''ಭೋಜಶಾಲಾ ಸರಸ್ವತಿ ಮಂದಿರ.. ಅದನ್ನು ಇಸ್ಲಾಮಿಕ್ ಪ್ರಾರ್ಥನಾ ಕೇಂದ್ರವಾಗಿ ಮಾರ್ಪಡಿಸಲಾಯಿತು.. ಆದರೆ'': ಪುರಾತತ್ವಶಾಸ್ತ್ರಜ್ಞ ಕೆ.ಕೆ.ಮುಹಮ್ಮದ್

ಜ್ಞಾನವಾಪಿಯಂತೆಯೇ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವ ಮಧ್ಯಪ್ರದೇಶದ ಭೋಜಶಾಲಾ ಮೊದಲು ಸರಸ್ವತಿ ಮಂದಿರವಾಗಿತ್ತು.. ಬಳಿಕ ಅದನ್ನು ಇಸ್ಲಾಮಿಕ್ ಪ್ರಾರ್ಥನಾ ಕೇಂದ್ರವಾರಿ ಮಾರ್ಪಡಿಸಲಾಗಿತ್ತು ಎಂದು ಖ್ಯಾತ ಪುರಾತತ್ವಶಾಸ್ತ್ರಜ್ಞ ಕೆ.ಕೆ.ಮುಹಮ್ಮದ್ ಹೇಳಿದ್ದಾರೆ.
ಪುರಾತತ್ವಶಾಸ್ತ್ರಜ್ಞ ಕೆ.ಕೆ.ಮುಹಮ್ಮದ್
ಪುರಾತತ್ವಶಾಸ್ತ್ರಜ್ಞ ಕೆ.ಕೆ.ಮುಹಮ್ಮದ್

ನವದೆಹಲಿ: ಜ್ಞಾನವಾಪಿಯಂತೆಯೇ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವ ಮಧ್ಯಪ್ರದೇಶದ ಭೋಜಶಾಲಾ ಮೊದಲು ಸರಸ್ವತಿ ಮಂದಿರವಾಗಿತ್ತು.. ಬಳಿಕ ಅದನ್ನು ಇಸ್ಲಾಮಿಕ್ ಪ್ರಾರ್ಥನಾ ಕೇಂದ್ರವಾರಿ ಮಾರ್ಪಡಿಸಲಾಗಿತ್ತು ಎಂದು ಖ್ಯಾತ ಪುರಾತತ್ವಶಾಸ್ತ್ರಜ್ಞ ಕೆ.ಕೆ.ಮುಹಮ್ಮದ್ ಹೇಳಿದ್ದಾರೆ.

ಮಧ್ಯಪ್ರದೇಶದ ಧಾರ್ ಜಿಲ್ಲೆಯ ವಿವಾದಿತ ಭೋಜ್ಶಾಲಾ/ಕಮಲ್ ಮೌಲಾ ಮಸೀದಿ ಸಂಕೀರ್ಣ ಮೊದಲು ಸರಸ್ವತಿ ದೇವಸ್ಥಾನವಾಗಿತ್ತು ಮತ್ತು ನಂತರ ಅದನ್ನು ಇಸ್ಲಾಮಿಕ್ ಪೂಜಾ ಸ್ಥಳವಾಗಿ ಪರಿವರ್ತಿಸಲಾಗಿದೆ. ಆದರೆ ಹಿಂದೂಗಳು ಮತ್ತು ಮುಸ್ಲಿಮರು ನ್ಯಾಯಾಲಯದ ತೀರ್ಪಿಗೆ ಬದ್ಧರಾಗಿರಬೇಕು ಮತ್ತು ಪೂಜಾ ಸ್ಥಳಗಳ ಕಾಯಿದೆ 1991 ಅನ್ನು ಗೌರವಿಸಬೇಕು ಮತ್ತು ಅಂತಹ ಸ್ಥಳಗಳ ಮೇಲಿನ ಭಿನ್ನಾಭಿಪ್ರಾಯಗಳನ್ನು ನಿವಾರಿಸಲು ಒಟ್ಟಿಗೆ ಕುಳಿತುಕೊಳ್ಳಬೇಕು. ಅಂತೆಯೇ ಮಥುರಾ ಮತ್ತು ಕಾಶಿಯಲ್ಲಿ ಹಿಂದೂಗಳ ಭಾವನೆಗಳನ್ನು ಮುಸ್ಲಿಮರು ಗೌರವಿಸಬೇಕು ಎಂದು ಅವರು ಒತ್ತಿ ಹೇಳಿದರು.

ಭೋಜ್ ಶಾಲಾ ಸಮೀಕ್ಷೆಗೆ ಮಧ್ಯಪ್ರದೇಶ ಹೈಕೋರ್ಟ್‌ನ ನಿರ್ದೇಶನದ ನಂತರ, ಇದೇ ಮೊದಲ ಬಾರಿಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಮಧ್ಯ ಪ್ರದೇಶದ ಬುಡಕಟ್ಟು ಪ್ರಾಬಲ್ಯದ ಜಿಲ್ಲೆಯ ವಿವಾದಿತ ಭೋಜಶಾಲಾ ಸಂಕೀರ್ಣದ ಸಮೀಕ್ಷೆಯನ್ನು ನಡೆಸುತ್ತಿದೆ. ಹಿಂದೂಗಳು ಇದು ವಾಗ್ದೇವಿ (ಸರಸ್ವತಿ) ದೇವಿಯ ದೇವಸ್ಥಾನ ಎಂದು ನಂಬುತ್ತಾರೆ ಮತ್ತು ಮುಸ್ಲಿಂ ಸಮುದಾಯವು ಕಮಲ್ ಮೌಲಾ ಮಸೀದಿ ಎಂದು ಕರೆಯುತ್ತಾರೆ.

ಪುರಾತತ್ವಶಾಸ್ತ್ರಜ್ಞ ಕೆ.ಕೆ.ಮುಹಮ್ಮದ್
ಜ್ಞಾನವಾಪಿ ಬಳಿಕ ಧಾರ್‌ನ ಭೋಜಶಾಲೆಯಲ್ಲಿ ASI ಸಮೀಕ್ಷೆಗೆ ಇಂದೋರ್ ಹೈಕೋರ್ಟ್‌ನ ಮಹತ್ವದ ಆದೇಶ!

ಈ ಬಗ್ಗೆ ಮತ್ತು ದೇಗುಲದ ಐತಿಹ್ಯ ಬಗ್ಗೆ ಮಾತನಾಡಿದ ಪುರಾತತ್ವಶಾಸ್ತ್ರಜ್ಞ ಕೆ.ಕೆ.ಮುಹಮ್ಮದ್ ಅವರು, ''"ಧಾರ್ (ಭೋಜಶಾಲಾ) ಬಗ್ಗೆ ಐತಿಹಾಸಿಕ ಸತ್ಯವೆಂದರೆ ಅದು ಸರಸ್ವತಿ ದೇವಾಲಯವಾಗಿತ್ತು. ಅದನ್ನು ಇಸ್ಲಾಮಿಕ್ ಮಸೀದಿಯಾಗಿ ಪರಿವರ್ತಿಸಲಾಯಿತು. ಆದರೆ ಪೂಜಾ ಸ್ಥಳಗಳ ಕಾಯಿದೆ 1991 ರ ಪ್ರಕಾರ, ಇದು 1947ರ ದೇವಾಲಯವಾಗಿದ್ದರೆ.

ನಂತರ ಅದು ದೇವಸ್ಥಾನ ಮತ್ತು ಅದು ಮಸೀದಿಯಾಗಿದ್ದರೆ ಅದು ಮಸೀದಿಯಾಗಿರಲಿದೆ. ಎರಡೂ ಪಕ್ಷಗಳು ಕಾಯಿದೆಯನ್ನು ಒಪ್ಪಿಕೊಳ್ಳಬೇಕು. ಹೈಕೋರ್ಟ್ ಎಲ್ಲಾ ಸಂಗತಿಗಳನ್ನು ಪರಿಗಣಿಸಿ ನಿರ್ಧಾರ ತೆಗೆದುಕೊಳ್ಳುತ್ತದೆ. ಎಲ್ಲರೂ ಅದನ್ನು (ಎಚ್‌ಸಿ ನಿರ್ಧಾರ) ಅನುಸರಿಸಬೇಕು ಏಕೆಂದರೆ ಅದು ಒಂದೇ ಪರಿಹಾರವಾಗಿದೆ ಎಂದು ಮಾಜಿ ಪುರಾತತ್ವ ಇಲಾಖೆ ಅಧಿಕಾರಿ ಮುಹಮ್ಮದ್ ಹೇಳಿದರು.

ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಮುಹಮ್ಮದ್, 'ಮಥುರಾ ಮತ್ತು ಕಾಶಿ ಹಿಂದೂಗಳಿಗೆ ಎಷ್ಟು ಮುಖ್ಯವೋ ಹಾಗೆಯೇ ಮುಸ್ಲಿಮರಿಗೆ ಮೆಕ್ಕಾ ಮತ್ತು ಮದೀನವೂ ಅಷ್ಟೇ ಮುಖ್ಯ. ಮುಸ್ಲಿಮರು ಹಿಂದೂಗಳ ಭಾವನೆಗಳನ್ನು ಅರ್ಥಮಾಡಿಕೊಳ್ಳಬೇಕು. ಕಾಶಿಯು ಭಗವಾನ್ ಶಿವನೊಂದಿಗೆ ಸಂಬಂಧ ಹೊಂದಿದೆ ಮತ್ತು ಮಥುರಾ ಭಗವಾನ್ ಕೃಷ್ಣನ ಜನ್ಮಸ್ಥಳವಾಗಿದೆ. ಹಿಂದೂಗಳು ಅವರನ್ನು ಬೇರೆಡೆಗೆ ಸ್ಥಳಾಂತರಿಸಲು ಸಾಧ್ಯವಿಲ್ಲ. ಆದರೆ ಇದು ಮುಸ್ಲಿಮರಿಗೆ ಮಾತ್ರ ಮಸೀದಿಗಳು, ಅವು ಪ್ರವಾದಿ ಮೊಹಮ್ಮದ್ ಅವರೊಂದಿಗೆ ನೇರವಾಗಿ ಸಂಬಂಧ ಹೊಂದಿಲ್ಲ. ಅವರು ಮಸೀದಿಗಳನ್ನು ಬೇರೆಡೆಗೆ ಸ್ಥಳಾಂತರಿಸಬಹುದು ಎಂದು ಕೆಕೆ ಮುಹಮದ್ ಹೇಳಿದರು.

ಪುರಾತತ್ವಶಾಸ್ತ್ರಜ್ಞ ಕೆ.ಕೆ.ಮುಹಮ್ಮದ್
ಜ್ಞಾನವಾಪಿ ಪ್ರಕರಣ: '8 ವಾರಗಳಲ್ಲಿ ಶಿವಲಿಂಗ ಪೂಜೆ ಕುರಿತು ನಿರ್ಧರಿಸಿ'; ವಾರಣಾಸಿ ಕೋರ್ಟ್ ಗೆ ಹೈಕೋರ್ಟ್

ಪಟ್ಟಿ ಮಾಡಬೇಡಿ

ಈ ಸಂಕೀರ್ಣವು ಸರಸ್ವತಿ ದೇವಸ್ಥಾನವಾಗಿತ್ತು ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಸಮಸ್ಯೆ ಸೃಷ್ಟಿಸುವ’ ಯಾವುದನ್ನೂ ಮಾಡಬೇಡಿ. ಈ ವಿಷಯಗಳಲ್ಲಿ ಪರಿಹಾರ ಕಂಡುಕೊಳ್ಳಲು ಎರಡೂ ಸಮುದಾಯಗಳು ಒಟ್ಟಾಗಿ ಕುಳಿತುಕೊಳ್ಳಬೇಕು. ಹಿಂದೂಗಳು (ಆರಾಧನಾ ಸ್ಥಳಗಳ) ಪಟ್ಟಿಯೊಂದಿಗೆ ಬರಬಾರದು ಎಂದು ಪರಿಗಣಿಸಬೇಕು. ನಾವು ದೇಶವನ್ನು ಬಲಪಡಿಸಬೇಕು ಮತ್ತು ಅದನ್ನು ಮುನ್ನಡೆಸಬೇಕು ಮತ್ತು ಅವರು (ಎರಡೂ ಸಮುದಾಯಗಳು) ಒಟ್ಟಿಗೆ ಕುಳಿತುಕೊಳ್ಳಬೇಕು. ಎರಡೂ ಕಡೆಯವರು ವಿವಾದ ಬಗೆಹರಿಸದಿದ್ದರೆ ದೊಡ್ಡ ಸಮಸ್ಯೆಯಾಗಲಿದೆ ಎಂದು ಎಚ್ಚರಿಸಿದರು.

ಮುಹಮ್ಮದ್ ಅವರು 1976-77ರಲ್ಲಿ ಅಯೋಧ್ಯೆಯಲ್ಲಿ ಪ್ರೊಫೆಸರ್ ಬಿ ಬಿ ಲಾಲ್ ನೇತೃತ್ವದಲ್ಲಿ ನಡೆದ ಮೊದಲ ಉತ್ಖನನ ತಂಡದ ಭಾಗವಾಗಿದ್ದರು. ಪದ್ಮಶ್ರೀ ಪುರಸ್ಕೃತರಾಗಿರುವ ಅವರು ಈ ಹಿಂದೆ ಬಾಬರಿ ಮಸೀದಿಯ ಕೆಳಗಿರುವ ರಾಮ ಮಂದಿರದ ಅವಶೇಷಗಳನ್ನು ಮೊದಲು ನೋಡಿರುವುದಾಗಿ ಹೇಳಿಕೊಂಡಿದ್ದರು.

ಪುರಾತತ್ವಶಾಸ್ತ್ರಜ್ಞ ಕೆ.ಕೆ.ಮುಹಮ್ಮದ್
ಮುಸ್ಲಿಮರು ವಾರಣಾಸಿ, ಮಥುರಾ ಮಸೀದಿಗಳನ್ನೂ ಕೂಡ ಹಿಂದೂಗಳಿಗೆ ಸ್ವಇಚ್ಛೆಯಿಂದ ಹಸ್ತಾಂತರಿಸಬೇಕು: ಪುರಾತತ್ವಶಾಸ್ತ್ರಜ್ಞ ಕೆಕೆ ಮುಹಮ್ಮದ್ (ಸಂದರ್ಶನ)

ಅಂದಹಾಗೆ ಮಾರ್ಚ್ 11 ರಂದು, ಮಧ್ಯಕಾಲೀನ ಯುಗದ ಸ್ಮಾರಕವಾದ ಭೋಜಶಾಲಾ ಸಂಕೀರ್ಣದ 'ವೈಜ್ಞಾನಿಕ ಸಮೀಕ್ಷೆ'ಯನ್ನು ಆರು ವಾರಗಳಲ್ಲಿ ಕೈಗೊಳ್ಳುವಂತೆ ಭಾರತೀಯ ಪುರಾತತ್ವ ಇಲಾಖೆಗೆ ಹೈಕೋರ್ಟ್ ನಿರ್ದೇಶನ ನೀಡಿತ್ತು. ಭಾನುವಾರ ಮೂರನೇ ದಿನ ಸಮೀಕ್ಷೆ ನಡೆದಿದೆ. ಏಪ್ರಿಲ್ 7, 2003 ರ ASI ಆದೇಶದ ಪ್ರಕಾರ, ಹಿಂದೂಗಳಿಗೆ ಪ್ರತಿ ಮಂಗಳವಾರ ಭೋಜಶಾಲಾ ಸಂಕೀರ್ಣದೊಳಗೆ ಪೂಜೆ ಮಾಡಲು ಅನುಮತಿಸಲಾಗಿದೆ, ಆದರೆ ಮುಸ್ಲಿಮರು ಶುಕ್ರವಾರದಂದು ಸ್ಥಳದಲ್ಲಿ ನಮಾಜ್ ಮಾಡಲು ಅನುಮತಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com