ಕೆನಡಾಗೆ ಶಿಫ್ಟ್ ಆಗಬೇಡ ಎಂದಿದ್ದಕ್ಕೆ ಹೆತ್ತ ತಾಯಿಯನ್ನೇ ಕೊಂದ ಪಾಪಿ ಮಗ!

ಆಗ್ನೇಯ ದೆಹಲಿಯ ಬದರ್‌ಪುರ ಪ್ರದೇಶದ ಮೊಲಾರ್‌ಬಂದ್ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಕೆಲಸಕ್ಕಾಗಿ ಕೆನಡಾಕ್ಕೆ ತೆರಳಲು ಅವಕಾಶ ನೀಡದ 50 ವರ್ಷದ ಹೆತ್ತ ತಾಯಿಯನ್ನು ಆಕೆಯ ಮಗನೇ ಚಾಕುವಿನಿಂದ ಇರಿದು ಕೊಂದಿದ್ದಾನೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ.

ಆಗ್ನೇಯ ದೆಹಲಿಯ ಬದರ್‌ಪುರ ಪ್ರದೇಶದ ಮೊಲಾರ್‌ಬಂದ್ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ.

ನವೆಂಬರ್ 6 ರಂದು ಸಂಜೆ ತನ್ನ ತಾಯಿಯನ್ನು ಕೊಂದ ನಂತರ, ಆರೋಪಿ ಕೃಷ್ಣಕಾಂತ್(31) ತನ್ನ ತಂದೆ ಸುರ್ಜೀತ್ ಸಿಂಗ್(52)ಗೆ ಕರೆ ಮಾಡಿ ಮನೆಗೆ ಬರುವಂತೆ ಹೇಳಿದ್ದಾನೆ.

ಸಿಂಗ್ ಮನೆಗೆ ಬಂದಾಗ ಮಗ ಕೃಷ್ಣಕಾಂತ್ ತನ್ನನ್ನು "ಕ್ಷಮಿಸಿ"ವಂತೆ ಹೇಳಿದ್ದಾನೆ ಮತ್ತು ಮೇಲಕ್ಕೆ ಕರೆದುಕೊಂಡು ಹೋಗಿ ತಾನು ಮಾಡಿದ ಕೃತ್ಯವನ್ನು ತೋರಿಸಿದ್ದಾನೆ ಎಂದು ಪೊಲೀಸ್ ಉಪ ಆಯುಕ್ತ(ಆಗ್ನೇಯ) ರವಿಕುಮಾರ್ ಸಿಂಗ್ ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ
ಕೆನಡಾ: ಹಿಂದೂ ಸಭಾ ಮಂದಿರ್ ಪ್ರತಿಭಟನೆಯಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಓರ್ವನ ಬಂಧನ

ಸಿಂಗ್ ಮನೆಯ ಮೊದಲ ಮಹಡಿಗೆ ಹೋಗಿ ನೋಡಿದಾಗ, ತನ್ನ ಹೆಂಡತಿ ಗೀತಾ ದೇಹದ ಮೇಲೆ ಅನೇಕ ಇರಿತದ ಗಾಯಗಳೊಂದಿಗೆ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡಿದ್ದಾರೆ. ಈ ವೇಳೆ ಆರೋಪಿ ಮಗ ಓಡಿಹೋದನು ಎಂದು ಅವರು ಹೇಳಿದ್ದಾರೆ.

ಸಿಂಗ್ ತಕ್ಷಣವೇ ಪತ್ನಿ ಗೀತಾಳನ್ನು ಅಪೋಲೋ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಸಿಂಗ್ ಅವರಿಗೆ ಇಬ್ಬರು ಪುತ್ರರಿದ್ದಾರೆ ಎಂದು ಡಿಸಿಪಿ ತಿಳಿಸಿದ್ದಾರೆ. ಅವರ ಕಿರಿಯ ಮಗ ಸಾಹಿಲ್ ಭೋಲಿ(27) ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಕೃಷ್ಣಕಾಂತ್ ನಿರುದ್ಯೋಗಿಯಾಗಿದ್ದು, ಮಾದಕ ವ್ಯಸನಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com