ಪೂರ್ವಾಂಚಲಿ ನಾಯಕ ಅನಿಲ್ ಝಾ ಬಿಜೆಪಿ ತೊರೆದು AAP ಸೇರ್ಪಡೆ!

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಿರಾರಿಯಿಂದ ಹಾಲಿ ಎಎಪಿ ಶಾಸಕರನ್ನು ಅವರನ್ನು ಬದಲಾಯಿಸಿ ಝಾ ಅವರಿಗೆ ಟಿಕೆಟ್ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ.
Arvind Kejriwal,Anil Jha
ಅರವಿಂದ್ ಕೇಜ್ರಿವಾಲ್, ಅನಿಲ್ ಝಾ
Updated on

ನವದೆಹಲಿ: ಬಿಜೆಪಿಯ ಪೂರ್ವಾಂಚಲಿ ನಾಯಕ ಮತ್ತು ಕಿರಾರಿಯ ಎರಡು ಬಾರಿಯ ಮಾಜಿ ಶಾಸಕ ಅನಿಲ್ ಝಾ ಭಾನುವಾರ AAP ಗೆ ಸೇರ್ಪಡೆಯಾದರು. ನಜಾಫ್‌ಗಢ ಶಾಸಕ ಮತ್ತು ಸಾರಿಗೆ ಸಚಿವ ಕೈಲಾಶ್ ಗಹ್ಲೋಟ್ ಪಕ್ಷ ತೊರೆದ ಬೆನ್ನಲ್ಲೇ ಅರವಿಂದ್ ಕೇಜ್ರಿವಾಲ್ ಸಮ್ಮುಖದಲ್ಲಿ ಅನಿಲ್ ಝಾ ಪಕ್ಷ ಸೇರ್ಪಡೆಯಾದರು.

ಮಂಡಿ ಹೌಸ್ ಬಳಿಯ ಪಕ್ಷದ ಪ್ರಧಾನ ಕಛೇರಿಯಲ್ಲಿ ಝಾ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡ ಕೇಜ್ರಿವಾಲ್, ದೆಹಲಿ ರಾಜಕೀಯದಲ್ಲಿ ಪೂರ್ವಾಂಚಲದ ನಾಯಕರು ಒಬ್ಬರಾಗಿದ್ದಾರೆ. ಕಿರಾರಿ ಮಾತ್ರವಲ್ಲದೇ ನಗರದೆಲ್ಲೆಡೆ ಅವರು ಪಕ್ಷ ಬಲವರ್ಧನೆ ಮಾಡಲಿದ್ದಾರೆ ಎಂದರು.

ಫೆಬ್ರವರಿಯಲ್ಲಿ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಿರಾರಿಯಿಂದ ಹಾಲಿ ಎಎಪಿ ಶಾಸಕರನ್ನು ಅವರನ್ನು ಬದಲಾಯಿಸಿ ಝಾ ಅವರಿಗೆ ಟಿಕೆಟ್ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ. ಕೇಜ್ರಿವಾಲ್ ಅವರ ವ್ಯಕ್ತಿತ್ವ ಮತ್ತು ನಗರದ ಅನಧಿಕೃತ ಕಾಲೋನಿಗಳಲ್ಲಿ ವಾಸಿಸುವ ಪೂರ್ವಾಂಚಲಿ ಜನರ ಜೀವನವನ್ನು ಸುಧಾರಿಸಲು ಎಎಪಿ ಸರ್ಕಾರ ಮಾಡಿದ ಕೆಲಸದಿಂದ ಪ್ರಭಾವಿತರಾಗಿರುವುದಾಗಿ ಝಾ ಶ್ಲಾಘಿಸಿದರು.

Arvind Kejriwal,Anil Jha
AAP ಸಚಿವ ಸ್ಥಾನಕ್ಕೆ Kailash Gahlot ರಾಜೀನಾಮೆ: ನಾವೀಗ 'ಆಮ್ ಆದ್ಮಿ' ಆಗಿ ಉಳಿದಿಲ್ಲ.. ಪಕ್ಷಕ್ಕೆ ಬದ್ಧತೆ ಬದಲು ರಾಜಕೀಯ ಹಿತಾಸಕ್ತಿ ಮುಖ್ಯವಾಗಿದೆ!

ಎಎಪಿ ಸರ್ಕಾರ 10,000 ಕಿ.ಮೀ ರಸ್ತೆಗಳನ್ನು ನಿರ್ಮಿಸಿದರೆ, 6800 ಕಿಮೀ ಒಳಚರಂಡಿ ಮಾರ್ಗಗಳನ್ನು ಹಾಕಿದೆ ಮತ್ತು 1,650 ಅನಧಿಕೃತ ಕಾಲೋನಿಗಳಲ್ಲಿ ಪೈಪ್‌ಲೈನ್ ನೀರನ್ನು ಒದಗಿಸಿದೆ, ಆದರೆ ಬಿಜೆಪಿ ಏನನ್ನೂ ಮಾಡಲಿಲ್ಲ ಎಂದು ಕೇಜ್ರಿವಾಲ್ ಆರೋಪಿಸಿದರು. ಪೂರ್ವಾಂಚಲಿ ಜನರು ಬಿಜೆಪಿಗೆ ಏಕೆ ಮತಹಾಕಬೇಕು ಎಂದು ಬಿಜೆಪಿ ಮತ್ತು ಅದರ ನಾಯಕ ಅಮಿತ್ ಶಾ ಅವರನ್ನು ಕೇಳಲು ಬಯಸುತ್ತೇನೆ ಎಂದರು. ಆದರೆ ಕೈಲಾಶ್ ಗೆಹ್ಲೋಟ್ ಅವರ ರಾಜೀನಾಮೆ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com