ಮೂರು ದೇಶಗಳ ಪ್ರವಾಸ: 17 ವರ್ಷಗಳ ನಂತರ ಭಾರತದ ಪ್ರಧಾನಿ ನೈಜೀರಿಯಾ ಭೇಟಿ; ಅನಿವಾಸಿ ಭಾರತೀಯರಿಂದ ಮೋದಿಗೆ ಅದ್ಧೂರಿ ಸ್ವಾಗತ

17 ವರ್ಷಗಳ ನಂತರ ಭಾರತೀಯ ಪ್ರಧಾನಮಂತ್ರಿಯೊಬ್ಬರ ನೈಜೀರಿಯಾ ಭೇಟಿಯಾಗಿದೆ. 2007ರ ಅಕ್ಟೋಬರ್‌ನಲ್ಲಿ ಮನಮೋಹನ್ ಸಿಂಗ್ ನೈಜೀರಿಯಾಕ್ಕೆ ಭೇಟಿ ನೀಡಿದ್ದರು.
ಅನಿವಾಸಿ ಭಾರತೀಯರೊಂದಿಗೆ ಮಾತುಕತೆ ನಡೆಸುತ್ತಿರುವ ಪ್ರಧಾನಿ ಮೋದಿ.
ಅನಿವಾಸಿ ಭಾರತೀಯರೊಂದಿಗೆ ಮಾತುಕತೆ ನಡೆಸುತ್ತಿರುವ ಪ್ರಧಾನಿ ಮೋದಿ.
Updated on

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ 3 ದಿನಗಳ ವಿದೇಶ ಯಾತ್ರೆ ಶನಿವಾರ ಆರಂಭವಾಗಿದ್ದು, ನೈಜೀರಿಯಾಗೆ ಭೇಟಿ ನೀಡಿದ ಮೋದಿಯವರಿಗ ಅದ್ಧೂರಿಯಾಗಿ ಸ್ವಾಗತ ಕೋರಲಾಗಿದೆ.

ನೈಜೀರಿಯಾ ಅಧ್ಯಕ್ಷರ ಆಹ್ವಾನದ ಮೇರೆಗೆ ಮೋದಿಯವರು ನ.16-17ರಂದು ನೈಜೀರಿಯಾಕ್ಕೆ ಭೇಟಿ ನೀಡಿದ್ದಾರೆ. ಇದು 17 ವರ್ಷಗಳ ನಂತರ ಭಾರತೀಯ ಪ್ರಧಾನಮಂತ್ರಿಯೊಬ್ಬರ ನೈಜೀರಿಯಾ ಭೇಟಿಯಾಗಿದೆ. 2007ರ ಅಕ್ಟೋಬರ್‌ನಲ್ಲಿ ಮನಮೋಹನ್ ಸಿಂಗ್ ನೈಜೀರಿಯಾಕ್ಕೆ ಭೇಟಿ ನೀಡಿದ್ದರು. ಆ ಬಳಿಕ ಇದೇ ಮೊದಲ ಭಾರೀ ಮೋದಿ ಅವರು ಭೇಟಿ ನೀಡುತ್ತಿದ್ದಾರೆ.

ನೈಜೀರಿಯಾಗೆ ಭೇಟಿ ನೀಡಿದ ಮೋದಿಯವರಿಗೆ ಅಲ್ಲಿನ ಅನಿವಾಸಿ ಭಾರತೀಯರು ಅದ್ಧೂರಿ ಸ್ವಾಗತ ಕೋರಿದ್ದಾರೆ. ಈ ಕುರಿತ ಫೋಟೋಗಳನ್ನು ಮೋದಿಯವರು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ನೈಜೀರಿಯಾದಲ್ಲಿರುವ ಭಾರತೀಯ ಸಮುದಾಯ ನೀಡಿದ ಅದ್ಧೂರಿ ಸ್ವಾಗತ ನೀಡಿದ್ದು ಹೃದಯ ಮುಟ್ಟಿತು ಎಂದು ಹೇಳಿದ್ದಾರೆ.

ಅನಿವಾಸಿ ಭಾರತೀಯರೊಂದಿಗೆ ಮಾತುಕತೆ ನಡೆಸುತ್ತಿರುವ ಪ್ರಧಾನಿ ಮೋದಿ.
ಉಗ್ರರು ಈಗ ತಮ್ಮ ಮನೆಗಳಲ್ಲೂ ಸುರಕ್ಷಿತವಲ್ಲ, ಕಾಲ ಬದಲಾಗಿದೆ: ಪ್ರಧಾನಿ ಮೋದಿ

ಇನ್ನು ನೈಜೀರಿಯಾ ಭೇಟಿ ಬಳಿಕ ಮೋದಿಯವರು ಜಿ.20 ಶೃಂಗಕ್ಕಾಗಿ ನ.18 ಮತ್ತು 17ರಂದು ಬ್ರೆಜಿಲ್'ಗೆ ಭೇಟಿ ನೀಡಲಿದ್ದಾರೆ. ನಂತರ ನ.21ರವರೆಗೆ ಗಯಾನಾಕ್ಕೂ ಭೇಟಿ ನೀಡಲಿದ್ದಾರೆ. ಗಯಾನಾದಲ್ಲಿ ನಡೆಯಲಿರುವ CARICOM-India ಶೃಂಗಸಭೆಯಲ್ಲಿ ಮೋದಿಯವರು ಭಾಗವಹಿಸಲಿದ್ದು, ಇದೂ ಕೂಡ ತುಂಬಾ ವಿಶೇಷವಾಗಲಿದೆ. ಏಕೆಂದರೆ 50 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರ ಮೊದಲ ಭೇಟಿ ನೀಡುತ್ತಿದ್ದಾರೆ.

ಜಿ20 ಶೃಂಗ ಅರ್ಥಪೂರ್ಣ ಮಾತುಕತೆಗೆ ಎದುರು ನೋಡುತ್ತಿರುವೆ ಎಂದು ಮೋದಿಯವರು ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com