Wealth Redistribution: ''ಸಂಪತ್ತಿನ ಮರುಹಂಚಿಕೆಗೆ ಈ ಪ್ರಾಯೋಗಿಕ ವಿಧಾನದ ಅನುಷ್ಠಾನ ಅತ್ಯಗತ್ಯ''
ಬೆಂಗಳೂರು: ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ಅವರು ಪ್ರಸ್ತಾಪಿಸಿದ್ದ ಸಂಪತ್ತಿನ ಮರುಹಂಚಿಕೆ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಸಂಪತ್ತಿನ ಮರುಹಂಚಿಕೆಗೆ ಈ ಪ್ರಾಯೋಗಿಕ ವಿಧಾನದ ಅನುಷ್ಠಾನ ಅತ್ಯಗತ್ಯ ಹೆಲ್ತ್‌ಕೇರ್ ಗ್ಲೋಬಲ್ ಎಂಟರ್‌ಪ್ರೈಸಸ್ ಲಿಮಿಟೆಡ್ ನ ಡಾ. ಬಿ ಎಸ್ ಅಜಯಕುಮಾರ್ ಹೇಳಿದ್ದಾರೆ.
ಚುನಾವಣೆಯ ಹೊಸ್ತಿಲಿನಲ್ಲಿರುವ ರಾಜಕೀಯ ಪಕ್ಷಗಳು ಇದರ ಗಲಾಟೆಯ ನಡುವೆ ಪಿತ್ರಾರ್ಜಿತ ತೆರಿಗೆಯ ಮೇಲಿನ ಬಿರುಸಿನ ಚರ್ಚೆಗಳು ನಡೆಯುತ್ತಿದ್ದು, ಇದೇ ವಿಚಾರವಾಗಿ ಮಾತನಾಡಿರುವ ಡಾ. ಬಿ ಎಸ್ ಅಜಯಕುಮಾರ್ ಅವರು, ''ಇಷ್ಟವಿರಲಿ ಇಲ್ಲದಿರಲಿ, ಹೆಚ್ಚಿನ ಜನರಿಗೆ ಜೀವನದಲ್ಲಿ ಕಷ್ಟಪಟ್ಟು ಕೆಲಸ ಮಾಡಲು ದೊಡ್ಡ ಪ್ರೇರಕವೆಂದರೆ ಹಣ ಉಳಿತಾಯದ ಆಮಿಷ ಹಾಗೂ ತಮ್ಮ ಮುಂದಿನ ಪೀಳಿಗೆಗೆ ಆಸ್ತಿ ಮಾಡಬೇಕಾದ ಜರೂರು. ಅಂತೆಯೇ, ಹೆಚ್ಚಿನ ಜನರು ಕಷ್ಟಪಟ್ಟು ದುಡಿದು, ಹಣ ಸಂಪಾದಿಸಿ, ತಮಗೆ ಹಾಗೂ ತಮ್ಮ ಕುಟುಂಬಕ್ಕಾಗಿ ಸಂಪತ್ತನ್ನು ಕ್ರೂಢಿಕರಿಸುತ್ತಾರೆ.
ಹಿಂದಿನ ಕಾಲದ ಚರ್ಕವರ್ತಿಗಳಾಗಲಿ ಅಥವಾ ಈಗಿನ ಕಾಲದ ಕಾರ್ಪೋರೇಟ್ ಉದ್ಯಮಿಗಳಾಗಿ ತಮ್ಮ ಸಂಪತ್ತಿನ ಹಂಚಿಕೆ ವಿಚಾರದಲ್ಲಿ ಹೆಚ್ಚು ಚಿಂತಿಸದೆ ತಮ್ಮ ಸಂಪೂರ್ಣ ಆಸ್ತಿ ಹಾಗೂ ಅಧಿಕಾರವನ್ನು ತಮ್ಮ ಮುಂದಿನ ಪೀಳಿಗೆಗೆ ಅವರು ಯೋಗ್ಯರೋ ಇಲ್ಲವೋ ಎಂಬುದನ್ನು ಲೆಕ್ಕಿಸದೆ ಅದರ ಹಂಚಿಕೆ ಮಾಡಿಬಿಡುತ್ತಾರೆ. ಇದು ಅರ್ಥಪೂರ್ಣವೂ ಹೌದು. ಇದೇ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಮುಂದೆಯೂ ನಡೆದುಕೊಂಡು ಹೋಗುತ್ತಿದೆ ಎಂದರು.
ಅಂತೆಯೇ ''ನಮ್ಮ ದೇಶದಲ್ಲಿ ಬಡವರ ಪರವಾಗಿ ಸಾಕಷ್ಟು ಯೋಜನೆ ಹಾಗೂ ಕಾರ್ಯಕ್ರಮಗಳು ಚಾಲ್ತಿಯಲ್ಲಿವೆ, ಆದರೆ ಆ ಕಾರ್ಯಕ್ರಮಗಳು ಅವರಿಗೆ ತಲುಪುತ್ತಿದೆಯೇ ಅಥವಾ ಅದಕ್ಕೆ ಸೂಕ್ತ ಹಣಕಾಸಿನ ವ್ಯವಸ್ಥೆ ಆಗುತ್ತಿದೆಯೇ ಎಂಬುದರ ಬಗ್ಗೆ ಯಾರೂ ಪ್ರಶ್ನಿಸುತ್ತಿಲ್ಲ. ಇದರಿಂದ ಸಾಕಷ್ಟು ಕಾರ್ಯಕ್ರಮಗಳು ಅನುಷ್ಠಾನವಾಗದೇ ಕೇವಲ ಕಾಗದದ ಮೇಲಿನ ಕಾರ್ಯಕ್ರಮಗಳಾಗಿ ಉಳಿದು ಬಿಡುತ್ತವೆ. ಈ ಬಗ್ಗೆ ಚರ್ಚೆಗಳು ಸಹ ಹೆಚ್ಚು ಮುನ್ನೆಲೆಗೆ ಬರುವುದಿಲ್ಲ. ಬಡವರ ಏಳ್ಗೆಗಾಗಿ ಇರುವ ಕಾರ್ಯಕ್ರಮಗಳು ಅಥವಾ ಯೋಜನೆಗಳು ಜಾರಿಯಾದ ಬಳಿಕ ಆ ಕಾರ್ಯಕ್ರಮಗಳು ಎಷ್ಟರ ಮಟ್ಟಿಗೆ ಬಡವರಿಗೆ ತಲುಪುತ್ತಿವೆ ಎಂಬುದನ್ನು ಮೇಲ್ವಿಚಾರಣೆ ಮಾಡಲು ಯಾವುದೇ ನೀತಿ-ನಿಯಮಗಳಿಲ್ಲ.
ಅಷ್ಟೇ ಏಕೆ, ಆ ಕಾರ್ಯಕ್ರಮದ ಬಗ್ಗೆ ಜನಸಾಮಾನ್ಯರು ತಿಳಿದುಕೊಳ್ಳಲು ಅದನ್ನು ಸಾರ್ವತ್ರಿಕಗೊಳಿಸುವ ಕೆಲವನ್ನೂ ಸಹ ಯಾರೂ ಮಾಡುವುದಿಲ್ಲ. ಇದರಿಂದ ಬಡವರಿಗಾಗಿ ಮೀಸಲಿಟ್ಟ ಯೋಜನೆಯ ಹಣಕಾಸು ಇತರೆ ಯೋಜನೆಗಳಿಗೆ ಅನಧಿಕೃತವಾಗಿಯೇ ಖರ್ಚಾಗಿ ಬಿಡುತ್ತದೆ. ಜೊತೆಗೆ, ಈ ಹಣ ರಕ್ಷಣಾ ಉನ್ನತೀಕರಣದಂತಹ ಸಿಎಸ್‌ಆರ್ ಅಲ್ಲದ ಉದ್ದೇಶಗಳಿಗೂ ಸಹ ಹಂಚಿಕೆಯಾಗಿಬಿಡುತ್ತದೆ. ಯುಟೋಪಿಯನ್ ನಂಬಿಕೆ ಹೊಂದಿರುವ ಈ ಸಾಮಾಜಿಕ ಸಮಾನತೆ ಹಾಗೂ ಇದರ ಅನಿಷ್ಠಾನ ಅಪ್ರಾಯೋಗಿಕ ಸಿದ್ದಾಂತಗಳ ನಿದರ್ಶನಗಳಿಂದಲೇ ನಮ್ಮ ಇತಿಹಾಸ ತುಂಬಿಹೋಗಿದೆ.''
ಮಹಾತ್ಮ ಗಾಂಧೀಜಿ ಅವರ ಸಾಮಾಜಿಕ ಸಂಪತ್ತು ನಿರ್ಮಿಸುವ ಅವರ ಕರೆ ಈಗಲೂ ಹಾಗೇ ಇದೆ, ಅದರ ಅನುಷ್ಠಾನ ಸಾಧ್ಯವಾಗಿಲ್ಲ. ಸ್ವಾತಂತ್ರ್ಯದ ನಂತರ ಈ ಸಮಾಜ ಸಮಾನವಾಗಿ ಬೆಳೆಯುವ ಬದಲು ಕೆಲವರಷ್ಟೇ ಶ್ರೀಮಂತರಾಗದರು, ಈಗಲೂ ಸಹ ಶ್ರೀಮಂತರಷ್ಟೇ ಮತ್ತಷ್ಟು ಶ್ರೀಮಂತರಾಗುತ್ತಿದಾರೆಯೇ ವಿನಃ ಬಡವರು ಬಡವರಾಗಿಯೇ ಉಳಿದುಕೊಳ್ಳುತ್ತಿದ್ದಾರೆ. ಈ ಸಂಪೂರ್ಣ ವ್ಯವಸ್ಥೆ ಬದಲಾಗಬೇಕಿದೆ. ಸಂಪೂರ್ಣ ಬದಲಾಗದಿದ್ದರೂ ಒಂದಷ್ಟು ವ್ಯವಸ್ಥೆಗಳಲ್ಲಿ ಕೊಂಚ ಬದಲಾವಣೆ ತಂದರೂ ದೇಶದ ಏಳಿಗೆ ಹಾಗೂ ಬಡವರ ಏಳಿಗೆ ಎರಡೂ ಆಗಲಿದೆ. ಇದಕ್ಕೆ ನಮ್ಮ ಸರ್ಕಾರ ಹೆಚ್ಚು ವಿವೇಕದಿಂದ ಕೆಲಸ ಮಾಡಬೇಕಿದೆ ಎಂದರು.
ಪ್ರಾಯೋಗಿಕ ವಿಧಾನ
ಸರ್ಕಾರ ಹೊಸದಾಗಿ ಯೋಜನೆ ತರುವುದು ಅಥವಾ ಅದಕ್ಕಾಗಿ ಹಣಕಾಸು ಮೀಸಲಿಡುವುದು ಸಾಮಾನ್ಯ. ಇದರ ಜೊತೆಗೆ, ಈಗಿರುವ ಶ್ರೀಮಂತರ ಪಟ್ಟಿ ಮಾಡಿ, ಅದರಿಂದಲೂ ದೇಣಿಗೆ ಪಡೆಯುವ ಕೆಲಸವನ್ನು ಪ್ರಾರಂಭಿಸಬೇಕು. ದೇಶದ ಲೋಕೋಪಕಾರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಿ ಎಂದು ಶ್ರೀಮಂತ ವರ್ಗವನ್ನು ಪ್ರೇರೇಪಿಸಬೇಕು.ಇದಕ್ಕೆ ಸರ್ಕಾರ ಸೂಕ್ತ ನೀತಿ ನಿಯಮವನ್ನೂ ಸಹ ಜಾರಿಗೊಳಿಸಬೇಕು. ಈ ಸಂಬಂಧ ವಿವೇಕಯುತ ನೀತಿಯನ್ನು ರೂಪಿಸುವ ಉತ್ತಮ ಆಯ್ಕೆ ಸರ್ಕಾರದ ಕೈಲಿದೆ.
ಈ ಮೂಲಕ ನಿರ್ದಿಷ್ಟ ಶೇಕಡಾವಾರು ಸಂಪತ್ತನ್ನು (ಶ್ರೀಮಂತರು ಮತ್ತು ಅತಿ ಶ್ರೀಮಂತರು) ದಾನಿಗಳ ಆಯ್ಕೆಯ ಸಾಮಾಜಿಕ ಅಭಿವೃದ್ಧಿ ಉಪಕ್ರಮಗಳಿಗೆ ದಾನ ಮಾಡಲು ಕಡ್ಡಾಯಗೊಳಿಸಬಹುದು. ಈ ಶೇಕಡಾವಾರು ಅನ್ವಯಕ್ಕೆ ಮಿತಿಯನ್ನು ನಿಗದಿಪಡಿಸಬಹುದು, ಇದು ವಿಭಿನ್ನ ಬ್ಯಾಂಡ್‌ಗಳಿಗೆ ಅನುಗುಣವಾಗಿ ಬದಲಾಯಿಸಬಹುದು, ಪ್ರಸ್ತುತ ಹೆಚ್ಚು ಆದಾಯ ಹೊಂದಿರುವವರಿಗೆ ನಿಗಧಿ ಮಾಡಿರುವ ತೆರಿಗೆ ಸ್ಲ್ಯಾಬ್ ರೀತಿಯಲ್ಲೇ ಶ್ರೀಮಂತರಿಗೂ ಸ್ಲ್ಯಾಬ್ ನಿರ್ಧರಿಸಬಹುದು.
ಇದನ್ನು ಸರ್ಕಾರ ಪಡೆಯುವ ಬದಲು ಶ್ರೀಮಂತ ವರ್ಗಕ್ಕೆ ಸಾಮಾಜಿಕ ಕಾರ್ಯಗಳ ಜವಾಬ್ದಾರಿಯನ್ನು ನೀಡಬಹುದು. ಉದಾಹರಣೆಗೆ, ಮಹಿಳಾ ಸಬಲೀಕರಣ, ಗ್ರಾಮೀಣ ಪ್ರದೇಶಗಳಲ್ಲಿ ಮೌಲ್ಯವರ್ಧಿತ ಶಿಕ್ಷಣ, ಆರ್ಥಿಕ ಸಬಲೀಕರಣ, ಬಡತನ ನಿರ್ಮೂಲನೆ, ಆರೋಗ್ಯ ಉದ್ಯೋಗ ಮತ್ತು ಉದ್ಯಮಶೀಲತೆ ಉತ್ಪಾದನೆ, ಪ್ರಾಥಮಿಕ ಆರೋಗ್ಯ ಉನ್ನತೀಕರಣ ಹೀಗೆ ಮುಂತಾದ ಕ್ಷೇತ್ರದಲ್ಲಿ ವ್ಯಹಿಸಲು ಸ್ವಾಯತ್ತ ಸಂಸ್ಥೆಗಳನ್ನು ನಿರ್ಮಾಣ ಮಾಡಬಹುದು.
ಉದ್ದೇಶದ ಆಯ್ಕೆಯು ದಾನಿಗಳ ಪರಮಾಧಿಕಾರವಾಗಿದೆ ಮತ್ತು ಭಾರತದ ಅಂತರ್ಗತ ಬೆಳವಣಿಗೆಯ ಪ್ರಯತ್ನದಲ್ಲಿ ಭಾಗವಹಿಸುವಿಕೆಯು ಸರಿಯಾಗಿ ಗುರುತಿಸಲ್ಪಡುತ್ತದೆ ಮತ್ತು ಗೌರವಾನ್ವಿತ ದೇಣಿಗೆಗಳ ಹೊರೆಯನ್ನು ತೆಗೆದುಹಾಕುತ್ತದೆ, ಇದು ಹೆಚ್ಚಿನ ಶ್ರೀಮಂತ ವ್ಯಕ್ತಿಗಳನ್ನು ದೇಶದ ದೊಡ್ಡ ಉದ್ದೇಶಕ್ಕಾಗಿ ದೇಣಿಗೆ ನೀಡಲು ಹಿಂಜರಿಯುವುದನ್ನು ತಡೆಯುತ್ತದೆ. ಮುಖ್ಯವಾಗಿ, ಸ್ವಾಯತ್ತ ಸಂಸ್ಥೆಯು ನಿಧಿಯ ಬಳಕೆ ಮತ್ತು ಯೋಜನೆಯ ಫಲಿತಾಂಶಗಳ ಕುರಿತು ಆವರ್ತಕ ವರದಿಗಳೊಂದಿಗೆ ನೀಡಿದ ದೇಣಿಗೆಗಳ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಬಹುದು. ಈ ಪಾರದರ್ಶಕತೆಯು ದಾನಿಗಳಲ್ಲಿಯೂ ನೆಮ್ಮದಿ ಹಾಗೂ ಸಂತೃಪ್ತ ಭಾವ ಮೂಡಿಸಿ, ತಮ್ಮ ಸಾಮಾಜಿಕ ಕಾಳಜಿಯನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಗಲಿದೆ ಎಂದಿದ್ದಾರೆ.
ಅಂತರ್ಗತ ಬೆಳವಣಿಗೆಯು ಭಾರತಕ್ಕೆ ಪ್ರಮುಖ ಆದ್ಯತೆಯಾಗಿದೆ, ಆದರೆ ಬಡವರಿಗೆ ಸಮಾನ ಅವಕಾಶಗಳು ಶ್ರೀಮಂತ ವರ್ಗಗಳಿಂದ ಸಂಪತ್ತು ಸೃಷ್ಟಿಕರ್ತರಿಗೆ ದಂಡ ವಿಧಿಸುವ ವೆಚ್ಚದಲ್ಲಿ ಬರಬಾರದು. ಬದಲಿಗೆ ನಮ್ಮ ಗಮನವು ವಂಚಿತ ವಿಭಾಗಗಳಿಂದ ಸಾಧ್ಯವಾದಷ್ಟು ಹೆಚ್ಚಿನ ಸಂಪತ್ತು ಸೃಷ್ಟಿಕರ್ತರಿಗೆ ಅನುಕೂಲಕರ ವಾತಾವರಣವನ್ನು ಪೋಷಿಸಬೇಕು. ಈ ರೀತಿಯಾಗಿ, ಪ್ರಾಯೋಗಿಕ ನಂಬಿಕೆಗಳಲ್ಲಿ ಬೇರೂರಿರುವ ಸಾಮಾಜಿಕ ಸಮಾನತೆ ಮತ್ತು ಸಮಾನತೆಯನ್ನು ಸಾಂಸ್ಥಿಕಗೊಳಿಸಲು ನಾವು ದಾರಿ ಮಾಡಿಕೊಡಬಹುದು ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ