ.

ಪೌರತ್ವ ತಿದ್ದುಪಡಿ ಕಾಯ್ದೆ (CAA)
INDIA ಮೈತ್ರಿಕೂಟ ಅಧಿಕಾರಕ್ಕೆ ಬಂದರೆ CAA ರದ್ದು: ಕಾಂಗ್ರೆಸ್ ಸಂಸದ Shashi Tharoor

ಭಾರತೀಯ ಮುಸ್ಲಿಮರಿಗೆ ಬೇಕಿಲ್ಲ ಆತಂಕ

ಇನ್ನು ಮೋದಿ ಸರ್ಕಾರ ಹೇಳಿರುವಂತೆ ಈ ಕಾಯ್ದೆಯಿಂದ ಭಾರತೀಯ ಮುಸ್ಲಿಮರಿಗೆ ಯಾವುದೇ ಆತಂಕವಿಲ್ಲ. ಭಾರತೀಯ ಮುಸ್ಲಿಮರ ಪೌರತ್ವವನ್ನು ಈ ಕಾಯ್ದೆ ಕಸಿಯುವುದಿಲ್ಲ. ಆದರೆ ಭಾರತೀಯರಲ್ಲದ ಮುಸ್ಲಿಮರಿಗೆ ಪೌರತ್ವ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಇದುವರೆಗೆ ಅವರಿಗೆ ಪೌರತ್ವ ಹೇಗೆ ಸಿಗುತ್ತಿತ್ತು?

ಯಾರಾದರೂ ಭಾರತದ ಪೌರತ್ವವನ್ನು ಬಯಸಿದರೆ, ಅವರು ಕನಿಷ್ಠ 11 ವರ್ಷಗಳ ಕಾಲ ಭಾರತದಲ್ಲಿ ವಾಸಿಸಬೇಕು ಎಂದು ಕಾನೂನು ಹೇಳುತ್ತದೆ. ಆದರೆ ಹೊಸ ಕಾನೂನಿನ ಪ್ರಕಾರ, ಮೂರು ದೇಶಗಳಿಂದ ಬರುವ ಮುಸ್ಲಿಮೇತರರಿಗೆ 11 ವರ್ಷಗಳ ಬದಲಿಗೆ 6 ವರ್ಷಗಳ ಒಳಗೆ ಪೌರತ್ವ ನೀಡಲಾಗುವುದು ಎನ್ನಲಾಗಿದೆ. ಆದರೆ ಈ ದೇಶಗಳನ್ನು ಹೊರತುಪಡಿಸಿ ಬೇರೆ ದೇಶಗಳಿಂದ ಬರುವ ಜನರು ಯಾವುದೇ ಧರ್ಮ ಅಥವಾ ಸಮುದಾಯಕ್ಕೆ ಸೇರಿದವರಾಗಿದ್ದರೂ ಭಾರತದಲ್ಲಿ 11 ವರ್ಷಗಳ ಕಾಲಾವಧಿ ಪೂರ್ಣಗೊಳಿಸಬೇಕು.

ಪೌರತ್ವ ತಿದ್ದುಪಡಿ ಕಾಯ್ದೆ (CAA)
ಚುನಾವಣೆ ಸಂದರ್ಭದಲ್ಲಿ ಪ್ರಚಾರ ಪಡೆಯಲು ಸಿಎಎ ಕಾಯ್ದೆ ಅಧಿಸೂಚನೆ ಪ್ರಕಟ: ಕಾಂಗ್ರೆಸ್

ಸಿಎಎ ಜಾರಿ ಅನುಕೂಲಗಳೇನು?

ಮೋದಿ ಸರ್ಕಾರ ಹೇಳಿದಂತೆ ದಶಕಗಳಿಂದ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಧಾರ್ಮಿಕ ಕಿರುಕುಳ ಎದುರಿಸುತ್ತಿರುವ ಮುಸ್ಲಿಮೇತರರಿಗೆ ಗೌರವಯುತ ಜೀವನವನ್ನು ಒದಗಿಸುವುದು ಇದರ ಮತ್ತೊಂದು ಉದ್ದೇಶವಾಗಿದೆ. ಪೌರತ್ವ ಹಕ್ಕುಗಳು ಅವರ ಭಾಷೆ, ಸಾಂಸ್ಕೃತಿಕ ಮತ್ತು ಸಾಮಾಜಿಕ ಗುರುತಿಗೆ ರಕ್ಷಣೆ ಒದಗಿಸಲಿದೆ ಎಂದು ಸರ್ಕಾರ ಹೇಳಿದೆ. ಇದರೊಂದಿಗೆ ವ್ಯಾಪಾರ, ಆರ್ಥಿಕ, ಮುಕ್ತ ಸಂಚಾರ, ಆಸ್ತಿ ಖರೀದಿಯಂತಹ ಹಕ್ಕುಗಳನ್ನು ಸಹ ಈ ಕಾನೂನು ಖಾತ್ರಿಪಡಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com