ಬಿಹಾರ: ಬ್ಯಾರಕ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳಾ ಕಾನ್ಸ್‌ಟೇಬಲ್‌ ಪತ್ತೆ!

ಬಾತ್ ರೂಂ ಬಾಗಿಲನ್ನು ಒಳಗಿನಿಂದ ಲಾಕ್ ಮಾಡಿರುವುದನ್ನು ಇನ್ನೋರ್ವ ಮಹಿಳಾ ಕಾನ್ಸ್ ಟೇಬಲ್ ನೋಡಿದ್ದಾರೆ. ನಂತರ ಇತರ ಕಾನ್‌ಸ್ಟೆಬಲ್‌ಗಳ ಸಹಾಯದಿಂದ ಬಾಗಿಲು ತೆರೆದಾಗ ಚಾಂದನಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದರು
Casual Images
ಸಾಂದರ್ಭಿಕ ಚಿತ್ರ
Updated on

ಸಮಸ್ತಿಪುರ: ಬಿಹಾರದ ಸಮಸ್ತಿಪುರ ಜಿಲ್ಲೆಯಲ್ಲಿ ಮಹಿಳಾ ಪೊಲೀಸ್ ಪೇದೆಯೊಬ್ಬರು ತಮ್ಮ ಬ್ಯಾರಕ್‌ನ ಬಾತ್ ರೂಮ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ. ಮೃತರನ್ನು ವೈಶಾಲಿ ಜಿಲ್ಲೆಯ ನಿವಾಸಿ ಚಾಂದನಿ ಕುಮಾರಿ ಎಂದು ಗುರುತಿಸಲಾಗಿದೆ.

ಚಾಂದನಿ ಕುಮಾರಿ ಮುಸ್ರಿಘರಾರಿ ಪೊಲೀಸ್ ಠಾಣೆಯ ಎರಡನೇ ಮಹಡಿಯಲ್ಲಿ ಬ್ಯಾರಕ್‌ನಲ್ಲಿ ತಂಗಿದ್ದರು. ಬಾತ್ ರೂಂ ಬಾಗಿಲನ್ನು ಒಳಗಿನಿಂದ ಲಾಕ್ ಮಾಡಿರುವುದನ್ನು ಇನ್ನೋರ್ವ ಮಹಿಳಾ ಕಾನ್ಸ್ ಟೇಬಲ್ ನೋಡಿದ್ದಾರೆ. ನಂತರ ಇತರ ಕಾನ್‌ಸ್ಟೆಬಲ್‌ಗಳ ಸಹಾಯದಿಂದ ಬಾಗಿಲು ತೆರೆದಾಗ ಆಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದರು

ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಆಕೆ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಆಕೆಯ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದೆ ಎಂದು ಉಪವಿಭಾಗೀಯ ಪೊಲೀಸ್ ಅಧಿಕಾರಿ ಸಂಜಯ್ ಕುಮಾರ್ ಪಾಂಡೆ ಸುದ್ದಿಗಾರರಿಗೆ ತಿಳಿಸಿದರು.

Casual Images
ಮಹಿಳಾ ಪೇದೆ ಜೊತೆ ನಗ್ನ ಸ್ಥಿತಿಯಲ್ಲಿ ಸಿಕ್ಕಿಬಿದ್ದಿದ್ದ ಪೊಲೀಸ್ ಅಧಿಕಾರಿಗೆ ಹಿಂಬಡ್ತಿ: ಉಪ ಅಧೀಕ್ಷಕ ಹುದ್ದೆಯಿಂದ ಕಾನ್‌ಸ್ಟೆಬಲ್‌!

ಆಕೆಯ ಬ್ಯಾರಕ್‌ನಿಂದ ಮೊಬೈಲ್ ಫೋನ್ ಮತ್ತು ಡೈರಿಯನ್ನು ವಶಪಡಿಸಿಕೊಂಡು ವಿಶ್ಲೇಷಿಸಲಾಗುತ್ತಿದೆ. ಈ ಕುರಿತು ಹೆಚ್ಚಿನ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಎಸ್‌ಡಿಪಿಒ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com