Rented Girlfriend: ಬಾಡಿಗೆ ಗರ್ಲ್ ಫ್ರೆಂಡ್ ಬೇಕಾ?.. ಹುಡುಗರ ನಿದ್ದೆಗೆಡಿಸಿದ ಯುವತಿಯ ''ರೇಟ್ ಕಾರ್ಡ್''!

ವಿದೇಶಗಳಲ್ಲಿ ಚಾಲ್ತಿಯಲ್ಲಿರುವ ಬಾಡಿಗೆ ''ಗರ್ಲ್ ಫ್ರೆಂಡ್'' ಅಥವಾ ಬಾಡಿಗೆ ಬಾಯ್ ಫ್ರೆಂಡ್ ಸಂಸ್ಕೃತಿ ಇದೀಗ ಭಾರತಕ್ಕೂ ಕಾಲಿಟ್ಟಿದ್ದು, ಹಣ ಕೊಟ್ಟರೆ ಡೇಟಿಂಗ್ ಗೆ ಬರುತ್ತೇನೆ ಎಂಬ ಯುವತಿಯೊಬ್ಬಳ ಪೋಸ್ಟ್ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
Rented Girlfriend
ಬಾಡಿಗೆ ಗರ್ಲ್ ಫ್ರೆಂಡ್ (ಸಾಂದರ್ಭಿಕ ಚಿತ್ರ)
Updated on

ನವದೆಹಲಿ: ವಿದೇಶಗಳಲ್ಲಿ ಚಾಲ್ತಿಯಲ್ಲಿರುವ ಬಾಡಿಗೆ ''ಗರ್ಲ್ ಫ್ರೆಂಡ್'' ಅಥವಾ ಬಾಡಿಗೆ ಬಾಯ್ ಫ್ರೆಂಡ್ ಸಂಸ್ಕೃತಿ ಇದೀಗ ಭಾರತಕ್ಕೂ ಕಾಲಿಟ್ಟಿದ್ದು, ಹಣ ಕೊಟ್ಟರೆ ಡೇಟಿಂಗ್ ಗೆ ಬರುತ್ತೇನೆ ಎಂಬ ಯುವತಿಯೊಬ್ಬಳ ಪೋಸ್ಟ್ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.

ಹೌದು.. ಹಣ ಕೊಟ್ಟರೆ ಗೆಳತಿ ಮತ್ತು ಗೆಳೆಯನನ್ನು ಬಾಡಿಗೆಗೆ ತೆಗೆದುಕೊಳ್ಳುವ ವಿಧಾನ ಭಾರತಕ್ಕೂ ಕಾಲಿಟ್ಟಿದ್ದು, ಹಣ ಕೊಟ್ಟರೆ ಡೇಟಿಂಗ್ ಗೆ ಬರುತ್ತೇನೆ ಯುವತಿಯೊಬ್ಬಳು ಯುವಕರನ್ನು ಆಹ್ವಾನಿಸಿದ್ದಾಳೆ. ಮಾತ್ರವಲ್ಲದೇ ದಿನಕ್ಕೆ ಇಷ್ಟು ಹಣ ಕೊಟ್ಟರೆ, ನಿಮ್ಮೊಂದಿಗೆ ಡೇಟ್‌ ಮಾಡಲು ಬರುತ್ತೇನೆ ಎಂದು ಯುವತಿ ರೇಟ್ ಕಾರ್ಡ್ ಕೂಡ ಪೋಸ್ಟ್ ಮಾಡಿದ್ದಾಳೆ. ಯುವತಿಯ ಈ ಇದೀಗ ಎಲ್ಲೆಡೆ ವೈರಲ್‌ ಆಗಿದ್ದು, ಭಾರಿ ಚರ್ಚೆಯಾಗುತ್ತಿದೆ.

Rented Girlfriend
ಮಾಧ್ಯಮ ಮಾಲೀಕ ಮೊಗಲ್ ರೂಪರ್ಟ್ ಮುರ್ಡೋಕ್ 92ನೇ ವಯಸ್ಸಿನಲ್ಲಿ 5ನೇ ಮದುವೆ; ಗರ್ಲ್ ಫ್ರೆಂಡ್ ಎಲೆನಾ ಝುಕೋವಾಗೆ 67 ವರ್ಷ!

divya_giri__ ಎಂಬ ಇನ್‌ಸ್ಟಾಗ್ರಾಂ ಖಾತೆಯಿಂದ ಪೋಸ್ಟ್‌ ಮಾಡಿರುವ ಯುವತಿ, 'ನೀವು ಸಿಂಗಲ್‌ ಆಗಿ ಬೇಜಾರಾಗಿದ್ದೀರಾ? ನಾನು ನಿಮ್ಮೊಂದಿಗೆ ಡೇಟ್‌ ಮಾಡಲು ರೆಡಿ. ಆದರೆ, ದಿನಕ್ಕೆ 5 ಸಾವಿರ ರೂಪಾಯಿ ಕೊಡಬೇಕು ಎಂದು ಬರೆದುಕೊಂಡಿದ್ದಾಳೆ. ಅಷ್ಟು ಮಾತ್ರವಲ್ಲದೇ ಡೇಟಿಂಗ್ ವೇಳೆ ನೀಡುವ ಪ್ರತೀ ''ಸೇವೆ'' (Service)ಗೂ ಇಂತಿಷ್ಟು ಹಣ ಎಂದು ರೇಟ್ ಕಾರ್ಡ್ ಅನ್ನು ಕೂಡ ನೀಡಿದ್ದಾಳೆ.

ಕಾಫಿ ಡೇಟ್‌ಗೆ 1500ರೂ, ಮಾಮೂಲಿ ಡೇಟ್‌ಗೆ 2000 ರೂ., ಸಿನಿಮಾಗೆ ಹೋಗುವುದಕ್ಕೆ 2000, ಡಿನ್ನರ್‌ಗೆ 2000, ಫ್ಯಾಮಿಲಿ ಮೀಟಿಂಗ್‌ಗೆ 3000, ಯಾವುದಾದರೂ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಲು 3500 ರೂ. ಮತ್ತು ಬೈಕ್‌ ಡೇಟ್‌ಗೆ 4 ಸಾವಿರ ರೂ. ಕೊಡಬೇಕಂತೆ.

ಇದಿಷ್ಟೇ ಅಲ್ಲ, ಸಾಮಾಜಿಕ ಜಾಲತಾಣದಲ್ಲಿ ಡೇಟಿಂಗ್‌ ಫೋಟೋ ಪೋಸ್ಟ್‌ ಮಾಡಲು 6 ಸಾವಿರ ರೂಪಾಯಿ ಕೊಡಬೇಕು. ಇಡೀ ದಿನ ಒಟ್ಟಿಗೆ ಇರಬೇಕಾದರೆ 5 ಸಾವಿರ ರೂ., ಮನೆಯಲ್ಲಿ ಒಟ್ಟಿಗೆ ಅಡುಗೆ ಮಾಡಿ ತಿನ್ನಲು 3500 ರೂ. ಅವಳೊಂದಿಗೆ ಶಾಪಿಂಗ್‌ ಮಾಡಲು 4500 ರೂ. ಹಾಗೂ ಎರಡು ದಿನಗಳ ಕಾಲ ಒಟ್ಟಿಗೆ ಪ್ರವಾಸಕ್ಕೆ ಹೋಗಬೇಕಾದರೆ 10 ಸಾವಿರ ರೂ. ಪಾವತಿಸಬೇಕು ಎಂದು ರೇಟ್ ಕಾರ್ಡ್ ನಲ್ಲಿ ನಮೂದಿಸಿದ್ದಾಳೆ.

Rented Girlfriend
ಬಾಡಿಗೆ 'ಗರ್ಲ್ ಫ್ರೆಂಡ್''

ಯುವತಿಯ ಪೋಸ್ಟ್ ನೋಡಿದ ನೆಟ್ಟಿಗರು ಒಂದು ಕ್ಷಣ ಶಾಕ್‌ ಆಗಿದ್ದು, ಯುವತಿಯ ಈ ಪೋಸ್ಟ್ ಗೆ 16 ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿದೆ.

ಇಷ್ಟಕ್ಕೂ ಯಾರು ಈ ಯುವತಿ

ಈ ಯುವತಿ ದಕ್ಷಿಣ ದೆಹಲಿ ಮೂಲದವಳು ಎಂದು ಹೇಳಿಕೊಂಡಿದ್ದು, ತಾನು ಕಟ್ಟುನಿಟ್ಟಾದ ಸಸ್ಯಾಹಾರಿ ಎಂದು ಬರೆದುಕೊಂಡಿದ್ದಾಳೆ. ಇನ್ಸ್‌ಸ್ಟಾಗ್ರಾಂನಲ್ಲಿ ಆಕೆಯ ಖಾತೆಯನ್ನು divya_giri__ ಎಂದು ಗುರುತಿಸಲಾಗಿದೆ. ಈ ಯುವತಿ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ 12 ಸಾವಿರಕ್ಕೂ ಹೆಚ್ಚು ಫಾಲೋವರ್ಸ್‌ ಹೊಂದಿದ್ದಾಳೆ. ಈ ಪೋಸ್ಟ್ ಗೂ ಮುನ್ನ ಈ ಯುವತಿಯ ಫಾಲೋವರ್ಸ್‌ ಗಳ ಸಂಖ್ಯೆ 11 ಸಾವಿರವಿತ್ತು. ಆದರೆ ಈ ಪೋಸ್ಟ್ ಬಳಿಕ ಹೆಚ್ಚುವರಿ ಬರೊಬ್ಬರಿ 1 ಸಾವಿರ ಮಂದಿ ಆಕೆಯನ್ನು ಫಾಲೋ ಮಾಡತೊಡಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com