
ಮುಂಬೈ: ಪುಣೆಯಲ್ಲಿ ಅಪ್ರಾಪ್ತ ವ್ಯಕ್ತಿಯಿಂದ ಪೋರ್ಷೆ ಕಾರು ಅಪಘಾತದ ಪ್ರಕರಣ ಮಾಸುವ ಮುನ್ನವೇ ಮುಂಬೈ ನಲ್ಲಿ ಇಂತಹದ್ದೇ ಅಪಾಯಕಾರಿ ಘಟನೆಯೊಂದು ವರದಿಯಾಗಿದೆ.
ಮುಂಬೈ ನ ಜನನಿಬಿಡ ಪ್ರದೇಶದಲ್ಲಿ 17 ವರ್ಷದ ಬಾಲಕನೋರ್ವ ಬಿಎಂಡಬ್ಲ್ಯು ಚಾಲನೆ ಮಾಡುತ್ತಿರುವ ವಿಡಿಯೋ ವೈರಲ್ ಆಗತೊಡಗಿದೆ. ಅಷ್ಟೇ ಅಲ್ಲದೇ ವ್ಯಕ್ತಿಯೋರ್ವ ಕಾರಿನ ಬಾನೆಟ್ ಮೇಲೆ ಕುಳಿತಿದ್ದಾರೆ.
ಕಾರು ಚಾಲನೆ ಮಾಡುತ್ತಿದ್ದ ವ್ಯಕ್ತಿಯ ತಂದೆ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ. ವೈರಲ್ ವಿಡಿಯೋದಲ್ಲಿ, ಮುಂಬೈನ ಕಲ್ಯಾಣ್‌ನ ಶಿವಾಜಿ ಚೌಕ್ ಪ್ರದೇಶದ ಜನನಿಬಿಡ ರಸ್ತೆಗಳಲ್ಲಿ ಹದಿಹರೆಯದವರು ಕಾರನ್ನು ಓಡಿಸುತ್ತಿದ್ದಾಗ ಸುಭಮ್ ಮತಾಲಿಯಾ ಎಂದು ಗುರುತಿಸಲಾದ ವ್ಯಕ್ತಿ ಬಿಎಂಡಬ್ಲ್ಯು ಬಾನೆಟ್ ಮೇಲೆ ಮಲಗಿರುವುದು ವರದಿಯಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.
Advertisement