AI ನಿಂದ UPI ವರೆಗೆ: ಭಾರತದ ಡಿಜಿಟಲ್ ಕ್ರಾಂತಿ, ಕೃಷಿ, ಮಹಿಳಾ ಸಬಲೀಕರಣ ಬಗ್ಗೆ ಮೋದಿ- ಬಿಲ್ ಗೇಟ್ಸ್ ಆಸಕ್ತಿಕರ ಸಂವಾದ

ದೆಹಲಿಯ ಪ್ರಧಾನ ಮಂತ್ರಿಗಳ ನಿವಾಸದಲ್ಲಿ ಮೈಕ್ರೋ ಸಾಫ್ಟ್ ಸಂಸ್ಥಾಪಕನ ಮಾತುಕತೆ, ಚರ್ಚೆ
ದೆಹಲಿಯ ತಮ್ಮ ನಿವಾಸದಲ್ಲಿ ಮೈಕ್ರೊಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಜೊತೆ ಪ್ರಧಾನಿ ಮೋದಿ
ದೆಹಲಿಯ ತಮ್ಮ ನಿವಾಸದಲ್ಲಿ ಮೈಕ್ರೊಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಜೊತೆ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಶುಕ್ರವಾರ ದೆಹಲಿಯ ಪ್ರಧಾನ ಮಂತ್ರಿ ನಿವಾಸದಲ್ಲಿ ಕೃತಕ ಬುದ್ಧಿಮತ್ತೆಯಿಂದ(Artificial Intelligence)ನಿಂದ ಹಿಡಿದು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಹವಾಮಾನ ಬದಲಾವಣೆ, ಭಾರತದ ಕೃಷಿ, ಆರ್ಥಿಕ ಕ್ಷೇತ್ರ ಹೀಗೆ ಹಲವು ವಿಚಾರಗಳ ಕುರಿತು ವ್ಯಾಪಕವಾಗಿ ಚರ್ಚಿಸಿದ್ದಾರೆ. ಸಂಭಾಷಣೆಯಲ್ಲಿ, ಬಿಲ್ ಗೇಟ್ಸ್ ಭಾರತೀಯರು ತಂತ್ರಜ್ಞಾನವನ್ನು ವೇಗವಾಗಿ ಅಳವಡಿಸಿಕೊಳ್ಳುವ ಮತ್ತು ಮುನ್ನಡೆಸುವ ಸಾಮರ್ಥ್ಯವನ್ನು ಹೊಗಳಿದರು.

ಪ್ರಧಾನಿ ನಮೋ ಅಪ್ಲಿಕೇಶನ್‌ನಲ್ಲಿನ ಫೋಟೋ ಬೂತ್ ಬಳಸಿ ಸೆಲ್ಫಿ ತೆಗೆದುಕೊಳ್ಳಲು ಮೈಕ್ರೋಸಾಫ್ಟ್ ಮುಖ್ಯಸ್ಥರನ್ನು ಪ್ರಧಾನಿ ಮೋದಿ ಕೇಳಿಕೊಂಡರು.

2023ರ ಜಿ20 ಶೃಂಗಸಭೆಯ ಕುರಿತು ಪ್ರಧಾನಿ ಮೋದಿ-ಬಿಲ್ ಗೇಟ್ಸ್ ಮಾತುಕತೆ: ಭಾರತದ ಅಧ್ಯಕ್ಷತೆಯಲ್ಲಿ ಕಳೆದ ವರ್ಷ ಮುಕ್ತಾಯಗೊಂಡ 2023 ರ ಜಿ 20 ಶೃಂಗಸಭೆಯನ್ನು ಚರ್ಚಿಸಿದ ಪ್ರಧಾನಿ ಮೋದಿ, "ಜಿ 20 ಶೃಂಗಸಭೆಯ ಮೊದಲು ನಾವು ವ್ಯಾಪಕವಾದ ವಿಷಯಗಳ ಕುರಿತು ಚರ್ಚೆ ನಡೆಸಿದ್ದೇವೆ. ನೀವು ನೋಡಿದಂತೆ, ಶೃಂಗಸಭೆಯ ಪ್ರಕ್ರಿಯೆಗಳು ಸಾಕಷ್ಟು ತಿರುವುಗಳನ್ನು ಪಡೆದುಕೊಂಡವು. ನಾವು ಈಗ ಜಿ 20 ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ನಾವು ಈಗ G20 ನ ಪ್ರಮುಖ ಉದ್ದೇಶಗಳೊಂದಿಗೆ ಹೊಂದಾಣಿಕೆ ಮಾಡಿದ್ದೇವೆ, ಅವುಗಳನ್ನು ಮುಖ್ಯವಾಹಿನಿಗೆ ತರುತ್ತೇವೆ ಎಂದು ನಾನು ನಂಬುತ್ತೇನೆ ಎಂದಿದ್ದಾರೆ.

ಇದಕ್ಕೆ ಉತ್ತರಿಸಿದ ಬಿಲ್ ಗೇಟ್ಸ್, "G20 ಹೆಚ್ಚು ಅಂತರ್ಗತವಾಗಿದೆ. ಭಾರತವು ಆತಿಥ್ಯ ವಹಿಸಿದ್ದು ನೋಡಲು ಅದ್ಭುತವಾಗಿತ್ತು. ಡಿಜಿಟಲ್ ಆವಿಷ್ಕಾರಗಳಂತಹ ವಿಷಯಗಳನ್ನು ಹೆಚ್ಚಿಸಿದೆ. ಭಾರತದಲ್ಲಿ ಸಾಧಿಸಿರುವ ಹಿಂದಿನ ಫಲಿತಾಂಶಗಳನ್ನು ಇತರ ಹಲವು ದೇಶಗಳಿಗೆ ಕೊಂಡೊಯ್ಯುವ ಪ್ರಯತ್ನದಲ್ಲಿ ನಾವು ಪಾಲುದಾರರಾಗಿದ್ದೇವೆ. ಭಾರತದಲ್ಲಿ ನೀವು ಸಾಧಿಸಿರುವ ಹಿಂದಿನ ಫಲಿತಾಂಶಗಳ ಬಗ್ಗೆ ನಮ್ಮ ಫೌಂಡೇಶನ್ ತುಂಬಾ ಉತ್ಸುಕವಾಗಿದೆ, ಅದನ್ನು ಇತರ ಹಲವು ದೇಶಗಳಿಗೆ ಕೊಂಡೊಯ್ಯುವ ಪ್ರಯತ್ನದಲ್ಲಿ ನಾವು ಪಾಲುದಾರರಾಗಿದ್ದೇವೆ ಎಂದಿದ್ದಾರೆ.

ಭಾರತದಲ್ಲಿ ಡಿಜಿಟಲ್ ಕ್ರಾಂತಿಯ ಕುರಿತು ಮಾತನಾಡಿದ ಪ್ರಧಾನಿ ಮೋದಿ, “ಇಂಡೋನೇಷ್ಯಾದಲ್ಲಿ ನಡೆದ ಜಿ 20 ಶೃಂಗಸಭೆಯ ಸಂದರ್ಭದಲ್ಲಿ, ವಿಶ್ವದಾದ್ಯಂತದ ಪ್ರತಿನಿಧಿಗಳು ದೇಶದಲ್ಲಿ ಡಿಜಿಟಲ್ ಕ್ರಾಂತಿಯ ಬಗ್ಗೆ ತಮ್ಮ ಕುತೂಹಲವನ್ನು ವ್ಯಕ್ತಪಡಿಸಿದರು. ಏಕಸ್ವಾಮ್ಯವನ್ನು ತಡೆಯಲು ನಾವು ತಂತ್ರಜ್ಞಾನವನ್ನು ಪ್ರಜಾಪ್ರಭುತ್ವಗೊಳಿಸಿದ್ದೇವೆ ಎಂದು ನಾನು ಅವರಿಗೆ ವಿವರಿಸಿದೆ. ಇದು ಜನರಿಂದ ಮತ್ತು ಜನರಿಗಾಗಿ ಆಗಿದೆ ಎಂದರು.

ಬಿಲ್ ಗೇಟ್ಸ್ ಭಾರತವನ್ನು ಹೊಗಳಿ ದೇಶವು "ಡಿಜಿಟಲ್ ಸರ್ಕಾರ" ಹೊಂದಿದೆ ಎಂದು ಹೇಳಿದರು. ಭಾರತವು ಕೇವಲ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿಲ್ಲ ಅದನ್ನು ನಿಜವಾಗಿ ಮುನ್ನಡೆಸುತ್ತಿದೆ ಎಂದು ಅವರು ಹೇಳಿದರು.

AI ಬಹಳ ಮುಖ್ಯವಾಗಿದೆ: ‘ನಮೋ ಡ್ರೋನ್ ದೀದಿ’ ಯೋಜನೆಯನ್ನು ಪ್ರಾರಂಭಿಸಿದ್ದೇನೆ. ಇದು ಇದು ಅತ್ಯಂತ ಯಶಸ್ವಿಯಾಗಿ ಮನ್ನಡೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಜತೆ ಸಂವಹನ ನಡೆಸಿದ್ದೇನೆ, ಅವರು ಸಂತೋಷಪಡುತ್ತಾರೆ. ಈ ಹಿಂದೆ ಸೈಕಲ್ ತುಳಿಯುವುದೇ ಕಷ್ಟ ಎನ್ನುತ್ತಿದ್ದ ಮಹಿಳೆಯರು ಈಗ ಪೈಲಟ್‌ಗಳು ಮತ್ತು ಡ್ರೋನ್‌ಗಳನ್ನು ಹಾರಿಸಬಲ್ಲರು. ಭಾರತದಲ್ಲಿ ಮನಃಸ್ಥಿತಿ ಬದಲಾಗಿದೆ ಎಂದು ಮೋದಿ ಹೇಳಿದರು.

ಸಂವಾದದಲ್ಲಿ ಕೃತಕ ಬುದ್ಧಿಮತ್ತೆ (AI) ಕುರಿತು ಮಾತನಾಡಿದ ಮೋದಿ, ಎಐ ಜಾಗತಿಕವಾಗಿ ಸಾಕಷ್ಟು ಸವಾಲುಗಳನ್ನು ಸೃಷ್ಟಿಸುತ್ತಿದೆ ಎಂದು ಬಿಲ್ ಗೇಟ್ಸ್‌ಗೆ ವಿವರಿಸಿದರು. ಜತೆಗೆ ಎಐ ವ್ಯವಸ್ಥೆಗಳಿಗೆ ಸಮಗ್ರ ತರಬೇತಿಯ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು. ಅಲ್ಲದೆ, ಎಐಯಿಂದ ರಚಿತವಾದುದಕ್ಕೆ ವಾಟರ್‌ಮಾರ್ಕ್ ಸೇರಿಸುವ ಕಲ್ಪನೆಯನ್ನು ಪ್ರಸ್ತಾಪಿಸಿದರು.

ಡೀಪ್‌ಫೇಕ್ ತಂತ್ರಜ್ಞಾನ ವಂಚನೆಗೆ ಹೆಚ್ಚು ಬಳಕೆಯಾಗುವ ಸಾಧ್ಯತೆ ಬಗ್ಗೆ ಮೋದಿ ಎಚ್ಚರಿಕೆ ನೀಡಿದರು. ಈ ಬಗ್ಗೆ ಗಮನಹರಿಸುವ ಮತ್ತು ಅದರ ಸಂಪೂರ್ಣ ಮೂಲವನ್ನು ಪತ್ತೆಹಚ್ಚಲು ಬೇಕಾದ ವ್ಯವಸ್ಥೆ ರೂಪಿಸುವ ಅಗತ್ಯವನ್ನು ಒತ್ತಿ ಹೇಳಿದರು. ಎಐ ಮತ್ತು ಡೀಪ್‌ಫೇಕ್ ತಂತ್ರಜ್ಞಾನವನ್ನು ನಿಯಂತ್ರಿಸಲು ಕಾನೂನು ಚೌಕಟ್ಟನ್ನು ರೂಪಿಸುವ ಬಗ್ಗೆಯೂ ಪ್ರತಿಪಾದಿಸಿದರು.

ಸಂವಾದದಲ್ಲಿ ಹವಾಮಾನ ವೈಪರೀತ್ಯ, ಭಯೋತ್ಪಾದನೆ ನಿರ್ಮೂಲನೆ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಯಿತು. ಜಿ20 ದೇಶಗಳ ನಡುವೆ ಸಂಬಂಧ ಸುಧಾರಣೆಗೆ ನಿರ್ಣಯ ಕೈಗೊಳ್ಳಲಾಯಿತು. ಆರ್ಥಿಕ ಸುಧಾರಣೆ, ರಕ್ಷಣೆ, ಶಿಕ್ಷಣ, ವ್ಯಾಪಾರ, ವಿಜ್ಞಾನ-ತಂತ್ರಜ್ಞಾನ, ಪ್ರವಾಸೋದ್ಯಮ, ಪರಿಸರ ಸಂರಕ್ಷಣೆ ಸೇರಿ ಹಲವು ಕ್ಷೇತ್ರಗಳ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಶೃಂಗಸಭೆಯಲ್ಲಿನ ನಿರ್ಣಯಗಳ ಅನುಷ್ಠಾನಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಮೋದಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com