Maharashtra: 56 ಲಕ್ಷ ಇನ್‌ಸ್ಟಾ ಫಾಲೋವರ್ಸ್, ಬಾಲಿವುಡ್ ನಟ Ajaz Khanಗೆ ಠೇವಣಿ ಕೂಡ ಸಿಗಲಿಲ್ಲ!

ಎಜಾಜ್ ಖಾನ್ ಅವರು ಹಿಂದಿ ಬಿಗ್ ಬಾಸ್ ಮಾಜಿ ಸ್ಪರ್ಧಿಯೂ ಹೌದು. ಅನೇಕ ಚಿತ್ರಗಳಲ್ಲಿ, ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲೂ ಖಳನ ಪಾತ್ರದಲ್ಲಿ ಅಭಿನಯಿಸಿದ್ದಾರೆ.
Bigg Boss fame Ajaz Khan
ನಟ ಎಜಾಜ್ ಖಾನ್
Updated on

ಮುಂಬೈ: ಹಾಲಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಹಲವು ಅಚ್ಚರಿ ಫಲಿತಾಂಶಗಳಿಗೆ ವೇದಿಕೆಯಾಗಿದ್ದು, ಒಂದೆಡೆ ಅಧಿಕಾರದ ಚುಕ್ಕಾಣಿ ಹಿಡಿಯುವ ವಿಶ್ವಾಸದಲ್ಲಿದ್ದ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟಕ್ಕೆ ಶಾಕ್ ನೀಡಿರುವಂತೆಯೇ ಇತ್ತ ಖ್ಯಾತ ಬಾಲಿವುಡ್ ನಟನಿಗೂ ಆಘಾತ ನೀಡಿದೆ.

ಹೌದು.. ಘಟಾನುಘಟಿ ನಾಯಕರನ್ನೇ ಮನೆಗೆ ಅಟ್ಟಿರುವ ಮಹಾರಾಷ್ಟ್ರ ಮತದಾರರು, ಇನ್ ಸ್ಟಾಗ್ರಾಂ ನಲ್ಲಿ ಬರೊಬ್ಬರಿ 56 ಲಕ್ಷ ಫಾಲೋವರ್ ಗಳನ್ನು ಹೊಂದಿದ್ದ ಅಭ್ಯರ್ಥಿಯನ್ನು ಹೇಳ ಹೆಸರಿಲ್ಲದಂತೆ ಸೋಲಿಸಿ ಮನೆಗಟ್ಟಿದ್ದಾರೆ.

ಈ ಭಾರಿಯ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ವರಸೋವಾ ಕ್ಷೇತ್ರದಿಂದ ನಟ ಎಜಾಜ್ ಖಾನ್ ಚಂದ್ರಶೇಖರ್ ಆಜಾದ್ ರಾವಣ ಅವರ ‘ಆಜಾದ್ ಸಮಾಜ್ ಪಾರ್ಟಿ’ಯಿಂದ ಸ್ಪರ್ಧಿಸಿದ್ದರು. ಆದರೆ ಎಜಾಜ್ ಖಾನ್ ಠೇವಣಿ ಕೂಡ ಸಿಗದೇ ಹೀನಾಯವಾಗಿ ಸೋತಿದ್ದಾರೆ.

Bigg Boss fame Ajaz Khan
Maharashtra Assembly Election: 'ಮಹಾವಿಕಾಸ್ ಅಘಾಡಿ'ಗೆ ಮರ್ಮಾಘಾತ; 'ವಿಪಕ್ಷ' ಸ್ಥಾನವೂ ಇಲ್ಲ, ರಾಜ್ಯಸಭೆ ಸ್ಥಾನವೂ ಕಷ್ಟ..ಕಷ್ಟ!

ಭರ್ಜರಿ ಪ್ರಚಾರ ಮಾಡಿದ್ದ ನಟ

ಇನ್ನು ಈ ಚುನಾವಣೆಯಲ್ಲಿ ಭರ್ಜರಿ ಪ್ರಚಾರ ಮಾಡಿದ್ದ ಎಜಾಜ್ ಖಾನ್, ತಾವು ಮಾತ್ರವಲ್ಲದೇ ಹಲವು ಇನ್ ಫ್ಲುಯೆನ್ಸರ್ ಗಳು, ಯೂಟ್ಯೂಬರ್ ಗಳು ಮತ್ತು ಸಿನಿಮಾ, ಸಿರಿಯಲ್ ಸ್ನೇಹಿತ, ನಟ-ನಟಿಯರಿಂದ ಪ್ರಚಾರ ಕೂಡ ನಡೆಸಿದ್ದರು. ವಿಶೇಷವೆಂದರೆ ನಟ ಎಜಾಜ್‌ಗೆ ಇನ್‌ಸ್ಟಾಗ್ರಾಂನಲ್ಲಿ 56 ಲಕ್ಷ (5.6M) ಫಾಲೋವರ್‌ಗಳಿದ್ದಾರೆ. ಆದರೂ ಅದು ಮತಗಳಾಗಿ ಪರಿವರ್ತನೆಯಾಗಿಲ್ಲ.

ಹಿಂದಿ ಬಿಗ್ ಬಾಸ್ ಸ್ಪರ್ಧಿ

ಎಜಾಜ್ ಖಾನ್ ಅವರು ಹಿಂದಿ ಬಿಗ್ ಬಾಸ್ ಮಾಜಿ ಸ್ಪರ್ಧಿಯೂ ಹೌದು. ಅನೇಕ ಚಿತ್ರಗಳಲ್ಲಿ, ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲೂ ಖಳನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ತಾನೊಬ್ಬ ರಾಜಕಾರಣಿಯೂ ಹೌದು ಎಂದು ಅವರು ಬರೆದುಕೊಂಡಿದ್ದಾರೆ.

ಇಷ್ಟಕ್ಕೂ ಎಜಾಜ್ ಗಳಿಸಿದ್ದೆಷ್ಟು ಮತ?

ಫೇಸ್‌ಬುಕ್, ಎಕ್ಸ್‌ ಹಾಗೂ ಇತರ ಸಾಮಾಜಿಕ ಜಾಲತಾಣಗಳಲ್ಲಿ ಎಜಾಜ್ ಖಾನ್ ಲಕ್ಷಾಂತರ ಫಾಲೋವರ್‌ಗಳನ್ನು ಹೊಂದಿದ್ದಾರೆ. ಇನ್ ಸ್ಟಾಗ್ರಾಂನಲ್ಲಿ ಬರೊಬ್ಬರಿ 56ಲಕ್ಷ ಫಾಲೋವರ್ಸ್ ಗಳಿದ್ದಾರೆ. ಅದಾಗ್ಯೂ ಇಂದು ಪ್ರಕಟವಾದ ಮಹಾರಾಷ್ಟ್ರ ಚುನಾವಣಾ ಫಲಿತಾಂಶದಲ್ಲಿ ಎಜಾಜ್ ಅವರು ಕೇವಲ 139 ಮತಗಳನ್ನು ಪಡೆದಿದ್ದಾರೆ.

ಅವರ ಜನಪ್ರಿಯತೆ ಚುನಾವಣೆಯಲ್ಲಿ ಲೆಕ್ಕಕ್ಕೆ ಬಂದಿಲ್ಲ. ಅಚ್ಚರಿ ಎಂದರೆ ಎಜಾಜ್ ಅವರಿಗಿಂತಲೂ ಹತ್ತು ಪಟ್ಟು ಅಧಿಕ ಅಂದರೆ 1,222 ಮತಗಳು ನೋಟಾಕ್ಕೆ ಚಲಾವಣೆ ಆಗಿವೆ. ಇದರಿಂದ ಆ ನಟ ಸಾಕಷ್ಟು ಮುಜುಗರಕ್ಕೆ ಒಳಗಾಗಿದ್ದಾರೆ.

ಅಂದಹಾಗೆ ಕಾಂಗ್ರೆಸ್ ಭದ್ರಕೋಟೆಯಾಗಿರುವ ಪ್ರಸ್ತುತ ವರಸೋವಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹರೂನ್ ಖಾನ್ ಅವರು 58 ಸಾವಿರ ಮತಗಳ ಅಂತರದಿಂದ ಗೆದ್ದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com