ಮಹಾರಾಷ್ಟ್ರ ಚುನಾವಣೆ ಗೆಲುವು: ಸಂಭ್ರಮಾಚರಣೆ ವೇಳೆ ಅಗ್ನಿ ದುರಂತ, ಪಕ್ಷೇತರ ಅಭ್ಯರ್ಥಿಗೆ ಗಾಯ

ಚಂದಗಡ ವಿಧಾನಸಭಾ ಕ್ಷೇತ್ರದಿಂದ ಗೆದ್ದಿರುವ ಸ್ವತಂತ್ರ ಅಭ್ಯರ್ಥಿ ಶಿವಾಜಿ ಪಾಟೀಲ್ ವಿಜಯೋತ್ಸವದ ಸಂಭ್ರಮಾಚರಣೆ ವೇಳೆ ಅಭಿಮಾನಿಗಳು ಅವರ ಮೇಲೆ ಗುಲಾಲ್ (ಬಣ್ಣ) ಸುರಿದಿದ್ದು ಈ ವೇಳೆ ಬೆಂಕಿ ಹೊತ್ತಿಕೊಂಡಿದೆ.
Fire Breaks Out During Aarti as Gulal Ignites
ಸಂಭ್ರಮಾಚರಣೆ ವೇಳೆ ಬೆಂಕಿ ದುರಂತ
Updated on

ಮುಂಬೈ: ಇತ್ತೀಚೆಗೆ ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಹಲವು ಸ್ವತಂತ್ರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಈ ಗೆಲುವಿನ ಸಂಭ್ರಮಾಚರಣೆ ವೇಳೆ ಸಂಭವಿಸಿದ ದುರಂತದಲ್ಲಿ ಅಭ್ಯರ್ಥಿಯೊಬ್ಬರು ಅಗ್ನಿ ಆಕಸ್ಮಿಕಕ್ಕೆ ಸಿಲುಕಿದ ಘಟನೆ ನಡೆದಿದೆ.

ಮಹಾರಾಷ್ಟ್ರದ ಮಹಾಗಾಂವ್‌ನಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಚಂದಗಡ ವಿಧಾನಸಭಾ ಕ್ಷೇತ್ರದಿಂದ ಗೆದ್ದಿರುವ ಸ್ವತಂತ್ರ ಅಭ್ಯರ್ಥಿ ಶಿವಾಜಿ ಪಾಟೀಲ್ ವಿಜಯೋತ್ಸವದ ಸಂಭ್ರಮಾಚರಣೆ ವೇಳೆ ಅಭಿಮಾನಿಗಳು ಅವರ ಮೇಲೆ ಗುಲಾಲ್ (ಬಣ್ಣ) ಸುರಿದಿದ್ದು ಈ ವೇಳೆ ನೋಡ ನೋಡುತ್ತಲೇ ಬೆಂಕಿ ಹೊತ್ತಿಕೊಂಡಿದೆ. ಈ ಬೆಂಕಿ ಅವಘಡದಲ್ಲಿ ಅಭ್ಯರ್ಥಿ ಶಿವಾಜಿ ಪಾಟೀಲ್ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.

Fire Breaks Out During Aarti as Gulal Ignites
Maharashtra Assembly Election: 'ಮಹಾವಿಕಾಸ್ ಅಘಾಡಿ'ಗೆ ಮರ್ಮಾಘಾತ; 'ವಿಪಕ್ಷ' ಸ್ಥಾನವೂ ಇಲ್ಲ, ರಾಜ್ಯಸಭೆ ಸ್ಥಾನವೂ ಕಷ್ಟ..ಕಷ್ಟ!

ಸಂಭ್ರಮಾಚರಣೆ ವೇಳೆ ಕೆಲ ಮಹಿಳೆಯರು ಶಿವಾಜಿ ಪಾಟೀಲ್ ಆರತಿ ಮಾಡುತ್ತಿದ್ದ ವೇಳೆ ಜೆಸಿಬಿ ಮೂಲಕ ಅಭಿಮಾನಿಗಳ ಅವರ ಮೇಲೆ ಗುಲಾಲ್ ಸುರಿದಿದ್ದು, ಬೆಂಕಿಗೆ ಬಣ್ಣ ತಗುಲಿ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಅಭ್ಯರ್ಥಿ ಶಿವಾಜಿ ಪಾಟೀಲ್, ಕೆಲ ಮಹಿಳೆಯರು ಮತ್ತು ಹಲವರು ಗಾಯಗೊಂಡಿದ್ದಾರೆ.

ಮಹಿಳೆಯರು ಅವರ 'ಆರತಿ' ನಡೆಸುತ್ತಿದ್ದಾಗ ಆಕಸ್ಮಿಕವಾಗಿ ಥಾಲಿಯ ಮೇಲೆ ದೊಡ್ಡ ಪ್ರಮಾಣದ ಗುಲಾಲ್ ಸುರಿದು ಬೆಂಕಿ ಹೊತ್ತಿಕೊಂಡಿತು. ಹಲವಾರು ಮಹಿಳೆಯರೂ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಣ್ಣಪುಟ್ಟ ಸುಟ್ಟಗಾಯಗಳಾಗಿದ್ದು, ಚಿಕಿತ್ಸೆ ಮುಂದುವರೆದಿದೆ ಎನ್ನಲಾಗಿದೆ.

ಅಂದಹಾಗೆ ಚಂದಗಡ್ ಕ್ಷೇತ್ರವು ಕೊಲ್ಲಾಪುರ ಲೋಕಸಭಾ ಕ್ಷೇತ್ರದ ಭಾಗವಾಗಿದ್ದು, ಈ ಕ್ಷೇತ್ರದಿಂದ ಶಿವಾಜಿ ಪಾಟೀಲ್ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಅವರು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ರಾಜೇಶ್ ಪಾಟೀಲ್ ಅವರನ್ನು 24,134 ಮತಗಳಿಂದ ಸೋಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com