ದೇಶದೆಹಲಿ ಸಿಎಂ ಬಂಧನ ಕುರಿತ ಹೇಳಿಕೆ: ಜರ್ಮನಿ ರಾಯಭಾರಿಗೆ ಭಾರತ ಸಮನ್ಸ್!
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನ ಕುರಿತು ಪ್ರತಿಕ್ರಿಯಿಸಿರುವ ಜರ್ಮನಿಯ ಹಿರಿಯ ರಾಯಭಾರಿ ಅಧಿಕಾರಿಗೆ ಭಾರತ ಶನಿವಾರ ಸಮನ್ಸ್ ನೀಡಿದ್ದು, ತೀವ್ರ ಪ್ರತಿಭಟನೆಯನ್ನು ದಾಖಲಿಸಿದೆ. ರಾಜಧಾನಿಯಲ್ಲಿ ವಿದೇಶಾಂಗ ವ್ಯವಹಾರಗಳ ಕಚೇರಿಯಿಂದ ಜರ್ಮನಿಯ ರಾಯಭಾರಿ ಜಾರ್ಜ್ ಎಂಜ್ವೀಲರ್ ಅವರು ಹೊರಹೋಗುತ್ತಿರುವುದು ಕಂಡುಬಂದಿತು.