ಜಾರ್ಖಂಡ್‌ನಲ್ಲಿ ರಾಹುಲ್ ಗಾಂಧಿ ಹೆಲಿಕಾಪ್ಟರ್‌ಗೆ ತಡೆ; ಟೇಕಾಫ್‌ಗೆ ಅನುಮತಿ ನೀಡದ ATC

ರಾಹುಲ್ ಗಾಂಧಿ ಅವರ ಚುನಾವಣಾ ಪ್ರಚಾರದ ದಿಕ್ಕು ತಪ್ಪಿಸಲು ಉದ್ದೇಶಪೂರ್ವಕವಾಗಿ ಹೆಲಿಕಾಪ್ಟರ್‌ ತಡೆಯಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ರಾಹುಲ್ ಗಾಂಧಿ ಹೆಲಿಕಾಪ್ಟರ್‌ಗೆ ತಡೆ
ರಾಹುಲ್ ಗಾಂಧಿ ಹೆಲಿಕಾಪ್ಟರ್‌ಗೆ ತಡೆ
Updated on

ಗೊಡ್ಡಾ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೆಲಿಕಾಪ್ಟರ್ ಟೇಕಾಫ್ ಮಾಡಲು ಏರ್ ಟ್ರಾಫಿಕ್ ಕಂಟ್ರೋಲ್ ಅನುಮತಿ ನೀಡದ ಹಿನ್ನೆಲೆಯಲ್ಲಿ ಶುಕ್ರವಾರ ಜಾರ್ಖಂಡ್‌ನ ಗೊಡ್ಡಾದಲ್ಲಿ ಅವರ ಚಾಪರ್ ಅನ್ನು ತಡೆಯಲಾಗಿದೆ.

ಜಾರ್ಖಂಡ್‌ ವಿಧಾನಸಭೆ ಚುನಾವಣೆಯ ಅಂತಿಮ ಹಂತದ ಮತದಾನಕ್ಕೂ ಮುನ್ನ ರಾಜ್ಯದಲ್ಲಿ ರಾಹುಲ್ ಗಾಂಧಿ ಅವರ ಚುನಾವಣಾ ಪ್ರಚಾರದ ದಿಕ್ಕು ತಪ್ಪಿಸಲು ಉದ್ದೇಶಪೂರ್ವಕವಾಗಿ ಹೆಲಿಕಾಪ್ಟರ್‌ ತಡೆಯಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಸುಮಾರು 45 ನಿಮಿಷಗಳ ಕಾಲ ಹೆಲಿಕಾಪ್ಟರ್ ಕ್ಲಿಯರೆನ್ಸ್ ಪಡೆಯಲಿಲ್ಲ ಮತ್ತು ಇನ್ನೂ ಗೊಡ್ಡಾದಲ್ಲೇ ಹೆಲಿಕಾಪ್ಟರ್ ನಿಂತಿದೆ.

ರಾಹುಲ್ ಗಾಂಧಿ ಹೆಲಿಕಾಪ್ಟರ್‌ಗೆ ತಡೆ
ಪ್ರಧಾನಿ ಮೋದಿ ಎಂದೂ ಸಂವಿಧಾನವನ್ನು ಓದಿಲ್ಲ: ರಾಹುಲ್ ಗಾಂಧಿ

ಎಟಿಸಿ ಅನುಮತಿ ಸಿಗದೇ ಇರುವುದು ಬಿಜೆಪಿಯ ಚುನಾವಣಾ ಷಡ್ಯಂತ್ರದ ಭಾಗವೆಂದು ಕಾಂಗ್ರೆಸ್ ಮತ್ತು ಜೆಎಂಎಂ ಆಪಾದಿಸಿದೆ.

ಗೊಡ್ಡಾದಿಂದ ಸುಮಾರು 150 ಕಿಮೀ ದೂರದಲ್ಲಿರುವ ಚಕೈಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಕಾರಣ ಏರ್‌ ಟ್ರಾಪಿಕ್‌ ಕಂಟ್ರೋಲ್ ಅನುಮತಿ ನೀಡಿಲ್ಲ. ಇದು ಉದ್ದೇಶಪೂರ್ವಕ ಕೃತ್ಯ ಎಂದು ಕಾಂಗ್ರೆಸ್ ಆರೋಪಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com