ದೆಹಲಿ: ಪೊಲೀಸರ ಭಾರೀ ಭದ್ರತೆ ನಡುವೆ ಗ್ಯಾಂಗ್‌ಸ್ಟರ್ ಕಾಲಾ ಜತೇದಿ ಜೊತೆ 'ರಿವಾಲ್ವರ್ ರಾಣಿ' ವಿವಾಹ

ಕುಖ್ಯಾತ ಗ್ಯಾಂಗ್‌ಸ್ಟರ್ ಸಂದೀಪ್ ಅಲಿಯಾಸ್ ಕಾಲಾ ಜತೇದಿ ಹಾಗೂ ರಿವಾಲ್ವರ್ ರಾಣಿ ಎಂದೇ ಹೆಸರಾದ ಅನುರಾಧಾ ಚೌಧರಿ ಅಲಿಯಾಸ್ ಮೇಡಂ ಮಿಂಜ್ ವಿವಾಹ ದೆಹಲಿಯ ದ್ವಾರಕಾ ಪ್ರದೇಶದಲ್ಲಿನ ಬ್ಯಾಂಕ್ವೆಟ್ ಹಾಲ್‌ನಲ್ಲಿ ಮಂಗಳವಾರ ನಡೆಯಿತು.
ಕಾಲಾ ಜತೇದಿ ಜೊತೆ ರಿವಾಲ್ವರ್ ರಾಣಿ ರಾಣಿ
ಕಾಲಾ ಜತೇದಿ ಜೊತೆ ರಿವಾಲ್ವರ್ ರಾಣಿ ರಾಣಿ

ನವದೆಹಲಿ: ಕುಖ್ಯಾತ ಗ್ಯಾಂಗ್‌ಸ್ಟರ್ ಸಂದೀಪ್ ಅಲಿಯಾಸ್ ಕಾಲಾ ಜತೇದಿ ಹಾಗೂ ರಿವಾಲ್ವರ್ ರಾಣಿ ಎಂದೇ ಹೆಸರಾದ ಅನುರಾಧಾ ಚೌಧರಿ ಅಲಿಯಾಸ್ ಮೇಡಂ ಮಿಂಜ್ ವಿವಾಹ ದೆಹಲಿಯ ದ್ವಾರಕಾ ಪ್ರದೇಶದಲ್ಲಿನ ಬ್ಯಾಂಕ್ವೆಟ್ ಹಾಲ್‌ನಲ್ಲಿ ಮಂಗಳವಾರ ನಡೆಯಿತು.

ಒಂದೇ 'ರಂಗ'ಕ್ಕೆ ಸೇರಿದ ಇಬ್ಬರು 'ಸಾಧಕರ' ಮದುವೆಗೆ ಅತಿಥಿಗಳಿಗಿಂತಲೂ ಪೊಲೀಸರೇ ಅಧಿಕ ಸಂಖ್ಯೆಯಲ್ಲಿ ಸೇರಿದ್ದ ಅಪರೂಪದ ಸನ್ನಿವೇಶವಿದು. ಇದು ನಮ್ಮ ಪೊಲೀಸ್ ವ್ಯವಸ್ಥೆ ಎಂತಹ ನಿಷ್ಪ್ರಯೋಜಕ ಕೆಲಸಗಳಿಗೆ ಬಳಕೆಯಾಗುತ್ತಿದೆ ಎಂಬುದಕ್ಕೆ ಸಾಕ್ಷಿಯಾಯಿತು.

ಕುಖ್ಯಾತ ಗ್ಯಾಂಗ್‌ಸ್ಟರ್ ಸಂದೀಪ್ ಅಲಿಯಾಸ್ ಕಾಲಾ ಜತೇದಿ ಹಾಗೂ ರಿವಾಲ್ವರ್ ರಾಣಿ ಎಂದೇ ಹೆಸರಾದ ಅನುರಾಧಾ ಚೌಧರಿ ಅಲಿಯಾಸ್ ಮೇಡಂ ಮಿಂಜ್ ವಿವಾಹ ದಿಲ್ಲಿಯ ದ್ವಾರಕಾ ಪ್ರದೇಶದಲ್ಲಿನ ಬ್ಯಾಂಕ್ವೆಟ್ ಹಾಲ್‌ನಲ್ಲಿ ಮಂಗಳವಾರ ನಡೆಯಿತು.

ಕಾಲಾ ಜತೇದಿ ಜೊತೆ ರಿವಾಲ್ವರ್ ರಾಣಿ ರಾಣಿ
ಪಂಜಾಬ್: ಮೊಹಾಲಿಯಲ್ಲಿ ಮಾಲ್ ಹೊರಗಡೆ ಗ್ಯಾಂಗ್​ಸ್ಟರ್ ಗೆ ಗುಂಡಿಕ್ಕಿ ಹತ್ಯೆ

ಬ್ಯಾಂಕ್ವೆಂಟ್ ಹಾಲ್‌ನ ಒಳಗೆ ಮತ್ತು ಹೊರಗೆ ಪೊಲೀಸರು ಭಾರಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಸಂದೀಪ್‌ನ ವಕೀಲರು ಮದುವೆಗಾಗಿ ದ್ವಾರಕಾ ವಲಯ- 3ರಲ್ಲಿನ ಸಂತೋಷ್ ಗಾರ್ಡನ್ ಬ್ಯಾಂಕ್ವೆಟ್ ಹಾಲ್‌ಗೆ 51 ಸಾವಿರ ರೂ. ನೀಡಿ ಬುಕ್ ಮಾಡಿದ್ದರು.

ಗ್ಯಾಂಗ್‌ಸ್ಟರ್ ಕಾಲಾ ಜತೇದಿಯ ಕುಖ್ಯಾತಿ ಹಾಗೂ ಹಿಂದಿನ ಕೃತ್ಯಗಳ ಇತಿಹಾಸವನ್ನು ಗಮನದಲ್ಲಿ ಇರಿಸಿಕೊಂಡು ಪೊಲೀಸರು, ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದಂತೆ ತಡೆಯಲು ವ್ಯವಸ್ಥಿತ ಭದ್ರತಾ ಯೋಜನೆ ರೂಪಿಸಿದ್ದರು ಎಂದು ಮೂಲಗಳು ತಿಳಿಸಿವೆ. 250 ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

ಒಂದು ಕಾಲದಲ್ಲಿ ವಾಂಟೆಡ್ ಕ್ರಿಮಿನಲ್ ಆಗಿದ್ದ ಸಂದೀಪ್ ತಲೆಗೆ 7 ಲಕ್ಷ ರೂ ಬಹುಮಾನ ಘೋಷಿಸಲಾಗಿತ್ತು. ಸೋನಿಪತ್ ಮೂಲದ ಈತನಿಗೆ ಮದುವೆಗಾಗಿ ದೆಹಲಿ ನ್ಯಾಯಾಲಯವು ಆರು ಗಂಟೆಗಳ ಪೆರೋಲ್ ನೀಡಿತ್ತು.

ಕಾಲಾ ಜತೇದಿ ಜೊತೆ ರಿವಾಲ್ವರ್ ರಾಣಿ ರಾಣಿ
ದೆಹಲಿ ಚಲೋ: ರೈತರ ಪ್ರತಿಭಟನೆ ಆರಂಭ ಹಿನ್ನೆಲೆಯಲ್ಲಿ ಮೂರು ಗಡಿಗಳಲ್ಲಿ ಭದ್ರತೆ ಹೆಚ್ಚಿಸಿದ ದೆಹಲಿ ಪೊಲೀಸರು

ಈತನನ್ನು ವರಿಸಿರುವ ಅನುರಾಧಾ ಚೌಧರಿ ಕೂಡ ಸಾಮಾನ್ಯ ಮಹಿಳೆಯಲ್ಲ. ಈಕೆಗೆ ರಿವಾಲ್ವರ್ ರಾಣಿ ಎಂಬ ಅಡ್ಡಹೆಸರು ಇದೆ. ಈಕೆ ವಿರುದ್ಧ ಅನೇಕ ಅಪರಾಧ ಪ್ರಕರಣಗಳಿವೆ. ಎರಡು ವರ್ಷಗಳ ಹಿಂದೆ ಇವರಿಬ್ಬರನ್ನೂ ಬಂಧಿಸಲು 12 ರಾಜ್ಯಗಳಲ್ಲಿ ಪೊಲೀಸರ ತಂಡಗಳು ಬೃಹತ್ ಕಾರ್ಯಾಚರಣೆ ನಡೆಸಿತ್ತು ಎಂದರೆ ಇವರ ಕುಖ್ಯಾತಿ ಅರಿವಾಗಬಹುದು.

ಕಾಲಾ ಜತೇದಿ ಅಂತಾರಾಷ್ಟ್ರೀಯ ಜಾಲವನ್ನು ನಡೆಸುತ್ತಿದ್ದು, ಇದು ಬಾಡಿಗೆ ಕೊಲೆ, ಸಂಘಟಿತ ಕಳ್ಳಬಟ್ಟಿ ವ್ಯವಹಾರ, ಸುಲಿಗೆ ಮತ್ತು ಭೂ ಕಬಳಿಕೆಯ ಕೃತ್ಯಗಳಲ್ಲಿ ಭಾಗಿಯಾಗಿತ್ತು. ದೆಹಲಿ ಮತ್ತು ಹರ್ಯಾಣ ಪೊಲೀಸರು ಈತ ಬೆನ್ನು ಬಿದ್ದಿದ್ದರು. 2021ರ ಜುಲೈನಲ್ಲಿ ಈತ ಉತ್ತರ ಪ್ರದೇಶದಲ್ಲಿ ಸಿಕ್ಕಿಬಿದ್ದಿದ್ದ.

ಸುಮಾರು ಅರ್ಧ ಗಂಟೆಯ ನಂತರ ಮಂತ್ರಗಳ ಪಠಣ ಮುಗಿದ ನಂತರ ಇಬ್ಬರನ್ನು ಪತಿ-ಪತ್ನಿ ಎಂದು ಘೋಷಿಸಲಾಯಿತು. ಮಧ್ಯಾಹ್ನ 3.50 ರ ಸುಮಾರಿಗೆ ಜಥೇದಿಯನ್ನು ಅದೇ ಪೊಲೀಸ್ ವ್ಯಾನ್‌ನಲ್ಲಿ ತಿಹಾರ್‌ ಜೈಲಿಗೆ ಕರೆದುಕೊಂಡು ಹೋಗಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com