ಇಸ್ರೇಲ್ ನಲ್ಲಿ ಯುದ್ಧ ಟ್ಯಾಂಕರ್ ಗಳ ದಾಳಿಯಲ್ಲಿ ಓರ್ವ ಭಾರತೀಯ ಅಧಿಕಾರಿ ಸಾವು: ವಿಶ್ವಸಂಸ್ಥೆ

ಇಸ್ರೇಲ್ ನಲ್ಲಿ ಯುದ್ಧ ಟ್ಯಾಂಕರ್ ಗಳ ದಾಳಿಯಲ್ಲಿ ಭಾರತೀಯ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.
File pic
ಸಾಂಕೇತಿಕ ಚಿತ್ರonline desk
Updated on

ಗಾಜಾ: ಇಸ್ರೇಲ್ ನಲ್ಲಿ ಯುದ್ಧ ಟ್ಯಾಂಕರ್ ಗಳ ದಾಳಿಯಲ್ಲಿ ಭಾರತೀಯ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.

ಮಾಜಿ ಸೇನಾ ಅಧಿಕಾರಿ ಮೃತಪಟ್ಟಿರುವುದಕ್ಕೆ ವಿಶ್ವಸಂಸ್ಥೆ ಸಂತಾಪ ಸೂಚಿಸಿ ಕ್ಷಮೆ ಕೋರಿದೆ. ಯುದ್ಧಗ್ರಸ್ತ ಗಾಜಾದ ರಫಾದಲ್ಲಿ ಈ ಘಟನೆ ನಡೆದಿದ್ದು, ಇಸ್ರೇಲ್ ನದ್ದು ಎನ್ನಲಾದ ಟ್ಯಾಂಕ್ ನಿಂದ ಸಿಡಿದಿರುವ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ.

ಕರ್ನಲ್ ವೈಭವ್ ಅನಿಲ್ (46) ಮೃತಪಟ್ಟಿದ್ದು, 2022 ರಲ್ಲಿ ಅವಧಿಗೂ ಮುನ್ನವೇ ಭಾರತೀಯ ಸೇನೆಯಿಂದ ನಿವೃತ್ತರಾಗಿದ್ದರು. ಬಳಿಕ ಎರಡು ತಿಂಗಳ ಹಿಂದೆ ವಿಶ್ವ ಸಂಸ್ಥೆಯಲ್ಲಿ ಯುಎನ್ ಡಿಪಾರ್ಟ್ಮೆಂಟ್ ಆಫ್ ಸೇಫ್ಟಿ ಅಂಡ್ ಸೆಕ್ಯುರಿಟಿ (ಡಿಎಸ್ಎಸ್) ನಲ್ಲಿ ಭದ್ರತಾ ಸಮನ್ವಯ ಅಧಿಕಾರಿಯಾಗಿ ನಿಯೋಜನೆಗೊಂಡಿದ್ದರು.

File pic
ರಫಾದಲ್ಲಿ ದಾಳಿ: ಗಾಜಾದಲ್ಲಿ ಭಾರತೀಯ ಮೂಲದ ವಿಶ್ವಸಂಸ್ಥೆ ಸಿಬ್ಬಂದಿ ಸಾವು

ವೈಭವ್ ಅನಿಲ್ ಕಾಶ್ಮೀರದಲ್ಲಿ 11 ಜಮ್ಮು ಮತ್ತು ಕಾಶ್ಮೀರ ರೈಫಲ್ಸ್‌ಗೆ ಕಮಾಂಡರ್ ಆಗಿದ್ದರು, ಕಳೆದ ವರ್ಷ ಇಸ್ರೇಲ್-ಹಮಾಸ್ ಸಂಘರ್ಷ ಪ್ರಾರಂಭವಾದ ನಂತರ ವಿಶ್ವ ಸಂಸ್ಥೆಗೆ 'ಮೊದಲ ಅಂತರರಾಷ್ಟ್ರೀಯ ಗಾಯಾಳು ಅಥವಾ ಸಾವನ್ನಪ್ಪಿರುವ ಮೊದಲ ಅಂತಾರಾಷ್ಟ್ರೀಯ ವ್ಯಕ್ತಿಯಾಗಿದ್ದಾರೆ.

ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಶ್ವಸಂಸ್ಥೆ, ಕ್ಷಮೆಯಾಚಿಸುತ್ತೇವೆ ಮತ್ತು ಭಾರತ ಸರ್ಕಾರ ಮತ್ತು ಜನರಿಗೆ ನಮ್ಮ ಸಂತಾಪವನ್ನು ವ್ಯಕ್ತಪಡಿಸುತ್ತೇವೆ" ಎಂದು ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರಸ್ ಅವರ ಉಪ ವಕ್ತಾರ ಫರ್ಹಾನ್ ಹಕ್ ದೈನಂದಿನ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಗಾಜಾದಲ್ಲಿ 190 ಕ್ಕೂ ಹೆಚ್ಚು ಯುಎನ್ ಸಿಬ್ಬಂದಿ ಕೊಲ್ಲಲ್ಪಟ್ಟಿದ್ದಾರೆ ಎಂದು ಫರ್ಹಾನ್ ಹಕ್ ಹೇಳಿದ್ದಾರೆ. 'ಮಾನವೀಯ ಕಾರ್ಯಕರ್ತರಿಗೆ ರಕ್ಷಣೆ ನೀಡಬೇಕು. ವಿಶ್ವಸಂಸ್ಥೆ ಸಿಬ್ಬಂದಿಯ ಮೇಲಿನ ಎಲ್ಲಾ ದಾಳಿಗಳನ್ನು ನಾನು ಖಂಡಿಸುತ್ತೇನೆ ಮತ್ತು ತಕ್ಷಣದ ಮಾನವೀಯ ಕದನ ವಿರಾಮ ಮತ್ತು ಎಲ್ಲಾ ಒತ್ತೆಯಾಳುಗಳ ಬಿಡುಗಡೆಗಾಗಿ ನನ್ನ ತುರ್ತು ಮನವಿಯನ್ನು ಪುನರುಚ್ಚರಿಸುತ್ತೇನೆ,' ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com