ಸ್ನೇಹಿತನ ಜೊತೆ ಕಾಡಿನಲ್ಲಿ ಸುತ್ತಾಡಲು ಹೋದ ಅಪ್ರಾಪ್ತೆ ಮೇಲೆ ಅತ್ಯಾಚಾರ: ಟ್ರಕ್ ಚಾಲಕ, ಸಹಚರನ ಬಂಧನ

ಟ್ರಕ್ ಚಾಲಕ ಸಂಜು ಬುಡಕಟ್ಟು ಸಮುದಾಯಕ್ಕೆ ಸೇರಿದ್ದು ಆತ ಅಪ್ರಾಪ್ತೆಯನ್ನು ಕಾಡಿನೊಳಗೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಅಧಿಕಾರಿ ಹೇಳಿದರು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರPTI
Updated on

ಮಧ್ಯಪ್ರದೇಶದ ರೈಸನ್ ಜಿಲ್ಲೆಯಲ್ಲಿ 15 ವರ್ಷದ ಬಾಲಕಿಯ ಮೇಲೆ ಟ್ರಕ್ ಚಾಲಕ ಅತ್ಯಾಚಾರವೆಸಗಿದ್ದಾನೆ. ಇದೇ ವೇಳೆ ಚಾಲಕನ ಇಬ್ಬರು ಸಹಚರರು ಅಪ್ರಾಪ್ತೆಯ ಸ್ನೇಹಿತನನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದರು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಕಳೆದ ರಾತ್ರಿ ಜಿಲ್ಲಾ ಕೇಂದ್ರದಿಂದ ಸುಮಾರು 110 ಕಿಮೀ ದೂರದಲ್ಲಿರುವ ಸಿಲ್ವಾನಿ-ಸಾಗರ್ ರಸ್ತೆಯಲ್ಲಿರುವ ಸಿಯರಾಮೌ ಅರಣ್ಯದಲ್ಲಿ ಕೃತ್ಯ ನಡೆಸಿದ್ದು ಈ ಸಂಬಂಧ ಟ್ರಕ್ ಚಾಲಕ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಸಿಲ್ವಾನಿ ಉಪವಿಭಾಗೀಯ ಪೊಲೀಸ್ ಅಧಿಕಾರಿ (ಎಸ್‌ಡಿಒಪಿ) ಅನಿಲ್ ಮೌರ್ಯ ಮಾತನಾಡಿ, ಸಂತ್ರಸ್ತೆ ಮತ್ತು ಆಕೆಯ 21 ವರ್ಷದ ಸ್ನೇಹಿತ ಆ ಪ್ರದೇಶದ ವನದೇವಿ ದೇವಸ್ಥಾನಕ್ಕೆ ಭೇಟಿ ನೀಡಲು ತಮ್ಮ ಬೈಕ್ ಅನ್ನು ರಸ್ತೆ ಬದಿ ನಿಲ್ಲಿಸಿ ತೆರಳುತ್ತಿದ್ದರು. ಈ ವೇಳೆ ಒಂದು ಟ್ರಕ್ ಕೆಟ್ಟು ನಿಂತಿತು. ನಂತರ ಅದರ ಚಾಲಕ ಮತ್ತು ಅವನ ಇಬ್ಬರು ಸ್ನೇಹಿತರು ಸಹ ಕಾಡಿನೊಳಗೆ ಹೋಗಿದ್ದಾರೆ.

ಅಲ್ಲಿ ಮೂವರು ಯುವತಿಯ ಸ್ನೇಹಿತನಿಗೆ ಥಳಿಸಿ ಬೈಕ್‌ನ ಕೀ ಕಿತ್ತುಕೊಂಡಿದ್ದಾರೆ. ಟ್ರಕ್ ಚಾಲಕ ಸಂಜು ಬುಡಕಟ್ಟು ಸಮುದಾಯಕ್ಕೆ ಸೇರಿದ್ದು ಆತ ಅಪ್ರಾಪ್ತೆಯನ್ನು ಕಾಡಿನೊಳಗೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಅಧಿಕಾರಿ ಹೇಳಿದರು.

ಸಂಗ್ರಹ ಚಿತ್ರ
ದೆಹಲಿ: Instagram ಪ್ರಿಯತಮನ ಜೊತೆ ಮದುವೆಗೆ ಅಡ್ಡಿ; ಮಗುವನ್ನೇ ಹತ್ಯೆ ಮಾಡಿದ ಮಹಾತಾಯಿ!

ಮೂವರು ಆರೋಪಿಗಳು ಹೋದ ನಂತರ, ಅಪ್ತಾಪ್ತೆ ಮತ್ತು ಸ್ನೇಹಿತ ಮುಖ್ಯರಸ್ತೆಗೆ ಬಂದು ಪೊಲೀಸರಿಗೆ ಮಾಹಿತಿ ನೀಡಿದರು. ಈ ಪ್ರಕರಣ ಸಂಬಂಧ ಸಂಜು ಆದಿವಾಸಿ ಮತ್ತು ಆತನ ಸಹಚರರಾದ ಶಿವನಾರಾಯಣ ಆದಿವಾಸಿ ಮತ್ತು ಅಕ್ಷಯ್ ಅಹಿರ್ವಾರ್ ವಿರುದ್ಧ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 64 (ಅತ್ಯಾಚಾರ), 70-1 (ಸಾಮೂಹಿಕ ಅತ್ಯಾಚಾರ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಸಂಜು ಮತ್ತು ಶಿವನಾರಾಯಣನನ್ನು ಬಂಧಿಸಲಾಗಿದ್ದು, ಅಹಿರ್ವಾರ್ ತಲೆಮರೆಸಿಕೊಂಡಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com