ನವದೆಹಲಿ: ಲೋಕಸಭಾ ಚುನಾವಣೆಗೂ ಮುನ್ನ 'ಕೇಜ್ರಿವಾಲ್ ಬಂಧನ' ಎಎಪಿಗೆ ದೊಡ್ಡ ಹಿನ್ನಡೆ!

ಭ್ರಷ್ಟಾಚಾರ ವಿರುದ್ಧ ಭಾರತ’ ಆಂದೋಲನವನ್ನು ಮುನ್ನಡೆಸುವುದರಿಂದ ಹಿಡಿದು ಸತತ ಮೂರು ಬಾರಿ ದೆಹಲಿಯ ಮುಖ್ಯಮಂತ್ರಿ ಗದ್ದುಗೆ ಏರಿ, ಗುರುವಾರ ಇಡಿಯಿಂದ ಬಂಧನಕ್ಕೊಳಗಾದ ಅರವಿಂದ್ ಕೇಜ್ರಿವಾಲ್ ಅಧಿಕಾರಿಯಾಗಿ-ಹೋರಾಟಗಾರರಾಗಿ, ರಾಜಕಾರಣಿಯಾಗಿ ಪರಿವರ್ತಿತ ವೃತ್ತಿಜೀವನವನ್ನು ಹೊಂದಿದ್ದಾರೆ.
ಕೇಜ್ರಿವಾಲ್
ಕೇಜ್ರಿವಾಲ್
Updated on

ನವದೆಹಲಿ: ‘ಭ್ರಷ್ಟಾಚಾರ ವಿರುದ್ಧ ಭಾರತ’ ಆಂದೋಲನವನ್ನು ಮುನ್ನಡೆಸುವುದರಿಂದ ಹಿಡಿದು ಸತತ ಮೂರು ಬಾರಿ ದೆಹಲಿಯ ಮುಖ್ಯಮಂತ್ರಿ ಗದ್ದುಗೆ ಏರಿ, ಗುರುವಾರ ಇಡಿಯಿಂದ ಬಂಧನಕ್ಕೊಳಗಾದ ಅರವಿಂದ್ ಕೇಜ್ರಿವಾಲ್ ಅಧಿಕಾರಿಯಾಗಿ-ಹೋರಾಟಗಾರರಾಗಿ, ರಾಜಕಾರಣಿಯಾಗಿ ಪರಿವರ್ತಿತ ವೃತ್ತಿಜೀವನವನ್ನು ಹೊಂದಿದ್ದಾರೆ.

ಆಮ್ ಆದ್ಮಿ ಪಕ್ಷ (ಎಎಪಿ) ದೆಹಲಿ, ಹರಿಯಾಣ ಮತ್ತು ಗುಜರಾತ್‌ನಲ್ಲಿ ಲೋಕಸಭೆ ಚುನಾವಣೆಗೆ ಇಂಡಿಯಾ ಮೈತ್ರಿಕೂಟ ಪಾಲುದಾರ ಪಕ್ಷವಾದ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ಚುನಾವಣಾ ರಾಜಕೀಯಕ್ಕೆ ಗಂಭೀರವಾದ ಪ್ರವೇಶ ಮಾಡುತ್ತಿರುವ ಸಮಯದಲ್ಲಿ ಕೇಜ್ರಿವಾಲ್ ಬಂಧನ ದೊಡ್ಡ ಹೊಡೆತ ನೀಡಿದೆ.

55 ವರ್ಷ ವಯಸ್ಸಿನ ಎಎಪಿ ರಾಷ್ಟ್ರೀಯ ಸಂಚಾಲಕನ ಬಂಧನ ಪಕ್ಷದ ಚುನಾವಣಾ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಉಂಟುಮಾಡಬಹುದು, ಏಕೆಂದರೆ ಅವರು ಲೋಕಸಭೆ ಚುನಾವಣೆಯ ಯೋಜನೆಗಳು ಮತ್ತು ಕಾರ್ಯತಂತ್ರದ ಕೇಂದ್ರದಲ್ಲಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಪಕ್ಷದ ಇತರ ಹಿರಿಯ ನಾಯಕರು ಜೈಲಿನಲ್ಲಿ ಅಥವಾ ರಾಜಕೀಯ ಅಜ್ಞಾತವಾಸದಲ್ಲಿ ಇರುವುದರಿಂದ ಪಕ್ಷವು ಅನಿಶ್ಚಿತತೆ ಎದುರು ನೋಡುವಂತಾಗಿದೆ. ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ವಿಶ್ವಾಸಾರ್ಹ ಸಹಚರ ಸಂಜಯ್ ಸಿಂಗ್ ಮತ್ತು ಮನೀಶ್ ಸಿಸೋಡಿಯಾ ಜೈಲಿನಲ್ಲಿದ್ದರೆ, ಇನ್ನೋರ್ವ ಸಹಚರ ಸತ್ಯೇಂದ್ರ ಜೈನ್ ಪ್ರತ್ಯೇಕ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲಿನಲ್ಲಿದ್ದಾರೆ.

ಕೇಜ್ರಿವಾಲ್
ಅಬಕಾರಿ ನೀತಿ ಪರಿಷ್ಕರಣೆ ಅಕ್ರಮ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನ

ಐಐಟಿ ಪದವೀಧರರಾಗಿರುವ ಕೇಜ್ರಿವಾಲ್ ಕಾಂಗ್ರೆಸ್‌ನ ಬಾಹ್ಯ ಬೆಂಬಲದೊಂದಿಗೆ 2013 ರಲ್ಲಿ ದೆಹಲಿಯಲ್ಲಿ ಸರ್ಕಾರ ರಚಿಸಿದರು. ನವದೆಹಲಿ ಕ್ಷೇತ್ರದಲ್ಲಿ ಚೊಚ್ಚಲ ಚುನಾವಣೆಯಲ್ಲಿಯೇ ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ವಿರುದ್ಧ ಸ್ಪರ್ಧಿಸಿ, ಅವರನ್ನು 22,000 ಮತಗಳ ಅಂತರದಿಂದ ಸೋಲಿಸಿದರು. ಆದರೆ ದೆಹಲಿ ಅಸೆಂಬ್ಲಿಯಲ್ಲಿ ಜನಲೋಕಪಾಲ್ ಮಸೂದೆಯನ್ನು ಅಂಗೀಕರಿಸಲು ಸಾಧ್ಯವಾಗದೆ ಕೇಜ್ರಿವಾಲ್ ರಾಜೀನಾಮೆ ನೀಡಿದ ಕಾರಣ ಆಮ್ ಆದ್ಮಿ ಪಕ್ಷ-ಕಾಂಗ್ರೆಸ್ ಸರ್ಕಾರವು ಕೇವಲ 49 ದಿನಗಳ ಕಾಲ ಮಾತ್ರ ಇತ್ತು .ದೆಹಲಿಯಲ್ಲಿ ತನ್ನ ಮೊಟ್ಟಮೊದಲ ಚುನಾವಣೆಯಲ್ಲಿ ಪಕ್ಷದ ಸಾಧನೆಯಿಂದ ಉತ್ತೇಜಿತರಾದ ಕೇಜ್ರಿವಾಲ್, 2014 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ನರೇಂದ್ರ ಮೋದಿಯವರನ್ನು ವಾರಣಾಸಿಯಿಂದ ಎದುರಿಸುವ ನಿರ್ಧಾರವನ್ನು ಘೋಷಿಸಿ, ಹೀನಾಯ ಸೋಲನ್ನು ಎದುರಿಸಬೇಕಾಯಿತು.

ಮುಂದಿನ ವರ್ಷ, ಕೇಜ್ರಿವಾಲ್ ರಾಷ್ಟ್ರೀಯ ರಾಜಧಾನಿಯಲ್ಲಿ 67 ಸ್ಥಾನಗಳಲ್ಲಿ AAP ಗೆಲುವಿನತ್ತ ಮುನ್ನಡೆಸಿದರು. ಮೋದಿ ಅಲೆಯ ಮೇಲೆ ಸವಾರಿ ಮಾಡುತ್ತಿದ್ದ ಬಿಜೆಪಿಯನ್ನು ಕೇವಲ ಮೂರು ಸ್ಥಾನಗಳಿಗೆ ಸೀಮಿತಗೊಳಿಸಿದರು ಮತ್ತು ಕಾಂಗ್ರೆಸ್ ಶೂನ್ಯ ಸ್ಥಿತಿಗೆ ತಲುಪಿತು. 2015 ರ ಅಸೆಂಬ್ಲಿ ಚುನಾವಣೆಯ ಪೂರ್ವದಲ್ಲಿ, ಈ ಹಿಂದೆ ತಮ್ಮ 49 ದಿನಗಳ ಅಧಿಕಾರಾವಧಿಯಲ್ಲಿ ತಮ್ಮ ಕ್ರಮಗಳಿಗಾಗಿ ನಿರಂತರವಾಗಿ ಕ್ಷಮೆಯಾಚಿಸಿದರು ಮತ್ತು ಮತ್ತೆ ರಾಜೀನಾಮೆ ನೀಡುವುದಿಲ್ಲ ಎಂದು ಭರವಸೆ ನೀಡಿದರು. 2011 ರ ಭ್ರಷ್ಟಾಚಾರ ವಿರೋಧಿ ಆಂದೋಲನದಿಂದ ಹೊರಹೊಮ್ಮಿದ ಎಎಪಿಯನ್ನು ಮರುವರ್ಷ ಗಾಂಧಿ ಜಯಂತಿಯಂದು (ಅಕ್ಟೋಬರ್ 2) ಕೇಜ್ರಿವಾಲ್ ಮತ್ತು ಅವರ ಸಹಚರರು ರಾಷ್ಟ್ರ ರಾಜಧಾನಿಯಲ್ಲಿ ಸ್ಥಾಪಿಸಿದರು. 12 ವರ್ಷಗಳ ಅಲ್ಪಾವಧಿಯಲ್ಲಿ, ಕೇಜ್ರಿವಾಲ್ ದೆಹಲಿ ಮತ್ತು ಪಂಜಾಬ್‌ನಲ್ಲಿ ಮಾತ್ರವಲ್ಲದೆ ದೂರದ ಗುಜರಾತ್ ಮತ್ತು ಗೋವಾದಲ್ಲಿಯೂ ತನ್ನ ಹೆಜ್ಜೆಗುರುತು ಹೊಂದುವ ಮೂಲಕ ಬಿಜೆಪಿ ಮತ್ತು ಕಾಂಗ್ರೆಸ್‌ ನಂತರ ಮೂರನೇ ಅತಿದೊಡ್ಡ ರಾಷ್ಟ್ರೀಯ ಪಕ್ಷವಾಗಿ ಎಎಪಿಯನ್ನು ಏಕಾಂಗಿಯಾಗಿ ಮುನ್ನಡೆಸಿದ್ದಾರೆ.

ಕೇಜ್ರಿವಾಲ್
ದೆಹಲಿ ಸಿಎಂ ಕೇಜ್ರಿವಾಲ್ ಜೈಲು ಸೇರಿದ್ದೇಕೆ? ಏನಿದು ದೆಹಲಿ ಅಬಕಾರಿ ನೀತಿ ಹಗರಣ?

ಭ್ರಷ್ಟಾಚಾರ ವಿರುದ್ಧ ಭಾರತ ಹೋರಾಟದ ಸಂದರ್ಭದಲ್ಲಿ ರಾಜಕೀಯ ನಾಯಕರಿಗೆ ಸವಾಲೆಸಿದ್ದ ಕೇಜ್ರಿವಾಲ್ ನೈಜ ರಾಜಕೀಯದ ರುಚಿಯನ್ನು ತೋರಿಸಲು ಸಕ್ರಿಯ ರಾಜಕಾರಣಕ್ಕೆ ಧುಮುಕಿ,ಆರೋಗ್ಯ, ಶಿಕ್ಷಣ, ನೀರು ಮತ್ತು ವಿದ್ಯುತ್ ಪೂರೈಕೆಯಂತಹ ವಿಷಯಗಳನ್ನು ತಮ್ಮ ರಾಜಕೀಯ ಮತ್ತು ಆಡಳಿತದ ತಿರುಳಾಗಿ ಇರಿಸಿಕೊಳ್ಳಲು ಯಶಸ್ವಿಯಾದರು. ಲೋಕಪಾಲದ ಭರವಸೆಯನ್ನು ಕೈಬಿಟ್ಟಿದ್ದಕ್ಕಾಗಿ ಅವರ ವಿರೋಧಿಗಳು ಅವರನ್ನು ದೂಷಿಸಿದರು. 2011 ರಲ್ಲಿ ಆಗಿನ ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತದ ಮೇಲೆ ದೊಡ್ಡ ಟಿಕೆಟ್ ಭ್ರಷ್ಟಾಚಾರದ ಆರೋಪಗಳ ಮೇಲೆ ವ್ಯಾಪಕವಾದ ಸಾರ್ವಜನಿಕ ಕೋಪದ ಮೇಲೆ ಸವಾರಿ ಮಾಡುವ ಕಾರ್ಯಕರ್ತನಾಗಿ ಪ್ರಾಮುಖ್ಯತೆಗೆ ಏರಿದ ಕೇಜ್ರಿವಾಲ್, ದೇಶದಲ್ಲಿ ಆರೋಗ್ಯ ಮತ್ತು ಶಿಕ್ಷಣದ ಹದಗೆಟ್ಟ ಸ್ಥಿತಿಯ ಬಗ್ಗೆ ರಾಜಕಾರಣಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ತಮ್ಮ ಒಂದು ದಶಕದ ಸುದೀರ್ಘ ರಾಜಕೀಯ ಪಯಣದಲ್ಲಿ, ಕೇಜ್ರಿವಾಲ್ ಇಂಡಿಯಾ ಮೈತ್ರಿಕೂಟ ಸೇರ್ಪಡೆ, ಧಾರ್ಮಿಕ ಸ್ಥಳಗಳಿಗೆ ಉಚಿತ ಯಾತ್ರೆ, "ಮೃದು ಹಿಂದುತ್ವ" ವಿಧಾನವನ್ನು ಅಳವಡಿಸಿಕೊಂಡರು. ಇತ್ತೀಚಿಗೆ ದೆಹಲಿ ಅಸೆಂಬ್ಲಿಯಲ್ಲಿ ಶ್ರೀರಾಮ್ ಘೋಷಣೆ ಕೂಗಿದ್ದರು. ಒಮ್ಮೆ ಅವರು ದೇಶದ ಆರ್ಥಿಕ ಏಳಿಗೆಗಾಗಿ ಕರೆನ್ಸಿ ನೋಟುಗಳಲ್ಲಿ ಗಣೇಶ ಮತ್ತು ಲಕ್ಷ್ಮಿ ಫೋಟೋಗಳನ್ನು ಹಾಕಬೇಕೆಂದು ಒತ್ತಾಯಿಸಿದ್ದರು.

ಮದ್ಯದ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ಜೈಲಿಗೆ ಹೋಗುತ್ತಿದ್ದಂತೆ ಭ್ರಷ್ಟಾಚಾರ ಮುಕ್ತ ಆಡಳಿತ ಮತ್ತು ಪರ್ಯಾಯ ರಾಜಕೀಯದ ಎಎಪಿ ಹೇಳಿಕೆ ಮೇಲೆ ದೊಡ್ಡ ಹೊಡೆತ ಉಂಟಾಗಿದೆ. ಸಿಸೋಡಿಯಾ, ಸಿಂಗ್ ಮತ್ತು ಸತ್ಯೇಂದ್ರ ಜೈನ್ ಅವರನ್ನು ಸಮರ್ಥಿಸಿಕೊಳ್ಳುವಾಗ ಕೇಜ್ರಿವಾಲ್ ಭ್ರಷ್ಟಾಚಾರವನ್ನು "ದೇಶದ್ರೋಹ" ಎಂದು ಕರೆಯುತ್ತಿದ್ದರು ಮತ್ತು ಎಎಪಿ ಭಗತ್ ಸಿಂಗ್ ತೋರಿಸಿದ ಮಾರ್ಗವನ್ನು ಅನುಸರಿಸುತ್ತದೆ ಎಂದು ಪ್ರತಿಪಾದಿಸಿದರು. ಭ್ರಷ್ಟಾಚಾರ ಪ್ರಕರಣದಲ್ಲಿ ಕೇಜ್ರಿವಾಲ್ ಬಂಧನ ಎಎಪಿ ನಾಯಕರಾಗಿ 2013 ರಲ್ಲಿ ಶೀಲಾ ದೀಕ್ಷಿತ್ ಸರ್ಕಾರದ ಮೇಲೆ ಹೆಚ್ಚಿದ ನೀರು ಮತ್ತು ವಿದ್ಯುತ್ ಬಿಲ್‌ಗಳ ಮೇಲೆ ಕ್ರಮಕ್ಕಾಗಿ ಒತ್ತಡ ಹೇರಲು 14 ದಿನಗಳ ಉಪವಾಸವನ್ನು ನಡೆಸಿದ ಕೇಜ್ರಿವಾಲ್ ಅವರ ಹಿಂದಿನ ವ್ಯಕ್ತಿತ್ವಕ್ಕೆ ಒಂದು ದೊಡ್ಡ ನಿರ್ಗಮನವಾಗಿದೆ. 2014-15ರ ಸುಮಾರಿಗೆ ಬೆಳೆದ ಪಕ್ಷವೊಂದರ ತೆಳ್ಳಗಿನ, ಕನ್ನಡಕ, ಮಫ್ಲರ್ ಧರಿಸಿದ ನಾಯಕರಾಗಿ ಪ್ರಾರಂಭವಾದ ತಮ್ಮ ರಾಜಕೀಯ ಪ್ರಯಾಣದಲ್ಲಿ ಕಡಿಮೆ ಅವಧಿಯಲ್ಲಿ ಬಹಳ ದೂರ ಸಾಗಿರುವ ಮಫ್ಲರ್ ಮ್ಯಾನ್ ಕೇಜ್ರಿವಾಲ್ ಅವರು ದೇಶದ ಉನ್ನತ ರಾಜಕಾರಣಿಗಳಲ್ಲಿ ಸ್ಥಾನ ಪಡೆದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com