
ನವದೆಹಲಿ: ನೀರು ಪೋಲು ಮಾಡಿದರೆ 2,000 ರೂ. ದಂಡ ವಿಧಿಸುವಂತೆ ದೆಹಲಿ ಜಲ ಮಂಡಳಿ(ಡಿಜೆಬಿ)ಗೆ ದೆಹಲಿ ಸರ್ಕಾರ ಬುಧವಾರ ನಿರ್ದೇಶನ ನೀಡಿದೆ.
ಯಮುನಾ ನದಿಯಿಂದ ದೆಹಲಿ ಪಾಲಿನ ನೀರನ್ನು ಹರಿಯಾಣ ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿದ ಜಲ ಸಚಿವೆ ಅತಿಶಿ ಸಿಂಗ್, ರಾಷ್ಟ್ರ ರಾಜಧಾನಿ ಎದುರಿಸುತ್ತಿರುವ ನೀರಿನ "ತೀವ್ರ ಕೊರತೆ" ಎದುರಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಕಾರುಗಳನ್ನು ತೊಳೆಯಲು ಕುಡಿಯುವ ನೀರು ಬಳಸಿದರೆ, ನೀರಿನ ಟ್ಯಾಂಕ್‌ಗಳನ್ನು ತುಂಬಿ ಹರಿಯಲು ಬಿಟ್ಟರೆ ಮತ್ತು ನಿರ್ಮಾಣ ಮತ್ತು ವಾಣಿಜ್ಯ ಉದ್ದೇಶಗಳಿಗಾಗಿ ಕುರಿಯುವ ನೀರನ್ನು ಬಳಸಿದರೆ ದಂಡನ್ನು ವಿಧಿಸಲಾಗುವುದು ಎಂದು ಅತಿಶಿ ತಿಳಿಸಿದ್ದಾರೆ.
ನೀರು ವ್ಯರ್ಥವಾಗುವುದನ್ನು ತಡೆಯುವ ಕ್ರಮಗಳನ್ನು ಜಾರಿಗೆ ತರಲು ನಗರದಾದ್ಯಂತ 200 ತಂಡಗಳನ್ನು ತಕ್ಷಣವೇ ನಿಯೋಜಿಸುವಂತೆ ಸಚಿವರು ದೆಹಲಿ ಜಲ ಮಂಡಳಿ(ಡಿಜೆಬಿ) ಸಿಇಒಗೆ ಸೂಚಿಸಿದ್ದಾರೆ.
ಗುರುವಾರ ಬೆಳಗ್ಗೆ 8 ಗಂಟೆಯಿಂದ ಈ ತಂಡಗಳನ್ನು ನಿಯೋಜಿಸಲಾಗುತ್ತಿದು, ಅವರು ನೀರು ಪೋಲು ಮಾಡಿದರೆ ದಂಡ ವಿಧಿಸಲಿದ್ದಾರೆ.
Advertisement