ದೆಹಲಿ ಚಲೋ: ರೈತರ ಪ್ರತಿಭಟನೆ ಆರಂಭ ಹಿನ್ನೆಲೆಯಲ್ಲಿ ಮೂರು ಗಡಿಗಳಲ್ಲಿ ಭದ್ರತೆ ಹೆಚ್ಚಿಸಿದ ದೆಹಲಿ ಪೊಲೀಸರು

ರಾಷ್ಟ್ರ ರಾಜಧಾನಿ ತಲುಪಲು ಪ್ರತಿಭಟನಾಕಾರರ ಗುಂಪು ನೀಡಿರುವ ಕರೆಗೆ ಪ್ರತಿಕ್ರಿಯೆಯಾಗಿ ಬುಧವಾರ ಬೆಳಿಗ್ಗೆಯಿಂದ ಟಿಕ್ರಿ, ಸಿಂಘು ಮತ್ತು ಗಾಜಿಪುರ ಸೇರಿದಂತೆ ದೆಹಲಿಯ ಗಡಿಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಗಡಿಗಳಲ್ಲಿ ಭದ್ರತೆ ಹೆಚ್ಚಿಸಿದ ದೆಹಲಿ ಪೊಲೀಸರು
ಗಡಿಗಳಲ್ಲಿ ಭದ್ರತೆ ಹೆಚ್ಚಿಸಿದ ದೆಹಲಿ ಪೊಲೀಸರು

ನವದೆಹಲಿ: ರಾಷ್ಟ್ರ ರಾಜಧಾನಿ ತಲುಪಲು ಪ್ರತಿಭಟನಾಕಾರರ ಗುಂಪು ನೀಡಿರುವ ಕರೆಗೆ ಪ್ರತಿಕ್ರಿಯೆಯಾಗಿ ಬುಧವಾರ ಬೆಳಿಗ್ಗೆಯಿಂದ ಟಿಕ್ರಿ, ಸಿಂಘು ಮತ್ತು ಗಾಜಿಪುರ ಸೇರಿದಂತೆ ದೆಹಲಿಯ ಗಡಿಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಗಡಿಗಳಲ್ಲಿ ಠಿಕಾಣಿ ಹೂಡಿರುವ ಪೊಲೀಸ್ ಸಿಬ್ಬಂದಿ ಸಂಪೂರ್ಣ ವಾಹನ ತಪಾಸಣೆ ನಡೆಸುತ್ತಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಬಿಗಿ ಭದ್ರತೆ ಕೈಗೊಂಡಿದ್ದಾರೆ.

ಸಿಂಘು ಮತ್ತು ಟಿಕ್ರಿ ಗಡಿಯಲ್ಲಿ ಪ್ರಯಾಣಿಕರಿಗೆ ಇದ್ದ ಅಡೆತಡೆಗಳನ್ನು ತಾತ್ಕಾಲಿಕವಾಗಿ ತೆಗೆದುಹಾಕಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೊಲೀಸ್ ಮತ್ತು ಅರೆಸೈನಿಕ ಪಡೆಗಳೆರಡೂ ಈ ಪ್ರದೇಶದಲ್ಲಿ ನಿಯೋಜನೆಗೊಂಡಿವೆ. ಕಟ್ಟುನಿಟ್ಟಾದ ಮತ್ತು ದಿನದ 24 ಗಂಟೆಯ ಜಾಗರೂಕತೆ ವಹಿಸಲಿವೆ. ರೈಲ್ವೆ ಮತ್ತು ಮೆಟ್ರೋ ನಿಲ್ದಾಣಗಳು ಮತ್ತು ಬಸ್ ಟರ್ಮಿನಲ್‌ಗಳಲ್ಲಿ ಇದೇ ರೀತಿಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿ ಹೇಳಿದರು.

ಗಡಿಗಳಲ್ಲಿ ಭದ್ರತೆ ಹೆಚ್ಚಿಸಿದ ದೆಹಲಿ ಪೊಲೀಸರು
ರೈತರ ಪ್ರತಿಭಟನೆ: ಮಾರ್ಚ್ 10 ಕ್ಕೆ 'ರೈಲ್ ರೋಕೋ'ಗೆ ಕರೆ, ಮಾರ್ಚ್ 6 ರಂದು ದೆಹಲಿ ಚಲೋ

ಮಾರ್ಚ್ 3 ರಂದು, ಕಿಸಾನ್ ಮಜ್ದೂರ್ ಮೋರ್ಚಾ ಮತ್ತು ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆಗಳು ದೆಹಲಿ ಚಲೋಗೆ ಕರೆ ನೀಡಿದ್ದು, ಪ್ರತಿಭಟನಾಕಾರರನ್ನು ಬುಧವಾರ ದೆಹಲಿಗೆ ತಲುಪುವಂತೆ ಒತ್ತಾಯಿಸಿವೆ.

ಪಂಜಾಬ್-ಹರಿಯಾಣ ಗಡಿಯಲ್ಲಿ ಬೀಡುಬಿಟ್ಟಿರುವ ರೈತರು ತಮ್ಮ ಪ್ರತಿಭಟನಾ ಚಟುವಟಿಕೆಗಳನ್ನು ಖಾನೌರಿ ಮತ್ತು ಶಂಭು ಗಡಿಗಳಿಗೆ ಸೀಮಿತಗೊಳಿಸುತ್ತಾರೆ ಎಂದು ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್ ಈ ಹಿಂದೆ ಘೋಷಿಸಿದ್ದರು.

ಮಾರ್ಚ್ 10 ರಂದು ದೇಶಾದ್ಯಂತ ಮಧ್ಯಾಹ್ನ 12 ರಿಂದ ಸಂಜೆ 4 ರವರೆಗೆ ರೈಲು ಹಳಿಗಳನ್ನು ನಿರ್ಬಂಧಿಸಲು ಯೋಜಿಸಲಾಗಿದೆ ಎಂದು ಪಂಧೇರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಗಡಿಗಳಲ್ಲಿ ಭದ್ರತೆ ಹೆಚ್ಚಿಸಿದ ದೆಹಲಿ ಪೊಲೀಸರು
ಕೇಂದ್ರದೊಂದಿಗಿನ ಮಾತುಕತೆ ವಿಫಲ; ಆರು ರೈತರ ಸಾವಿನ ನಡುವೆಯೂ ಮುಂದುವರಿದ ರೈತರ ಪ್ರತಿಭಟನೆ

ಕೇಂದ್ರದೊಂದಿಗಿನ ಮಾತುಕತೆ ಹೊರತಾಗಿಯೂ, ಬಿಕ್ಕಟ್ಟು ಮುಂದುವರಿದಿದ್ದು, ರೈತರು ಆರಂಭಿಸಿದ 'ದೆಹಲಿ ಚಲೋ' ಮೆರವಣಿಗೆಯನ್ನು ಆರಂಭದಲ್ಲಿ ಫೆಬ್ರುವರಿ 29ರವರೆಗೆ ಸ್ಥಗಿತಗೊಳಿಸಲಾಯಿತು ಮತ್ತು ನಂತರ ಮಾರ್ಚ್ 3 ರವರೆಗೆ ವಿಸ್ತರಿಸಲಾಯಿತು.

ದೆಹಲಿಯತ್ತ ಹೊರಟಿದ್ದ ಪಂಜಾಬ್‌ನ ಪ್ರತಿಭಟನಾಕಾರರನ್ನು ಭದ್ರತಾ ಸಿಬ್ಬಂದಿ ತಡೆದ ನಂತರ ಫೆಬ್ರುವರಿ 13 ರಿಂದ ಪಂಜಾಬ್-ಹರಿಯಾಣದ ಖಾನೌರಿ ಮತ್ತು ಶಂಭು ಗಡಿಯಲ್ಲಿ ರೈತರು ಮೊಕ್ಕಾಂ ಹೂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com