ದೆಹಲಿ ಸಿಎಂ ಬಂಧನ ಕುರಿತ ಹೇಳಿಕೆ: ಜರ್ಮನಿ ರಾಯಭಾರಿಗೆ ಭಾರತ ಸಮನ್ಸ್!

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನ ಕುರಿತು ಪ್ರತಿಕ್ರಿಯಿಸಿರುವ ಜರ್ಮನಿಯ ಹಿರಿಯ ರಾಯಭಾರಿ ಅಧಿಕಾರಿಗೆ ಭಾರತ ಶನಿವಾರ ಸಮನ್ಸ್ ನೀಡಿದ್ದು, ತೀವ್ರ ಪ್ರತಿಭಟನೆಯನ್ನು ದಾಖಲಿಸಿದೆ. ರಾಜಧಾನಿಯಲ್ಲಿ ವಿದೇಶಾಂಗ ವ್ಯವಹಾರಗಳ ಕಚೇರಿಯಿಂದ ಜರ್ಮನಿಯ ರಾಯಭಾರಿ ಜಾರ್ಜ್ ಎಂಜ್‌ವೀಲರ್ ಅವರು ಹೊರಹೋಗುತ್ತಿರುವುದು ಕಂಡುಬಂದಿತು.
ಜರ್ಮನಿ ರಾಯಭಾರಿ ಅಧಿಕಾರಿ
ಜರ್ಮನಿ ರಾಯಭಾರಿ ಅಧಿಕಾರಿ
Updated on

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನ ಕುರಿತು ಪ್ರತಿಕ್ರಿಯಿಸಿರುವ ಜರ್ಮನಿಯ ಹಿರಿಯ ರಾಯಭಾರಿ ಅಧಿಕಾರಿಗೆ ಭಾರತ ಶನಿವಾರ ಸಮನ್ಸ್ ನೀಡಿದ್ದು, ತೀವ್ರ ಪ್ರತಿಭಟನೆಯನ್ನು ದಾಖಲಿಸಿದೆ. ರಾಜಧಾನಿಯಲ್ಲಿ ವಿದೇಶಾಂಗ ವ್ಯವಹಾರಗಳ ಕಚೇರಿಯಿಂದ ಜರ್ಮನಿಯ ರಾಯಭಾರಿ ಜಾರ್ಜ್ ಎಂಜ್‌ವೀಲರ್ ಅವರು ಹೊರಹೋಗುತ್ತಿರುವುದು ಕಂಡುಬಂದಿತು.

ಕೇಜ್ರಿವಾಲ್ ಅವರ ಬಂಧನವನ್ನು ಗಮನಿಸಿದ್ದು, ನ್ಯಾಯಾಂಗದ ಸ್ವಾತಂತ್ರ್ಯ ಮತ್ತು ಮೂಲಭೂತ ಪ್ರಜಾಪ್ರಭುತ್ವದ ತತ್ವಗಳಿಗೆ ಸಂಬಂಧಿಸಿದ ಮಾನದಂಡಗಳು ಅನ್ವಯವಾಗುತ್ತವೆ ಎಂದು ನಿರೀಕ್ಷಿಸುತ್ತದೆ ಎಂದು ಜರ್ಮನಿ ವಿದೇಶಾಂಗ ಕಚೇರಿ ಶುಕ್ರವಾರ ಹೇಳಿದ ನಂತರ, ಆಂತರಿಕ ವಿಷಯಗಳಲ್ಲಿ 'ಪ್ರಚೋದನಾಕಾರಿ ಹಸ್ತಕ್ಷೇಪ' ಎಂದು ಭಾರತ ಆಕ್ಷೇಪ ವ್ಯಕ್ತಪಡಿಸಿತ್ತು.

ಲೋಕಸಭೆ ಚುನಾವಣೆಗೆ ಕೆಲ ವಾರಗಳು ಬಾಕಿಯಿರುವಂತೆಯೇ ಜರ್ಮನಿಯ ವಿದೇಶಾಂಗ ಸಚಿವಾಲಯದ ವಕ್ತಾರರಾದ ಸೆಬಾಸ್ಟಿಯನ್ ಫಿಶರ್ ಅವರ ಹೇಳಿಕೆಗಳು ಕೇಜ್ರಿವಾಲ್ ಅವರ ಬಂಧನವನ್ನು ಜರ್ಮನ್ ಸರ್ಕಾರ ಹೇಗೆ ನಿರ್ಣಯಿಸಿತು ಎಂಬುದಕ್ಕೆ ಪ್ರತಿಕ್ರಿಯೆಯಾಗಿದೆ. ನಾವು ಪ್ರಕರಣವನ್ನು ಗಮನಿಸಿದ್ದೇವೆ. ಭಾರತವು ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ನ್ಯಾಯಾಂಗದ ಸ್ವಾತಂತ್ರ್ಯ ಮತ್ತು ಮೂಲಭೂತ ಪ್ರಜಾಪ್ರಭುತ್ವದ ತತ್ವಗಳಿಗೆ ಸಂಬಂಧಿಸಿದ ಮಾನದಂಡಗಳು ಈ ಪ್ರಕರಣದಲ್ಲಿ ಅನ್ವಯಿಸುತ್ತವೆ ಎಂದು ಭಾವಿಸುತ್ತೇವೆ ಮತ್ತು ನಿರೀಕ್ಷಿಸುತ್ತೇವೆ ಎಂದು ಫಿಶರ್ ತಮ್ಮ ಸಚಿವಾಲಯದ ವೆಬ್‌ಸೈಟ್‌ನಲ್ಲಿ ತಿಳಿಸಿದ್ದಾರೆ.

ಜರ್ಮನಿ ರಾಯಭಾರಿ ಅಧಿಕಾರಿ
ಭ್ರಷ್ಟಾಚಾರದಲ್ಲಿ ಸಿಲುಕಿರುವವರನ್ನು ಬಂಧಿಸಲು ಇದು ಸಕಾಲ: ಕೇಜ್ರಿವಾಲ್ ಬಂಧನ ಕುರಿತು ಸಂಬಿತ್ ಪಾತ್ರಾ ಪ್ರತಿಕ್ರಿಯೆ

"ಆರೋಪ ಎದುರಿಸುತ್ತಿರುವ ಯಾರೊಬ್ಬರಂತೆ, ಕೇಜ್ರಿವಾಲ್ ಕೂಡಾ ನ್ಯಾಯಯುತ ಮತ್ತು ನಿಷ್ಪಕ್ಷಪಾತ ವಿಚಾರಣೆಗೆ ಅರ್ಹರಾಗಿದ್ದಾರೆ. ಅವರು ಲಭ್ಯವಿರುವ ಎಲ್ಲಾ ಕಾನೂನು ಮಾರ್ಗಗಳನ್ನು ನಿರ್ಬಂಧಗಳಿಲ್ಲದೆ ಬಳಸಿಕೊಳ್ಳಬಹುದು. ಮುಗ್ಧತೆಯ ಊಹೆಯು ಕಾನೂನಿನ ನಿಯಮದ ಕೇಂದ್ರ ಅಂಶವಾಗಿದೆ ಮತ್ತು ಅವರಿಗೆ ಅನ್ವಯಿಸಬೇಕು ಎಂದು ಹೇಳಿಕೆ ತಿಳಿಸಿದೆ.

ಜಾರಿ ನಿರ್ದೇಶನಾಲಯವು ಆಮ್ ಆದ್ಮಿ ಪಕ್ಷದ ಮುಖ್ಯಸ್ಥರನ್ನು ದೆಹಲಿ ಸರ್ಕಾರದ ಇತರ ಮಂತ್ರಿಗಳೊಂದಿಗೆ ಶಾಮೀಲಾಗಿರುವ ಅಬಕಾರಿ ಹಗರಣದ ಕಿಂಗ್‌ಪಿನ್ ಎಂದು ಕರೆದಿದೆ. ಕೆಲವು ವ್ಯಕ್ತಿಗಳಿಗೆ ಅನುಕೂಲವಾಗುವಂತೆ 2021-22ರ ಅಬಕಾರಿ ನೀತಿಯನ್ನು ರೂಪಿಸುವ ಪಿತೂರಿಯಲ್ಲಿ ಕೇಜ್ರಿವಾಲ್ ಭಾಗಿಯಾಗಿದ್ದಾರೆ ಎಂದು ಅದು ಹೇಳಿದೆ. ವಿಶೇಷ ನ್ಯಾಯಾಲಯ ಶುಕ್ರವಾರ ಕೇಜ್ರಿವಾಲ್ ಅವರನ್ನು ಮಾರ್ಚ್ 28 ರವರೆಗೆ ಆರು ದಿನಗಳ ಇಡಿ ಕಸ್ಟಡಿಗೆ ನೀಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com