ಪಂಜಾಬ್‌ನ ಹೊಸ ಅಬಕಾರಿ ನೀತಿ ಕುರಿತು ತನಿಖೆ ಸಾಧ್ಯತೆ!

ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಎಎಪಿ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದ ನಂತರ, ಅಬಕಾರಿ ಪ್ರಕರಣದ ನೆರಳು ಪಂಜಾಬ್‌ನ ಹೊಸ ಅಬಕಾರಿ ನೀತಿಯ ಮೇಲೂ ಬೀಳುವ ಸಾಧ್ಯತೆಯಿದೆ.
ಪಂಜಾಬ್ ಸಿಎಂ ಭಗವಂತ್ ಮಾನ್
ಪಂಜಾಬ್ ಸಿಎಂ ಭಗವಂತ್ ಮಾನ್

ಚಂಡೀಗಢ: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಎಎಪಿ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದ ನಂತರ, ಅಬಕಾರಿ ಪ್ರಕರಣದ ನೆರಳು ಪಂಜಾಬ್‌ನ ಹೊಸ ಅಬಕಾರಿ ನೀತಿಯ ಮೇಲೂ ಬೀಳುವ ಸಾಧ್ಯತೆಯಿದೆ.

ರಾಜಕೀಯ ಮತ್ತು ಆಡಳಿತಾತ್ಮಕ ವಲಯಗಳಲ್ಲಿ ಆತಂಕ ಮತ್ತು ಭಯದ ಜೊತೆಗೆ, ಪಂಜಾಬ್ ಬಿಜೆಪಿಯು ಭಾರತದ ಚುನಾವಣಾ ಆಯೋಗವನ್ನು ಸಂಪರ್ಕಿಸಲು ಮತ್ತು ರಾಜ್ಯದ ಅಬಕಾರಿ ನೀತಿಯ ಬಗ್ಗೆ ಇಡಿ ತನಿಖೆಯನ್ನು ಕೋರಲು ನಿರ್ಧರಿಸಿದೆ. ಇದು ದೆಹಲಿಯಲ್ಲಿನ ರೀತಿಯಲ್ಲಿಯೇ ರೂಪಿಸಲಾಗಿದೆ ಎಂದು ಹೇಳಿಕೊಂಡಿದೆ.

ಪಂಜಾಬ್ ಸಿಎಂ ಭಗವಂತ್ ಮಾನ್
ಅಬಕಾರಿ ನೀತಿ ಪ್ರಕರಣ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ 6 ದಿನ ಇಡಿ ವಶಕ್ಕೆ

ಯಾವುದೇ ತನಿಖೆಯನ್ನು ಎದುರಿಸಲು ಸಿದ್ಧ ಎಂದು ಪಂಜಾಬ್ ಅಬಕಾರಿ ಮತ್ತು ಹಣಕಾಸು ಸಚಿವ ಹರ್ಪಾಲ್ ಸಿಂಗ್ ಚೀಮಾ ಹೇಳಿದ್ದಾರೆ. ಇದು ಉತ್ತಮ ನೀತಿ ಮತ್ತು ಅಬಕಾರಿ ಸುಂಕದಿಂದ ನಮ್ಮ ಆದಾಯ ಕೇವಲ ಎರಡು ವರ್ಷಗಳಲ್ಲಿ 4,000 ಕೋಟಿ ರೂ.ಗಳಷ್ಟು ಹೆಚ್ಚಾಗಿದೆ. ರಾಜ್ಯದಲ್ಲಿ ಲಿಕ್ಕರ್ ಮಾಫಿಯಾವನ್ನು ಕೊನೆಗಾಣಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದಿದ್ದಾರೆ.

ಈ ಹಿಂದೆ ಐಎಂಎಫ್‌ಎಲ್‌ ಮತ್ತು ಬಾಟಲ್ ಇನ್ ಒರಿಜಿನ್' ಲಿಕ್ಕರ್ ಗಾಗಿ ದೆಹಲಿ ಮೂಲದ ಎರಡು ಕಂಪನಿಗಳಿಗೆ ಸಗಟು ಮದ್ಯದ ಪರವಾನಗಿಗಳ ಹಂಚಿಕೆಯ ವರದಿಗಳ ನಂತರ ಪಂಜಾಬ್ ಅಬಕಾರಿ ನೀತಿಗೆ ಸಂಬಂಧಿಸಿದಂತೆ ಇಡಿ ಮೂವರು ಐಎಎಸ್ ಅಧಿಕಾರಿಗಳು ಮತ್ತಿತರ ಒಂದು ಡಜನ್ ಅಧಿಕಾರಿಗಳು ಪ್ರಶ್ನಿಸಿತ್ತು ಎಂದು ಮೂಲಗಳು ಹೇಳಿವೆ. ದೆಹಲಿಯ ಅಬಕಾರಿ ನೀತಿ ಮತ್ತು IMFLand BIO ಮದ್ಯಕ್ಕಾಗಿ L1 ಪರವಾನಗಿಗೆ ಸಂಬಂಧಿಸಿದಂತೆ ಎರಡು ಕಂಪನಿಗಳಲ್ಲಿ ತನಿಖೆ ನಡೆಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com