ಜಮ್ಮು-ಕಾಶ್ಮೀರ: ಪುಲ್ವಾಮಾದಲ್ಲಿ ಉಗ್ರರ ಸಹಚರ ಬಂಧನ, ಶಸಾಸ್ತ್ರ ವಶ

ಬಂಧಿತ ಸಜಾದ್ ಅಹ್ಮದ್ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡು ಇಟ್ಟುಕೊಂಡಿದ್ದ ತನ್ನ ಅಂಗಡಿಯ ಸ್ಥಳವನ್ನು ತಿಳಿಸಿದ ನಂತರ ಜಂಟಿ ತಂಡ ಅಲ್ಲಿ ದಾಳಿ ನಡೆಸಿದ್ದು, ಒಂದು ಪಿಸ್ತೂಲ್, ಮ್ಯಾಗಜೇನ್ ಹಾಗೂ 12 ಸುತ್ತು ಮದ್ದುಗುಂಡು ಮತ್ತು ಎರಡು ಜೀವಂತ ಗ್ರೆನೇಡ್ ವಶಕ್ಕೆ.
Security force casual images
ಭದ್ರತಾ ಪಡೆಗಳ ಸಾಂದರ್ಭಿಕ ಚಿತ್ರ
Updated on

ಪುಲ್ವಾಮಾ: ನಿಷೇಧಿತ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಉಗ್ರರ ಸಹಚರನೊಬ್ಬನನ್ನು ಭದ್ರತಾ ಪಡೆಗಳು ಭಾನುವಾರ ಬಂಧಿಸಿದ್ದು, ಆತನಿಂದ ಶಸಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಉಗ್ರರ ಸಹಚರನನ್ನು ಪುಲ್ವಾಮಾದ ತಹಾಬ್ ಪ್ರದೇಶದ ಸಜಾದ್ ಅಹ್ಮದ್ ದಾರ್ ಎಂದು ಗುರುತಿಸಲಾಗಿದೆ. ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ ಮತ್ತು ಸ್ಫೋಟ ಕಾಯ್ದೆಯಡಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ದಾರ್ ನನ್ನು ಸಿಆರ್ ಪಿಎಫ್ ಮತ್ತು ಪೊಲೀಸರನ್ನೊಳಗೊಂಡ ಜಂಟಿ ತಂಡ ಬಂಧಿಸಿದೆ ಎಂದು ವಕ್ತಾರರೊಬ್ಬರು ಹೇಳಿದ್ದಾರೆ.

ಬಂಧಿತ ಸಜಾದ್ ಅಹ್ಮದ್ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡು ಇಟ್ಟುಕೊಂಡಿದ್ದ ತನ್ನ ಅಂಗಡಿಯ ಸ್ಥಳವನ್ನು ತಿಳಿಸಿದ ನಂತರ ಜಂಟಿ ತಂಡ ಅಲ್ಲಿ ದಾಳಿ ನಡೆಸಿದ್ದು, ಒಂದು ಪಿಸ್ತೂಲ್, ಮ್ಯಾಗಜೇನ್ ಹಾಗೂ 12 ಸುತ್ತು ಮದ್ದುಗುಂಡು ಮತ್ತು ಎರಡು ಜೀವಂತ ಗ್ರೆನೇಡ್ ವಶಕ್ಕೆ ಪಡೆದಿರುವುದಾಗಿ ಅವರು ಮಾಹಿತಿ ನೀಡಿದರು.

Security force casual images
ಜಮ್ಮು-ಕಾಶ್ಮೀರ: ಉತ್ತರ ಪ್ರದೇಶದ ಇಬ್ಬರು ಕಾರ್ಮಿಕರಿಗೆ ಗುಂಡೇಟು; ಅಕ್ಟೋಬರ್ 18 ರಿಂದ ನಡೆದ 5ನೇ ಉಗ್ರರ ದಾಳಿ!

ಈ ವಾರದ ಆರಂಭದಲ್ಲಿ ಹಿಜ್ಬುಲ್ ಮುಜಾಹಿದ್ದೀನ್‌ನ ಉಗ್ರರ ಸಹಚರ ಡ್ಯಾನಿಶ್ ಬಶೀರ್ ಅಹಂಗರ್ ನನ್ನು ಬಂಧಿಸಲಾಗಿತ್ತು. ಆತನ ಮಾಹಿತಿಯಂತೆ ಮತ್ತಷ್ಟು ಬಂಧನ ಮತ್ತು ಶಸಾಸ್ತ್ರಗಳನ್ನು ವಶಕ್ಕೆ ಪಡೆಯಲಾಯಿತು ಎಂದು ವಕ್ತಾರರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com