'ಫಿಲಿಬಿಟ್ ಬಿಡುವ ಪ್ರಶ್ನೆಯೇ ಇಲ್ಲ.. ಜನರ ಜೊತೆಗಿನ ಸಂಬಂಧ ರಾಜಕೀಯಕ್ಕೂ ಮೀರಿದ್ದು': ಟಿಕೆಟ್ ನಿರಾಕರಣೆ ಬಳಿಕ ಮತದಾರರಿಗೆ Varun Gandhi ಪತ್ರ!

ವರುಣ್ ಗಾಂಧಿ ತಮ್ಮ ಅಧಿಕೃತದಲ್ಲಿ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ಪೋಸ್ಟ್ ಮಾಡಿದ್ದು, ‘ಶ್ರೀಸಾಮಾನ್ಯನ ಪರ ಧ್ವನಿ ಎತ್ತಲು ರಾಜಕೀಯಕ್ಕೆ ಬಂದಿದ್ದೇನೆ. ಇಂದು ಎಷ್ಟೇ ಬೆಲೆ ತೆತ್ತಾದರೂ ಈ ಕೆಲಸವನ್ನು ನಿರಂತರವಾಗಿ ಮಾಡಲು ನಿಮ್ಮ ಆಶೀರ್ವಾದ ಕೋರುತ್ತೇನೆ ಎಂದಿದ್ದಾರೆ.
ವರುಣ್ ಗಾಂಧಿ
ವರುಣ್ ಗಾಂಧಿ

ಲಖನೌ: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಇತ್ತ ಬಿಜೆಪಿ ಸಂಸದ ವರುಣ್ ಗಾಂಧಿಗೆ ಪಕ್ಷ ಟಿಕೆಟ್ ನಿರಾಕರಿಸಿದ್ದು, ಈ ಸಂಬಂಧ ಸಂಸದ ವರುಣ್ ಗಾಂಧಿ ತಮ್ಮ ಕ್ಷೇತ್ರದ ಮತದಾರರಿಗೆ ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದಾರೆ.

ವರುಣ್ ಗಾಂಧಿ ತಮ್ಮ ಅಧಿಕೃತದಲ್ಲಿ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ಪೋಸ್ಟ್ ಮಾಡಿದ್ದು, ‘ಶ್ರೀಸಾಮಾನ್ಯನ ಪರ ಧ್ವನಿ ಎತ್ತಲು ರಾಜಕೀಯಕ್ಕೆ ಬಂದಿದ್ದೇನೆ. ಇಂದು ಎಷ್ಟೇ ಬೆಲೆ ತೆತ್ತಾದರೂ ಈ ಕೆಲಸವನ್ನು ನಿರಂತರವಾಗಿ ಮಾಡಲು ನಿಮ್ಮ ಆಶೀರ್ವಾದ ಕೋರುತ್ತೇನೆ. ಇಂದು ಈ ಪತ್ರ ಬರೆಯುತ್ತಿರುವಾಗ ಅಸಂಖ್ಯಾತ ನೆನಪುಗಳು ನನ್ನನ್ನು ಭಾವುಕರನ್ನಾಗಿಸಿದೆ ಎಂದಿದ್ದಾರೆ.

‘1983ರಲ್ಲಿ ಮೊದಲ ಬಾರಿಗೆ ಪಿಲಿಭಿತ್‌ಗೆ ತನ್ನ ತಾಯಿಯ ಕೈಬೆರಳನ್ನು ಹಿಡಿದು ಬಂದ 3 ವರ್ಷದ ಪುಟ್ಟ ಮಗುವಾಗಿದ್ದ ನನ್ನ ಆ ದಿನಗಳು ನನಗೆ ಇಂದಿಗೂ ನೆನಪಿದೆ. ‘ಮುಂದೊಂದು ದಿನ ಈ ಭೂಮಿ ತನ್ನ ಕರ್ಮಭೂಮಿಯ ಸ್ಥಳವಾಗುತ್ತದೆ ಮತ್ತು ಇಲ್ಲಿನ ಜನರು ತನ್ನ ಕುಟುಂಬವಾಗುತ್ತಾರೆ ಎಂದು ಅವನಿಗೆ (ಮೂರು ವರ್ಷದ ಮಗುವಿಗೆ) ಹೇಗೆ ಗೊತ್ತಾಯಿತು? ಹಲವು ವರ್ಷಗಳಿಂದ ಪಿಲಿಭಿತ್‌ನ ಮಹಾನ್ ಜನರಿಗೆ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ ಎಂದು ನಾನು ಭಾವಿಸುತ್ತೇನೆ.

ಪಿಲಿಭಿತ್ ಕ್ಷೇತ್ರದಿಂದ ಪಡೆದ ಆದರ್ಶಗಳು, ಸರಳತೆ ಮತ್ತು ದಯೆಯು ಸಂಸದನಾಗಿ ಮಾತ್ರವಲ್ಲದೆ ವ್ಯಕ್ತಿಯಾಗಿಯೂ ನನ್ನ ಉನ್ನತಿಗೆ ಮತ್ತು ಬೆಳವಣಿಗೆಗೆ ಸಾಕಷ್ಟು ಕೊಡುಗೆ ನೀಡಿದೆ ಎಂದು ಹೇಳಿರುವ ವರುಣ್ ಗಾಂಧಿ, ನಿಮ್ಮ ಪ್ರತಿನಿಧಿಯಾಗಿರುವುದು ಮತ್ತು ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಯಾವಾಗಲೂ ನಿಮ್ಮ ಹಿತಾಸಕ್ತಿಗಳಿಗಾಗಿ ಮಾತನಾಡುವುದು ನನ್ನ ಜೀವನದ ದೊಡ್ಡ ಗೌರವವಾಗಿದೆ’ ಎಂದು ವರುಣ್ ಗಾಂಧಿ ಹೇಳಿದ್ದಾರೆ.

‘ಸಂಸದನಾಗಿ ನನ್ನ ಅಧಿಕಾರಾವಧಿ ಮುಗಿಯುತ್ತಿದ್ದರೂ ಪಿಲಿಭಿತ್ ಜೊತೆಗಿನ ಸಂಬಂಧ ನನ್ನ ಕೊನೆಯ ಉಸಿರು ಇರುವವರೆಗೂ ಕೊನೆಗೊಳ್ಳುವುದಿಲ್ಲ.. ಸಂಸದನಾಗಿ ಇಲ್ಲದಿದ್ದರೆ ಮಗನಾಗಿ ನನ್ನ ಜೀವನದುದ್ದಕ್ಕೂ ನಿಮ್ಮ ಸೇವೆ ಮಾಡಲು ಬದ್ಧನಾಗಿದ್ದೇನೆ. ಪಿಲಿಭಿತ್‌ನ ಜನರಿಗೆ ಮೊದಲಿನಂತೆ ತನ್ನ ಮನೆಯ ಬಾಗಿಲು ಯಾವಾಗಲೂ ತೆರೆದಿರುತ್ತದೆ. ನನ್ನ ಮತ್ತು ಪಿಲಿಭಿತ್ ನಡುವಿನ ಸಂಬಂಧವು ಯಾವುದೇ ರಾಜಕೀಯ ಅರ್ಹತೆಗಿಂತಲೂ ಹೆಚ್ಚಿನ ಪ್ರೀತಿ ಮತ್ತು ನಂಬಿಕೆಯ ವಿಷಯವಾಗಿದೆ. ನಾನು ಹಿಂದೆಯೂ ನಿಮ್ಮೊಂದಿಗೆ ಇದ್ದೆ, ಈಗಲೂ ಇದ್ದೇನೆ ಮತ್ತು ಮುಂದೆಯೂ ನಿಮ್ಮವನಾಗಿರುತ್ತೇನೆ’ ಎಂದು ವರುಣ್ ಗಾಂಧಿ ಪತ್ರದ ಕೊನೆಯಲ್ಲಿ ಬರೆದಿದ್ದಾರೆ.

ವರುಣ್ ಗಾಂಧಿ
ವರುಣ್ ಗಾಂಧಿಗೆ ಕೈ ತಪ್ಪಿದ ಬಿಜೆಪಿ ಟಿಕೆಟ್, ಕಾಂಗ್ರೆಸ್ ಸೇರಲು ಆಹ್ವಾನ!

ಅಂದಹಾಗೆ ಈ ಬಾರಿ ಬಿಜೆಪಿ ವರುಣ್ ಗಾಂಧಿ ಟಿಕೆಟ್ ನಿರಾಕರಿಸಿರುವುದು ಗಮನಾರ್ಹ. ಉತ್ತರ ಪ್ರದೇಶದ ಸರ್ಕಾರದಲ್ಲಿ ಸಚಿವರಾಗಿದ್ದ ಜಿತಿನ್ ಪ್ರಸಾದ್ ಅವರನ್ನು ಪಕ್ಷವು ವರುಣ್ ಗಾಂಧಿ ಅವರ ಫಿಲಿಬಿತ್ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನಾಗಿ ನಿಲ್ಲಿಸಿದೆ. ಈ ಹಿಂದೆ ತಮ್ಮದೇ ಕೇಂದ್ರ ಸರ್ಕಾರವನ್ನು ಪರೋಕ್ಷವಾಗಿ ಟೀಕಿಸುವ ಮೂಲಕ ವರುಣ್ ಗಾಂಧಿ ಬಿಜೆಪಿ ಹಿರಿಯ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಇನ್ನು ಈ ಬಾರಿ ವರುಣ್ ಗಾಂಧಿ ಅವರು ತಮ್ಮ ತಾಯಿ ಮೇನಕಾ ಗಾಂಧಿ ಪರ ಸುಲ್ತಾನ್‌ಪುರದಲ್ಲಿ ಪ್ರಚಾರ ನಡೆಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com