ಕೆನಡಾ: ಕೆನಡಾದ ಸರ್ಕಾರ ಮೊದಲ ಬಾರಿಗೆ, ದೇಶದ ಸೈಬರ್ ಸೆಕ್ಯುರಿಟಿ ಸೆಂಟರ್ ಪ್ರಕಟಿಸಿದ ತನ್ನ ರಾಷ್ಟ್ರೀಯ ಸೈಬರ್ ಅಪಾಯ ಮೌಲ್ಯಮಾಪನ ವರದಿ 2025-2026 ರಲ್ಲಿ ಭಾರತವನ್ನು "ವಿರೋಧಿ" ಅಥವಾ ಎದುರಾಳಿ ಎಂದು ಲೇಬಲ್ ಮಾಡಿದೆ.
ಕೆನಡಾದೊಳಗಿನ ಸಿಖ್ ಪ್ರತ್ಯೇಕತಾವಾದಿಗಳನ್ನು ಗುರಿಯಾಗಿಸುವ ಚಟುವಟಿಕೆಗಳಲ್ಲಿ ಭಾರತದ ಪಾಲ್ಗೊಳ್ಳುವಿಕೆಯ ಬಗ್ಗೆ ಕೆನಡಾ ಪದೇ ಪದೇ ಆರೋಪ ಮಾಡಿದ್ದರ ಪರಿಣಾಮ ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳು ಹದಗೆಟ್ಟಿರುವ ಸಮಯದಲ್ಲಿ ಈ ವರದಿ ಪ್ರಕರಟವಾಗಿರುವುದು ಮಹತ್ವ ಪಡೆದುಕೊಂಡಿದೆ. ಭಾರತ ಕೆನಡಾದ ಆರೋಪಗಳನ್ನು ತಿರಸ್ಕರಿಸಿದ್ದು, ಅವುಗಳನ್ನು "ಅಸಂಬದ್ಧ" ಎಂದು ಹೇಳಿದೆ.
ಈ ವಾರದ ಆರಂಭದಲ್ಲಿ ಬಿಡುಗಡೆಯಾದ ವರದಿಯಲ್ಲಿ, 'ಸರ್ಕಾರದ ವಿರೋಧಿಗಳಿಂದ ಸೈಬರ್ ಬೆದರಿಕೆ' ವಿಭಾಗದ ಅಡಿಯಲ್ಲಿ, ಭಾರತವನ್ನು ಚೀನಾ, ರಷ್ಯಾ, ಇರಾನ್ ಮತ್ತು ಉತ್ತರ ಕೊರಿಯಾದೊಂದಿಗೆ ಪಟ್ಟಿ ಮಾಡಲಾಗಿದೆ.
"ಭಾರತೀಯ ಸರ್ಕಾರಿ ಪ್ರಾಯೋಜಿತ ಸೈಬರ್ ಬೆದರಿಕೆಯಲ್ಲಿ ತೊಡಗಿರುವವರು ಬೇಹುಗಾರಿಕೆಯ ಉದ್ದೇಶಕ್ಕಾಗಿ ಕೆನಡಾ ಸರ್ಕಾರದ ನೆಟ್‌ವರ್ಕ್‌ಗಳ ವಿರುದ್ಧ ಸೈಬರ್ ಬೆದರಿಕೆ ಚಟುವಟಿಕೆಯನ್ನು ನಡೆಸುವ ಸಾಧ್ಯತೆಯಿದೆ. ಕೆನಡಾ ಮತ್ತು ಭಾರತದ ನಡುವಿನ ಅಧಿಕೃತ ದ್ವಿಪಕ್ಷೀಯ ಸಂಬಂಧಗಳು ಕೆನಡಾ ವಿರುದ್ಧ ಭಾರತೀಯ ರಾಜ್ಯ ಪ್ರಾಯೋಜಿತ ಸೈಬರ್ ಬೆದರಿಕೆ ಚಟುವಟಿಕೆಯನ್ನು ಹೆಚ್ಚಿಸುತ್ತವೆ ಎಂದು ನಾವು ನಿರ್ಣಯಿಸುತ್ತೇವೆ ಎಂದು ವರದಿಯಲ್ಲಿ ತಿಳಿಸಿದೆ.
"ಭಾರತದ ನಾಯಕತ್ವ ದೇಶೀಯ ಸೈಬರ್ ಸಾಮರ್ಥ್ಯಗಳೊಂದಿಗೆ ಆಧುನೀಕರಿಸಿದ ಸೈಬರ್ ಪ್ರೋಗ್ರಾಂ ನ್ನು ನಿರ್ಮಿಸಲು ಬಹುತೇಕ ಖಚಿತವಾಗಿ ಬಯಸುತ್ತದೆ. ಭಾರತ ತನ್ನ ರಾಷ್ಟ್ರೀಯ ಭದ್ರತಾ ಅಗತ್ಯತೆಗಳನ್ನು ಮುನ್ನಡೆಸಲು ತನ್ನ ಸೈಬರ್ ಪ್ರೋಗ್ರಾಂ ನ್ನು ಬಳಸುತ್ತದೆ, ಈ ಮೂಲಕ ಬೇಹುಗಾರಿಕೆ, ಭಯೋತ್ಪಾದನೆ ನಿಗ್ರಹ, ಮತ್ತು ಅದರ ಜಾಗತಿಕ ಸ್ಥಾನಮಾನವನ್ನು ಉತ್ತೇಜಿಸಲು ಮತ್ತು ಭಾರತದ ವಿರುದ್ಧ ನಿರೂಪಣೆಗಳನ್ನು ಎದುರಿಸಲು ಪ್ರಯತ್ನಿಸುತ್ತದೆ. ಮತ್ತು ಭಾರತದ ಸೈಬರ್ ಕಾರ್ಯಕ್ರಮ ಅದರ ಕಾರ್ಯಾಚರಣೆಯನ್ನು ಹೆಚ್ಚಿಸಲು ವಾಣಿಜ್ಯ ಸೈಬರ್ ಮಾರಾಟಗಾರರನ್ನು ನಿಯಂತ್ರಿಸುತ್ತದೆ ಎಂದು ನಾವು ನಿರ್ಣಯಿಸುತ್ತೇವೆ ಎಂದು ರಾಷ್ಟ್ರೀಯ ಸೈಬರ್ ಅಪಾಯ ಮೌಲ್ಯಮಾಪನ ವರದಿ ಹೇಳಿದೆ.
"ನಾವು ಭಾರತವನ್ನು ಉದಯೋನ್ಮುಖ ಸೈಬರ್ ಬೆದರಿಕೆಯಾಗಿ ನೋಡುತ್ತಿದ್ದೇವೆ ಎಂಬುದು ಸ್ಪಷ್ಟವಾಗಿದೆ. ಎಂದು ಇತ್ತೀಚಿನ ಪತ್ರಿಕಾಗೋಷ್ಠಿಯಲ್ಲಿ, ಕೆನಡಾದ ಸಂವಹನ ಭದ್ರತಾ ಸ್ಥಾಪನೆಯ ಮುಖ್ಯಸ್ಥ ಕ್ಯಾರೊಲಿನ್ ಕ್ಸೇವಿಯರ್ ಹೇಳಿದ್ದರು.
ಏತನ್ಮಧ್ಯೆ, ಕಳೆದ ವರ್ಷ ರಾಜತಾಂತ್ರಿಕ ಉದ್ವಿಗ್ನತೆ ಪ್ರಾರಂಭವಾದ ನಂತರ ಭಾರತದೊಂದಿಗೆ ಸಂಪರ್ಕ ಹೊಂದಿದ ಹ್ಯಾಕ್ಟಿವಿಸ್ಟ್ ಗುಂಪು ಕೆನಡಾದ ವೆಬ್‌ಸೈಟ್‌ಗಳ ವಿರುದ್ಧ ಸೈಬರ್ ದಾಳಿ ನಡೆಸಿದೆ ಎಂದು ವರದಿ ಹೇಳಿದೆ.
Advertisement