
ನವದೆಹಲಿ: ಬೇಸಿಲ ಬೇಗೆಗೆ ರಾಷ್ಟ್ರರಾಜಧಾನಿ ದೆಹಲಿ ತತ್ತರಿಸಿ ಹೋಗಿದ್ದು, ಇದಕ್ಕೆ ಇಂಬು ನೀಡುವಂತೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದ್ದು, ದೆಹಲಿಯಲ್ಲಿ ತಾಪಮಾನ 44 ಡಿಗ್ರಿಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ.
ಬಿಸಿಗಾಳಿ ಮತ್ತು ಉಷ್ಣ ಅಲೆಯಿಂದಾಗಿ ದೆಹಲಿಯಲ್ಲಿ ದಿನೇ ದಿನೇ ತಾಪಮಾನ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಪ್ರಸ್ತುತ ದೆಹಲಿ ತಾಪಮಾನವು 28 ರಿಂದ 44 ಡಿಗ್ರಿ ಸೆಲ್ಸಿಯಸ್ ನಡುವೆ ಇರಬಹುದೆಂದು ತಿಳಿಸುವ ಮೂಲಕ ದೆಹಲಿಯಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ.
ಸದ್ಯದ ಪರಿಸ್ಥಿತಿ ಮುಂದಿನ ವಾರವೂ ಇರಲಿದೆ ಎಂದು ಐಎಂಡಿ ಹಿರಿಯ ವಿಜ್ಞಾನಿ ನರೇಶ್ ಕುಮಾರ್ ಹೇಳಿದ್ದು, ''ಸಾಮಾನ್ಯವಾಗಿ, ಮೇ ಅನ್ನು ಅತ್ಯಂತ ಬಿಸಿ ತಿಂಗಳು ಎಂದು ಪರಿಗಣಿಸಲಾಗುತ್ತದೆ. ಉತ್ತರ ಭಾರತದಲ್ಲಿ ಮಳೆಯ ಚಟುವಟಿಕೆ ಇಲ್ಲದಿದ್ದರೆ, ತಾಪಮಾನವು ಸಾಮಾನ್ಯವಾಗಿ 45 ಡಿಗ್ರಿ ಸೆಲ್ಸಿಯಸ್ ದಾಟುತ್ತದೆ. ಮುಂದಿನ ವಾರ ಇದೇ ಪರಿಸ್ಥಿತಿ ಇರುತ್ತದೆ ಎಂದು ಮುನ್ಸೂಚನೆ ನೀಡಲಾಗಿದೆ.
ಈ ಸನ್ನಿವೇಶವು ಮುಂದಿನ ತಿಂಗಳ 5 ರವರೆಗೂ ಮುಂದುವರಿಯುತ್ತದೆ. ಪ್ರಮುಖವಾಗಿ ರಾಜಸ್ಥಾನ, ಪಂಜಾಬ್ ಮತ್ತು ಹರಿಯಾಣದಲ್ಲಿ ಮುಂದಿನ 3-4 ದಿನಗಳ ಕಾಲ ಹೀಟ್‌ವೇವ್‌ನ ಪರಿಸ್ಥಿತಿ ಇರುತ್ತದೆ. ಇಲ್ಲಿ ನಾವು ಆರೆಂಜ್ ಅಲರ್ಟ್ ಅನ್ನು ನೀಡಿದ್ದೇವೆ ಎಂದು ಅವರು ಹೇಳಿದರು.
ಇಲ್ಲಿನ ಇಂಡಿಯಾ ಗೇಟ್‌ಗೆ ಭೇಟಿ ನೀಡಲು ಪಾಣಿಪತ್‌ಗೆ ಬಂದಿದ್ದ ಪ್ರವಾಸಿಗರಲ್ಲಿ ಒಬ್ಬರಾದ ಕವಿಂದರ್ ಬೇನಿವಾಲ್, ಬಿಸಿಲಿನ ತಾಪದಿಂದ ಮಕ್ಕಳು ಕಿರಿಕಿರಿಗೊಳ್ಳುತ್ತಿದ್ದಾರೆ ಎಂದು ಹೇಳಿದರು. "ಇಲ್ಲಿ ಪರಿಸ್ಥಿತಿ ಸಾಕಷ್ಟು ಕೆಟ್ಟದಾಗಿದೆ (ಅತಿಯಾದ ಶಾಖದಿಂದಾಗಿ). ನಾನು ನನ್ನ ಮಕ್ಕಳೊಂದಿಗೆ ಪ್ರವಾಸ ಮಾಡಲು ಇಲ್ಲಿಗೆ ಬಂದಿದ್ದೇನೆ. ಹೆಚ್ಚು ತಾಪಮಾನದಿಂದಾಗಿ ಮಕ್ಕಳೂ ಕಿರಿಕಿರಿಗೊಳ್ಳುತ್ತಿದ್ದಾರೆ. ನಾನು ಪಾಣಿಪತ್‌ನಿಂದ ಇಲ್ಲಿಗೆ ಬಂದಿದ್ದೇನೆ" ಎಂದು ಅವರು ಹೇಳಿದರು.
Advertisement