ಥಾಣೆ: ಮಹಾರಾಷ್ಟ್ರದ ಥಾಣೆ ಮೂಲದ ವೈದ್ಯರೊಬ್ಬರಿಗೆ ಕರ್ನಾಟಕ ಮೂಲದ ಮೂವರು ವ್ಯಕ್ತಿಗಳು 3. 84 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ವೈದ್ಯಕೀಯ ಸಾಧನಗಳನ್ನು ಪೂರೈಸುವ ಸರ್ಕಾರಿ ಗುತ್ತಿಗೆಯಿಂದ ಲಾಭದ ಆಮಿಷವೊಡ್ಡಿ ಅವರನ್ನು ವಂಚಿಸಿರುವುದಾಗಿ ತಿಳಿದುಬಂದಿದೆ.
ಮೂವರು ಆರೋಪಿಗಳು ಡಿಸೆಂಬರ್ 1, 2020 ರಿಂದ ಈ ವರ್ಷದ ಮಾರ್ಚ್ 27 ರ ನಡುವೆ ಒಪ್ಪಂದಕ್ಕೆ ಸಂಬಂಧಿಸಿದ ವಿವಿಧ ವಸ್ತುಗಳಲ್ಲಿ ಹೂಡಿಕೆ ಮಾಡಲು 39 ವರ್ಷದ ಸಂತ್ರಸ್ತನಿಂದ ಹಣ ಪಡೆದಿದ್ದರು ಎಂದು ನೌಪಾದ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
ತದನಂತರ ಡಾಕ್ಟರ್ ಯಾವುದೇ ಲಾಭ ಅಥವಾ ಹೂಡಿಕೆಯ ಮೇಲೆ ಲಾಭವನ್ನು ಪಡೆಯದ ನಂತರ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಈ ಸಂಬಂಧ ವಂಚನೆ ಪ್ರಕರಣವನ್ನು ದಾಖಲಿಸಿದ್ದೇವೆ ಆದರೆ ಯಾರನ್ನೂ ಬಂಧಿಸಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.
Advertisement