Video: ಆ್ಯಂಬುಲೆನ್ಸ್ ಗೆ ದಾರಿ ಕೊಡದ ಕಾರು ಚಾಲಕನಿಗೆ ಬಿತ್ತು 2.5 ಲಕ್ಷ ರೂ ದಂಡ, ಲೈಸೆನ್ಸ್ ರದ್ದು!

ಆರೋಗ್ಯಸ್ಥಿತಿ ಗಂಭೀರವಾಗಿ ರೋಗಿಯನ್ನು ಆ್ಯಂಬುಲೆನ್ಸ್ ನಲ್ಲಿ ಆಸ್ಪತ್ರೆ ಸಾಗಿಸುತ್ತಿದ್ದಾಗ ಮಾರ್ಗಮಧ್ಯೆ ಚಾಲಕ ಹಾರ್ನ್ ಮಾಡಿದ್ದಾರೆ. ಈ ವೇಳೆ ಮುಂದೆ ಸಾಗುತ್ತಿದ್ದ ಕಾರು ಚಾಲಕ ಬೇಕೆಂದೇ ಆ್ಯಂಬುಲೆನ್ಸ್ ಗೆ ದಾರಿ ಮಾಡಿಕೊಡದೇ ಉದ್ಧಟನ ಪ್ರದರ್ಶನ ಮಾಡಿದ್ದಾನೆ.
Car owner blocking an ambulance
ಆ್ಯಂಬುಲೆನ್ಸ್ ದಾರಿ ಕೊಡದ ಕಾರು ಮಾಲೀಕ
Updated on

ತಿರುವನಂತಪುರಂ: ರಸ್ತೆಯಲ್ಲಿ ರೋಗಿ ಇದ್ದ ಆ್ಯಂಬುಲೆನ್ಸ್ ಗೆ ದಾರಿ ಮಾಡಿಕೊಡದೇ ಸತಾಯಿಸಿದ್ದ ಕಾರು ಚಾಲಕನಿಗೆ ಪೊಲೀಸರು ಬಿಗ್ ಶಾಕ್ ನೀಡಿದ್ದು, ಬರೊಬ್ಬರಿ 2.5ಲಕ್ಷ ರೂ ದಂಡ ವಿಧಿಸಿದ್ದು ಮಾತ್ರವಲ್ಲದೇ ಆತನ ಚಾಲನಾ ಪರವಾನಗಿಯನ್ನೇ ರದ್ದು ಮಾಡಿದ್ದಾರೆ.

ಹೌದು.. ಕೇರಳದ ತಿರುವನಂತಪುರದಲ್ಲಿ ಈ ಘಟನೆ ವರದಿಯಾಗಿದ್ದು, ಆರೋಗ್ಯಸ್ಥಿತಿ ಗಂಭೀರವಾಗಿ ರೋಗಿಯನ್ನು ಆ್ಯಂಬುಲೆನ್ಸ್ ನಲ್ಲಿ ಆಸ್ಪತ್ರೆ ಸಾಗಿಸುತ್ತಿದ್ದಾಗ ಮಾರ್ಗಮಧ್ಯೆ ಚಾಲಕ ಹಾರ್ನ್ ಮಾಡಿದ್ದಾರೆ.

ಈ ವೇಳೆ ಮುಂದೆ ಸಾಗುತ್ತಿದ್ದ ಕಾರು ಚಾಲಕ ಬೇಕೆಂದೇ ಆ್ಯಂಬುಲೆನ್ಸ್ ಗೆ ದಾರಿ ಮಾಡಿಕೊಡದೇ ಉದ್ಧಟನ ಪ್ರದರ್ಶನ ಮಾಡಿದ್ದಾನೆ. ಪದೇ ಪದೇ ಆ್ಯಂಬುಲೆನ್ಸ್ ಗೆ ಅಡ್ಡ ಬಂದು ರೋಗಿಯ ಜೀವವನ್ನು ಅಪಾಯಕ್ಕೆ ತಳ್ಳಿದ್ದಾನೆ.

Car owner blocking an ambulance
ಲಾರಿ ಕೆಳಗೆ ನಿದ್ರಿಸುತ್ತಿದ್ದ ಕಾರ್ಮಿಕನ ಗಮನಿಸದೆ ವಾಹನ ಚಲಾಯಿಸಿದ ಚಾಲಕ; ವ್ಯಕ್ತಿ ಸಾವು

ಇದರಿಂದ ಆಕ್ರೋಶಗೊಂಡ ಆ್ಯಂಬುಲೆನ್ಸ್ ಚಾಲಕ ಕಾರು ಮಾಲೀಕನ ದುರ್ವರ್ತನೆಯನ್ನು ತನ್ನ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಚಾಲಕ ಎಷ್ಟೇ ಹಾರ್ನ್ ಮಾಡಿದರೂ ದಾರಿ ಬಿಟ್ಟು ಕೊಡದ ಕಾರು ಮಾಲೀಕ ರಸ್ತೆಯಲ್ಲಿ ಬೇಕೆಂದೇ ಅಡ್ಡ ಬಂದಿದ್ದಾನೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಈ ವಿಚಾರ ತಿಳಿಯುತ್ತವೇ ಕೇರಳ ಟ್ರಾಫಿಕ್ ಪೊಲೀಸರು ವಿಡಿಯೋ ಮೂಲಕ ಕಾರಿನ ನಂಬರ್ ಮತ್ತು ಅದರ ಮಾಲೀಕನನ್ನು ಪತ್ತೆ ಮಾಡಿದ್ದಾರೆ.

ಅಲ್ಲದೆ ಆತನ ಮನೆಗೇ ಹೋಗಿ 2.5ಲಕ್ಷ ರೂ ದಂಡ ಹೇರಿದ್ದು, ಮಾತ್ರವಲ್ಲದೇ ಕಾರು ಚಾಲಕನ ಪರವಾನಗಿಯನ್ನೇ ರದ್ದು ಮಾಡಿದ್ದಾರೆ. ಈ ಮೂಲಕ ಆಂಬ್ಯುಲೆನ್ಸ್‌ಗೆ ದಾರಿ ಬಿಡದೆ ಆಟವಾಡಿಸುವ ಕೆಲ ಪುಂಡರಿಗೆ ಈ ಘಟನೆ ಒಂದು ಪಾಠವಾದಂತಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com