INDIA ಬಣದಿಂದ ದೇಶದ ಬಹುಸಂಖ್ಯಾತರನ್ನು 2ನೇ ದರ್ಜೆ ಪ್ರಜೆಗಳನ್ನಾಗಿ ಮಾಡಲು ಯತ್ನ- ಪ್ರಧಾನಿ ಮೋದಿ

ದೇಶದ ಬಹುಸಂಖ್ಯಾತ ಸಮುದಾಯವನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿ ಮಾಡಲು INDIA ಬಣದ ಪಕ್ಷಗಳು ಬಯಸಿವೆ. ಮೋದಿ,ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲು ಸಂವಿಧಾನವನ್ನು ಪುನರ್ ರಚಿಸಲು ಯೋಜಿಸಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಆರೋಪಿಸಿದ್ದಾರೆ.
ಪ್ರಧಾನಿ ಮೋದಿ
ಪ್ರಧಾನಿ ಮೋದಿ
Updated on

ಮೌ: ದೇಶದ ಬಹುಸಂಖ್ಯಾತ ಸಮುದಾಯವನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿ ಮಾಡಲು INDIA ಬಣದ ಪಕ್ಷಗಳು ಬಯಸಿವೆ. ಮೋದಿ,ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲು ಸಂವಿಧಾನವನ್ನು ಪುನರ್ ರಚಿಸಲು ಯೋಜಿಸಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಆರೋಪಿಸಿದ್ದಾರೆ.

ಉತ್ತರ ಪ್ರದೇಶದ ಪೂರ್ವಾಂಚಲ ವಲಯದ ಘೋಷಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, INDIA ಬಣದ ಪಕ್ಷಗಳು ಪರಿಶಿಷ್ಟ ಜಾತಿ, ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ನೀಡಿರುವ ಮೀಸಲಾತಿಯನ್ನು ರದ್ದು, ಅದನ್ನು ಮುಸ್ಲಿಂರಿಗೆ ನೀಡಲಿವೆ ಎಂದು ಅವರು ಹೇಳಿದರು.

ಪ್ರಧಾನಿ ಮೋದಿ
ಅಂಬೇಡ್ಕರ್ ಇಲ್ಲದಿರುತ್ತಿದ್ದರೆ SC-ST ಗಳಿಗೆ ಮೀಸಲಾತಿ ನೀಡಲು ನೆಹರೂ ಬಿಡುತ್ತಿರಲಿಲ್ಲ: ಪ್ರಧಾನಿ ಮೋದಿ

INDIA ಬಣದ ಅಂಗವಾಗಿರುವ ಸಮಾಜವಾದಿ ಮತ್ತು ಕಾಂಗ್ರೆಸ್ ಅನೇಕ ವರ್ಷಗಳಿಂದ ಪೂರ್ವಂಚಲವನ್ನು ನಿರ್ಲಕ್ಷಿಸಿವೆ. ಮಾಫಿಯಾ ವಲಯ, ಬಡತನ ಮತ್ತು ಅಸಹಾಯಕತೆಯ ಪ್ರದೇಶವನ್ನಾಗಿ ಪರಿವರ್ತಿಸಿವೆ. ಅವರು ವಿವಿಧ ಜಾತಿಗಳಲ್ಲಿ ತಮ್ಮೊಳಗೆ ಜಗಳವಾಡುತ್ತಿವೆ ಎಂದು ಮಾಡುತ್ತಿವೆ. ಇದರಿಂದಾಗಿ ಅವರು ದುರ್ಬಲರಾಗುತ್ತಾರೆ. ವಾಸ್ತವ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು" ಇದನ್ನು ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಪ್ರಧಾನಿ ಮೋದಿ
ಅಧಿಕಾರಕ್ಕೆ ಬಂದರೆ ಕಾಂಗ್ರೆಸ್‌ನಿಂದ ದೇಶದ ಸಂಪತ್ತು ಮುಸ್ಲಿಮರಿಗೆ ಮರು ಹಂಚಿಕೆ: ಪ್ರಧಾನಿ ಮೋದಿ ವಿರುದ್ಧ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು

INDIA ಬಣದ ದೊಡ್ಡ ಪಿತೂರಿ ಬಗ್ಗೆ ಜನರಿಗೆ ಎಚ್ಚರಿಸಲು ಇಂದು ಪೂರ್ವಾಂಚಲ ಮತ್ತು ಘೋಸಿಗೆ ಬಂದಿರುವುದಾಗಿ ಹೇಳಿದ ಮೋದಿ, ವಿಪಕ್ಷಗಳ ಬಣ ಮೂರು ದೊಡ್ಡ ಪಿತ್ತೂರಿ ರೂಪಿಸಿವೆ. ಮೊದಲನೇಯದಾಗಿ ಅವರು ಸಂವಿಧಾನವನ್ನು ಬದಲಾಯಿಸುತ್ತಾರೆ. ಅಲ್ಲದೇ, ದೇಶದಲ್ಲಿ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಬೇಕು ಎಂದು ಹೊಸದಾಗಿ ಬರೆಯುತ್ತಾರೆ. ಎರಡನೇಯದಾಗಿ SC, ST, OBC ಗಳಿಗೆ ನೀಡಿರುವ ಮೀಸಲಾತಿಯನ್ನು ರದ್ದುಗೊಳಿಸುತ್ತಾರೆ. ಮೂರನೇಯದಾಗಿ ಇಡೀ ಮೀಸಲಾತಿಯನ್ನು ಧರ್ಮದ ಆಧಾರದ ಮೇಲೆ ಮುಸ್ಲಿಂರಿಗೆ ನೀಡುತ್ತಾರೆ ಎಂದು ಮೋದಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com