Maharashtra Assembly Election: 'ಮಹಾವಿಕಾಸ್ ಅಘಾಡಿ'ಗೆ ಮರ್ಮಾಘಾತ; 'ವಿಪಕ್ಷ' ಸ್ಥಾನವೂ ಇಲ್ಲ, ರಾಜ್ಯಸಭೆ ಸ್ಥಾನವೂ ಕಷ್ಟ..ಕಷ್ಟ!

ಮಹಾಯುತಿಯಲ್ಲಿ ಸಂಭ್ರಮ ಮನೆ ಮಾಡಿದ್ದು, ಬಿಜೆಪಿ, ಎನ್‌ಸಿಪಿ ಹಾಗೂ ಶಿವಸೇನಾ ನೇತೃತ್ವದ ಮಹಾಯುತಿಯು ಭಾರೀ ಬಹುತಮದೊಂದಿಗೆ ಸರ್ಕಾರ ರಚನೆಯ ಹೊಸ್ತಿಲಲ್ಲಿದೆ.
Mahavikas Aghadi
ಮಹಾವಿಕಾಸ್ ಅಘಾಡಿ
Updated on

ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಭರ್ಜರಿ ಜಯಭೇರಿ ಭಾರಿಸಿದ್ದು, ಕಾಂಗ್ರೆಸ್ ನೇತೃತ್ವದ 'ಮಹಾವಿಕಾಸ್ ಅಘಾಡಿ' ಮೈತ್ರಿಕೂಟಕ್ಕೆ ಮರ್ಮಾಘಾತವನ್ನೇ ನೀಡಿದೆ.

ಹೌದು.. ಮಹಾರಾಷ್ಟ್ರದಲ್ಲಿ ಮಹಾಯುತಿ ಮೈತ್ರಿಕೂಟವು ಭಾರೀ ಮುನ್ನಡೆ ಕಾಯ್ದುಕೊಂಡಿದ್ದು 227 ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸುವ ಹೊಸ್ತಿಲಲ್ಲಿದೆ. ಮಹಾ ವಿಕಾಸ ಅಘಾಡಿಯು 54 ಕ್ಷೇತ್ರಗಳಲ್ಲಷ್ಟೇ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಶಕ್ತವಾಗಿದೆ.

ಇತರೆ ಪಕ್ಷ ಹಾಗೂ ಪಕ್ಷೇತರರು 07 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಈ ಮೂಲಕ ಮಹಾಯುತಿಯಲ್ಲಿ ಸಂಭ್ರಮ ಮನೆ ಮಾಡಿದ್ದು, ಬಿಜೆಪಿ, ಎನ್‌ಸಿಪಿ ಹಾಗೂ ಶಿವಸೇನಾ ನೇತೃತ್ವದ ಮಹಾಯುತಿಯು ಭಾರೀ ಬಹುತಮದೊಂದಿಗೆ ಸರ್ಕಾರ ರಚನೆಯ ಹೊಸ್ತಿಲಲ್ಲಿದೆ.

Mahavikas Aghadi
ಮಹಾರಾಷ್ಟ್ರ ಗೆದ್ದ ಮಹಾಯುತಿ, ಜಾರ್ಖಂಡ್ ಉಳಿಸಿಕೊಂಡ INDIA

ಇತ್ತ ಹೀನಾಯ ಸೋಲು ಕಂಡಿರುವ ಮಹಾವಿಕಾಸ್ ಅಘಾಡಿಗೆ ಚುನಾವಣಾ ಫಲಿತಾಂಶ ಮರ್ಮಾಘಾತವನ್ನೇ ನೀಡಿದ್ದು, ಮಹಾ ವಿಕಾಸ್ ಆಘಾಡಿ ಮೈತ್ರಿಕೂಟದ ಯಾವುದೇ ಪಕ್ಷವೂ ಅಧಿಕೃತ ವಿಪಕ್ಷ ಸ್ಥಾನಮಾನ ಗಳಿಸುವಷ್ಟು ಸ್ಥಾನಗಳನ್ನು ಪಡೆದಿಲ್ಲ. 95 ಸ್ಥಾನಗಳಲ್ಲಿ ಸ್ಪರ್ಧಿಸಿದ ಉದ್ದವ್ ಠಾಕ್ರೆ ಶಿವಸೇನೆ ಬಣ 21 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, 101 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದ್ದ ಕಾಂಗ್ರೆಸ್ ಪಕ್ಷ ಕೇವಲ 17 ಸ್ಥಾನಗಳಲ್ಲಿ ಮಾತ್ರ ಗೆಲುವು ಕಂಡಿದೆ.

ಕಳೆದ ಬಾರಿ ಕಾಂಗ್ರೆಸ್ 44 ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು. ಆದರೆ ಈ ಬಾರಿ ಬರೊಬ್ಬರಿ 27 ಕ್ಷೇತ್ರಗಳನ್ನು ಕಳೆದುಕೊಂಡಿದೆ. ಅಂತೆಯೇ 86 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಶರದ್ ಪವಾರ್ ಎನ್ ಸಿಪಿ ಪಕ್ಷ 9 ಸ್ಥಾನಗಳನ್ನು ಮಾತ್ರ ಪಡೆದಿದೆ. ಕಳೆದ ಬಾರಿ ಚುನಾವಣೆಯಲ್ಲಿ ಈ ಪಕ್ಷ ಒಟ್ಟು 13 ಸ್ಥಾನ ಪಡೆದುಕೊಂಡಿತ್ತು.

ಅಧಿಕೃತ ವಿಪಕ್ಷ ಸ್ಥಾನಕ್ಕೆ ಕುತ್ತು

ಮಹಾರಾಷ್ಟ್ರ ವಿಧಾನಸಭೆಯಲ್ಲಿ ಒಂದು ಪಕ್ಷಕ್ಕೆ ಅಧಿಕೃತ ವಿಪಕ್ಷ ಸ್ಥಾನ ಗಳಿಸಲು ಕನಿಷ್ಠ 29 ಸ್ಥಾನಗಳನ್ನು ಗೆದ್ದಿರಬೇಕು. ಹಾಲಿ ಪರಿಸ್ಥಿತಿಯಲ್ಲಿ ಉದ್ಧವ್ ಠಾಕ್ರೆ ಬಣ 21 ಸ್ಥಾನ, ಕಾಂಗ್ರೆಸ್ 21 ಸ್ಥಾನ ಮತ್ತು ಶರದ್ ಪವಾರ್ ಎನ್ ಸಿಪಿ ಪಕ್ಷ 9 ಸ್ಥಾನಗಳನ್ನು ಮಾತ್ರ ಪಡೆದಿದೆ. ಹೀಗಾಗಿ ಮಹಾವಿಕಾಸ್ ಅಘಾಡಿಯ ಯಾವುದೇ ಪಕ್ಷವೂ ಅಧಿಕೃತ ವಿಪಕ್ಷ ಸ್ಥಾನಕ್ಕೆ ಅರ್ಹತೆ ಪಡೆಯದೇ ಇರುವುದು ಮೈತ್ರಿಕೂಟಕ್ಕೆ ನುಂಗಲಾರದ ತುತ್ತಾಗಿದೆ.

Mahavikas Aghadi
'ಮಹಾರಾಷ್ಟ್ರದಿಂದ ಪಾಠ ಕಲಿಯಬೇಕು.. ನನ್ನ ಸಮಯ ಕೂಡ ಬರುತ್ತದೆ': ರಾಜಕೀಯ ಪ್ರವೇಶ ಕುರಿತು Robert Vadra ಅಚ್ಚರಿ ಹೇಳಿಕೆ

ರಾಜ್ಯಸಭೆ ಸ್ಥಾನವೂ ಕಷ್ಟ..ಕಷ್ಟ!

ಇಷ್ಟು ಮಾತ್ರವಲ್ಲದೇ ಭಾರಿ ಪ್ರಮಾಣದಲ್ಲಿ ಸ್ಥಾನಗಳ ಕುಸಿತದಿಂದಾಗಿ ಮಹಾ ವಿಕಾಸ್ ಆಘಾಡಿ ಮೈತ್ರಿಕೂಟಕ್ಕೆ ಮುಂಬರುವ ರಾಜ್ಯಸಭೆ ಚುನಾವಣೆಯೂ ಕಬ್ಬಿಣದ ಕಡಲೆಯಾಗುವ ಎಲ್ಲ ಲಕ್ಷಣಗಳಿದ್ದು, ಸೋಲನ್ನೇ ಕಾಣದ ಎನ್ ಸಿಪಿಯ ಸರ್ವೋಚ್ಛ ನಾಯಕ ಶರದ್ ಪವಾರ್, ಶಿವಸೇನೆಯ ಸಂಜಯ್ ರಾವತ್ ರಾಜ್ಯಸಭೆ ಸ್ಥಾನಗಳಿಗೂ ಕುತ್ತು ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇಷ್ಟು ಮಾತ್ರವಲ್ಲದೇ ಶಿವಸೇನೆ ಉದ್ಧವ್ ಠಾಕ್ರೆ ಬಣ, ಎನ್ ಸಿಪಿ ಶರದ್ ಪವಾರ್ ಬಣ ಮತ್ತು ಕಾಂಗ್ರೆಸ್ ಪಕ್ಷಗಳೂ ಕೂಡ ತಮ್ಮ ತಮ್ಮ ರಾಜ್ಯಸಭೆ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಸಾಮರ್ಥ್ಯವನ್ನೂ ಕೂಡ ಕಳೆದುಕೊಂಡಿವೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com