ಉತ್ತರ ಪ್ರದೇಶ: Budaun double murder ಆರೋಪಿ ಎನ್ಕೌಂಟರ್ ನಲ್ಲಿ ಹತ; ಮಕ್ಕಳ ಹಂತಕನಿಗೆ ಸರಿಯಾದ ಶಿಕ್ಷೆ ಎಂದ ತಾಯಿ

ಉತ್ತರ ಪ್ರದೇಶದ ಬದೌನ್ ನಲ್ಲಿ ಕ್ಷೌರಿಕ ವೃತ್ತಿ ಮಾಡುತ್ತಿದ್ದ ವ್ಯಕ್ತಿಯೊಬ್ಬ ಇಬ್ಬರು ಮಕ್ಕಳ ಮೇಲೆ ದಾಳಿ ಮಾಡಿ, ಹತ್ಯೆ ಮಾಡಿದ್ದ ಘಟನೆ ಉತ್ತರಪ್ರದೇಶದಲ್ಲಿ ಮಂಗಳವಾರ ರಾತ್ರಿ ನಡೆದಿತ್ತು. ಈ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಆ ವ್ಯಕ್ತಿಯನ್ನು ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಿದ್ದಾರೆ.
ಹತ್ಯೆಗೀಡಾದ ಮಕ್ಕಳು
ಹತ್ಯೆಗೀಡಾದ ಮಕ್ಕಳು

ಲಖನೌ: ಇಬ್ಬರು ಮಕ್ಕಳನ್ನು ಕೊಂದಿದ್ದ ಕ್ಷೌರಿಕನನ್ನು ಉತ್ತರ ಪ್ರದೇಶ ಪೊಲೀಸರು ಎನ್ಕೌಂಟರ್ ನಲ್ಲಿ ಬುಧವಾರ ಹೊಡೆದುರುಳಿಸಿದ್ದಾರೆ.

ಉತ್ತರ ಪ್ರದೇಶದ ಬದೌನ್ ನಲ್ಲಿ ಕ್ಷೌರಿಕ ವೃತ್ತಿ ಮಾಡುತ್ತಿದ್ದ ವ್ಯಕ್ತಿಯೊಬ್ಬ ಇಬ್ಬರು ಮಕ್ಕಳ ಮೇಲೆ ದಾಳಿ ಮಾಡಿ, ಹತ್ಯೆ ಮಾಡಿದ್ದ ಘಟನೆ ಉತ್ತರಪ್ರದೇಶದಲ್ಲಿ ಮಂಗಳವಾರ ರಾತ್ರಿ ನಡೆದಿತ್ತು. ಈ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಆ ವ್ಯಕ್ತಿಯನ್ನು ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಿದ್ದಾರೆ.

ಹತ್ಯೆಗೀಡಾದ ಮಕ್ಕಳು
ಉತ್ತರ ಪ್ರದೇಶ: ರಾತ್ರಿ ಊಟ ಮಾಡಿ ನಿದ್ರಿಸಲು ಹೋದ 7 ಮಂದಿಯಲ್ಲಿ ಐವರು ಬೆಳಗ್ಗೆ ಹೆಣವಾಗಿ ಪತ್ತೆ!

ಮಕ್ಕಳ ಮೇಲೆ ದಾಳಿ ಮಾಡಿದ ಕ್ಷೌರಿಕನನ್ನು ಸಾಜಿದ್‌ (22) ಎಂದು ಗುರುತಿಸಲಾಗಿದ್ದು, ಈತ ಇಲ್ಲಿನ ಬಾಬಾ ಕಾಲೋನಿಯಲ್ಲಿ ಸಾಜಿದ್‌ ಬಾರ್ಬಾರ್‌ ಶಾಪ್‌ ನಡೆಸುತ್ತಿದ್ದ. ಇದರ ಎದುರಿನ ಮನೆಗೆ ಹೋಗಿ ಮನೆಯ ಟೆರಸ್‌ ಮೇಲೆ ಆಟವಾಡುತ್ತಿದ್ದ ಮೂವರು ಮಕ್ಕಳ ಮೇಲೆ ದಾಳಿ ಮಾಡಿದ್ದಾನೆ. ಇಲ್ಲಿನ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯ ಸಮೀಪದಲ್ಲೇ ಈ ಘಟನೆ ನಡೆದಿದೆ. ಘಟನೆಯಲ್ಲಿ ಆಯುಷ್‌ (12) ಮತ್ತು ಆಯಾನ್‌ (8) ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಮತ್ತೊಬ್ಬ ಬಾಲಕ ಯುವರಾಜ್‌ (10) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಪೊಲೀಸರಿಂದ ಎನ್ಕೌಂಟರ್

ಘಟನೆ ತಿಳಿದ ಸ್ಥಳಕ್ಕೆ ಹೋಗುವಷ್ಟರಲ್ಲಿ ಸಾಜಿದ್‌ ಅಲ್ಲಿಂದ ಪರಾರಿಯಾಗಿದ್ದ. ಅವನ ಬೆನ್ನತ್ತಿದ ಪೊಲೀಸರು ಇಲ್ಲಿನ ಹೊರವಲಯದಲ್ಲಿರುವ ಕಾಡಿನಲ್ಲಿ ಪತ್ತೆ ಮಾಡಿದ್ದರು. ಸಾಜಿದ್‌ನನ್ನು ಬಂಧಿಸುವ ವೇಳೆಯಲ್ಲಿ ಅವನು ಪೊಲೀಸರ ಮೇಲೆ ಗುಂಡು ಹಾರಿಸಲು ಯತ್ನಿಸಿದ್ದ. ಈ ವೇಳೆ ಪೊಲೀಸರು ಎನ್‌ಕೌಂಟರ್‌ ಮಾಡಿದ್ದರಿಂದ ಗುಂಡು ತಗುಲಿ ಸಾಜಿದ್‌ ಮೃತಪಟ್ಟಿದ್ದಾನೆ. ವೈಯಕ್ತಿಕ ಕಾರಣಗಳಿಗಾಗಿ ಸಾಜಿದ್‌ ಮಕ್ಕಳ ಮೇಲೆ ದಾಳಿ ಮಾಡಿದ್ದಾನೆ. ಸಾಜಿದ್‌ ಒಬ್ಬನೇ ಈ ಕೃತ್ಯವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಂಗಡಿ ಧ್ವಂಸ

ಮಕ್ಕಳ ಹತ್ಯೆಯ ನಂತರ, ಅವರ ಕುಟುಂಬ ಸದಸ್ಯರು ಮತ್ತು ಕೆಲವು ಸ್ಥಳೀಯ ನಿವಾಸಿಗಳು ಸಾಜಿದ್ ನ ಅಂಗಡಿಯನ್ನು ಧ್ವಂಸಗೊಳಿಸಿದ್ದಾರೆ. ಅಲ್ಲದೆ ಆತನ ಬೈಕ್ ಅನ್ನು ಹಾನಿಗೊಳಿಸಿದ್ದಾರೆ. ಜನಸಂದಣಿಯನ್ನು ನಿಯಂತ್ರಣಕ್ಕೆ ತರಲು ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರದೇಶದಲ್ಲಿ ಭದ್ರತೆಯನ್ನು ನಿಯೋಜಿಸಲು ಆದೇಶಿಸಿದ್ದಾರೆ.

ಮಕ್ಕಳ ಹಂತಕನಿಗೆ ಸರಿಯಾದ ಶಿಕ್ಷೆ ಎಂದ ತಾಯಿ

ಇನ್ನು ಆರೋಪಿ ಸಾಜಿದ್ ಎನ್ಕೌಂಟರ್ ಕುರಿತು ತಾಯಿ ಪ್ರತಿಕ್ರಿಯೆ ನೀಡಿದ್ದು, ಮಕ್ಕಳ ಹಂತಕನಿಗೆ ಸರಿಯಾದ ಶಿಕ್ಷೆಯಾಗಿದೆ. ‘ಪೊಲೀಸರು ಮಾಡಿದ್ದು ಸರಿಯಾಗಿದೆ. ಆತ ಏಕೆ ಹಾಗೆ ಮಾಡಿದ್ದಾನೆ ಎಂದು ನನಗೆ ತಿಳಿದಿಲ್ಲ.. ಏನೇ ಆದರೂ ಮುಗ್ಧ ಮಕ್ಕಳ ಜೀವ ತೆಗೆದಿದ್ದು ತಪ್ಪು, ಆತನ ತಪ್ಪಿಗೆ ಸರಿಯಾದ ಶಿಕ್ಷೆಯಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ ಆರೋಪಿ ಸಾಜಿದ ಮನೆಗೆ ಸರಿಯಾಗಿ ಬರುತ್ತಿರಲಿಲ್ಲ. ಹೀಗಾಗಿ ನಾವೂ ಕೂಡ ಆತನ ಜೊತೆಗಿರಲಿಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com