Punjab: ಮದುವೆ ಸಂಭ್ರಮಾಚರಣೆ ವೇಳೆ ವಧುವಿನ ತಲೆಗೆ ಬಂದೂಕಿನ ಗುಂಡು ಹೊಕ್ಕಿ ಅನಾಹುತ!

ಪಂಜಾಬ್ ನ ಫಿರೋಜ್‌ಪುರದ ಖೈ ಫೆಮೆ ಕಿ ಗ್ರಾಮದಲ್ಲಿ ಭಾನುವಾರ ಈ ಘಟನೆ ನಡೆದಿದ್ದು, ಅರಮನೆಯಲ್ಲಿ ಮದುವೆ ಸಂಭ್ರಮಾಚರಣೆ ವೇಳೆ ವಧು ತಲೆಗೆ ಗುಂಡು ತಗುಲಿ ತೀವ್ರವಾಗಿ ಗಾಯಗೊಂಡಿದ್ದಾರೆ.
Bride critical after bullet hits her head during marriage
ಮದುವೆ ಸಂಭ್ರಮದಲ್ಲಿ ಬಂದೂಕು ಬಳಕೆ
Updated on

ಅಮೃತಸರ: ಪಂಜಾಬ್ ನಲ್ಲಿ ಮದುವೆ ಸಂಭ್ರಮವೊಂದು ದುರಂತದಲ್ಲಿ ಅಂತ್ಯವಾಗಿದ್ದು, ಸಂಭ್ರಮಾಚರಣೆ ವೇಳೆ ಸಂಬಂಧಿಕರು ಸಿಡಿಸಿದ ಬಂದೂಕಿನ ಗುಂಡು ನೇರವಾಗಿ ವಧುವಿನ ಹಣಗೆ ಹೊಕ್ಕಿದೆ.

ಪಂಜಾಬ್ ನ ಫಿರೋಜ್‌ಪುರದ ಖೈ ಫೆಮೆ ಕಿ ಗ್ರಾಮದಲ್ಲಿ ಭಾನುವಾರ ಈ ಘಟನೆ ನಡೆದಿದ್ದು, ಅರಮನೆಯಲ್ಲಿ ಮದುವೆ ಸಂಭ್ರಮಾಚರಣೆ ವೇಳೆ ವಧು ತಲೆಗೆ ಗುಂಡು ತಗುಲಿ ತೀವ್ರವಾಗಿ ಗಾಯಗೊಂಡಿದ್ದಾರೆ.

ಮದುವೆ ಸಮಾರಂಭದಲ್ಲಿ ಸಂಬಂಧಿಕರು ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಶಮ್ ಟೂಟ್ ಗ್ರಾಮದ ಬಾಜ್ ಸಿಂಗ್ ಅವರ ಪುತ್ರಿ ಬಲ್ಜಿಂದರ್ ಕೌರ್ (23 ವರ್ಷ) ಮತ್ತು ತರ್ನ್ ತರಣ್ ಜಿಲ್ಲೆಯ ಸರ್ಹಾಲಿ ಕಲನ್‌ನ ಗುರುಪ್ರೀತ್ ಸಿಂಗ್ ಅವರ ಮದುವೆ ಖೈ ಫೆಮೆ ಕಿ ಗ್ರಾಮದ ಬಳಿಯ ಅರಮನೆಯಲ್ಲಿ ನೆರವೇರುತ್ತಿತ್ತು.

Bride critical after bullet hits her head during marriage
'ಪುರುಷರಿಗಿಂತ ನಾವೇನು ಕಮ್ಮಿ, ನಾವೇಕೆ ಮಂತ್ರ ಪಠಿಸಬಾರದು?': 2 ವರ್ಷದಲ್ಲಿ 25 ಜೋಡಿಗೆ ಮದುವೆ ಮಾಡಿಸಿದ ದೆಹಲಿಯ ಅರ್ಚಕಿ

ಈ ವೇಳೆ ಸಂಬಂಧಿಕರು ಗುಂಡು ಹಾರಿಸಿದ್ದು, ಈ ವೇಳೆ ಗುಂಡು ನೇರವಾಗಿ ವಧುವಿನ ತಲೆಗೆ ಹೊಕ್ಕಿದೆ. ಈ ವೇಳೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ವಧುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ. ಅಂತೆಯೇ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಸುಖ್ವಿಂದರ್ ಸಿಂಗ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com